ಅಮ್ಚಿನಡ್ಕ ಬದ್ರಿಯಾ ಜುಮಾ ಮಸೀದಿ ವಾರ್ಷಿಕ ಮಹಾಸಭೆ

0

ಅಮ್ಚಿನಡ್ಕ ಬದ್ರಿಯಾ ಜುಮಾ ಮಸೀದಿ ವಾರ್ಷಿಕ ಮಹಾಸಭೆ

ಪುತ್ತೂರು: ಮುವಾಸತುಲ್ ಇಸ್ಲಾಂ ಜಮಾಅತ್ ಕಮಿಟಿ ಬದ್ರಿಯಾ ಜುಮಾ ಮಸೀದಿ ಅಮ್ಚಿನಡ್ಕ ಇದರ ವಾರ್ಷಿಕ ಮಹಾಸಭೆ ಮಾಡನ್ನೂರು ಜುಮಾ ಮಸೀದಿ ಖತೀಬ್ ಎಸ್.ಬಿ ಮುಹಮ್ಮದ್ ದಾರಿಮಿ ಅಧ್ಯಕ್ಷತೆಯಲ್ಲಿ ನಡೆಯಿತು.


ಸ್ಥಳೀಯ ಖತೀಬ್ ಅಬ್ದುಲ್ ರಹ್ಮಾನ್ ಫೈಝಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜಮಾಅತ್ ಅಧ್ಯಕ್ಷ ಸಿ.ಎ ಅಬ್ದುಲ್ ಖಾದರ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜೊತೆ ಕಾರ್ಯದರ್ಶಿ ಮನ್ಸೂರ್ ಅಸ್ಲಮಿ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಕೆ.ಕೆ ಅಬ್ದುಲ್ ಖಾದರ್ ಲೆಕ್ಕ ಪತ್ರ ಮಂಡಿಸಿದರು. ನಂತರ 2025-26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಇದ್ದಿನ್ ಕುಂಞಿ ಪೆರ್ಲಂಪಾಡಿ, ಉಪಾಧ್ಯಕ್ಷರಾಗಿ ಯೂಸುಫ್ ಹಾಜಿ ಅಮ್ಚಿನಡ್ಕ, ಪ್ರಧಾನ ಕಾರ್ಯದರ್ಶಿಯಾಗಿ ಮನ್ಸೂರ್ ಅಸ್ಲಮಿ ಅಮ್ಚಿನಡ್ಕ, ಜೊತೆ ಕಾರ್ಯದರ್ಶಿಗಳಾಗಿ ಕೆ.ಕೆ ಅಬ್ದುಲ್ ಖಾದರ್ ಮಳಿ, ಅಬ್ದುಲ್ ಅಝೀಝ್ ಪಿ.ಡಿ, ಕೋಶಾಧಿಕಾರಿಯಾಗಿ ಸಿ.ಎ ಅಬ್ದುಲ್ ಖಾದರ್ ಹಾಜಿಯವರನ್ನು ಆಯ್ಕೆ ಮಾಡಲಾಯಿತು. ಸದಸ್ಯರುಗಳಾಗಿ ಅಬ್ದುಲ್ ರಝಾಕ್ ಎಂ, ಅಬ್ದುಲ್ ಮಜೀದ್ ಎಂ.ಎಚ್, ಮೆಹ್ಮೂದ್ ಪಿ.ಡಿ, ಕುಂಞಹ್ಮದ್ ಎಂ, ಹಕೀಂ ಮುಸ್ಲಿಯಾರ್, ಇಸ್ಮಾಯಿಲ್ ಕೆ.ಎಂ, ಹಸೈನಾರ್ ಹಾಜಿ ಎಂ.ಎ ಹಾಗೂ ಅಬ್ದುಲ್ ಕಾದರ್ ಕೆ.ಎಂ ಮೊದಲಾದವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಮನ್ಸೂರ್ ಅಸ್ಲಮಿ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here