ಪುತ್ತೂರಿನ ವೆನ್ಯ ರೈ ಅಭಿನಯದ ʼಆರಾಟʼ 16ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ

0

ಪುತ್ತೂರು:16ನೇ ಅಂತರಾಷ್ಟ್ರೀಯ(ಏಷ್ಯಾ) ಚಲನಚಿತ್ರೋತ್ಸವಕ್ಕೆ ಪುಷ್ಪರಾಜ್‌ ರೈ ಮಲಾರಬೀಡು ನಿರ್ದೇಶನದ ʼಆರಾಟʼ ಕನ್ನಡ/ತುಳು ಸಿನೆಮಾ ಆಯ್ಕೆಯಾಗಿದೆ. ಈ ಚಿತ್ರದಲ್ಲಿ ಖ್ಯಾತ ಕಲಾವಿದ, ಚಿತ್ರನಟ ಚೇತನ್‌ ರೈ ಮಾಣಿ ಅವರ ಪುತ್ರಿ, ಪುತ್ತೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆ ವಿವೇಕಾನಂದ ಕಾಲೇಜಿನ ಅಂತಿಮ ಬಿಕಾಂ ವಿದ್ಯಾರ್ಥಿನಿ ವೆನ್ಯ ರೈ ನಾಯಕಿಯಾಗಿ ನಟಿಸಿದ್ದಾರೆ.

ಮಾ.1ರಿಂದ 8ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಈ ಚಿತ್ರೋತ್ಸವಕ್ಕೆ ಸಂತೋಷ್‌ ಮಾಡ ನಿರ್ದೇಶನದ ʼಪಿದಾಯಿʼ, ಅನೀಶ್‌ ಪೂಜಾರಿ ನಿರ್ದೇಶನದ ʼದಸ್ಕತ್‌ʼ, ಜಯನ್‌ ಚೆರಿಯನ್‌ ನಿರ್ದೇಶನದ ಕೊಂಕಣಿ ಚಿತ್ರ ʼದಮ್ಮಮ್‌ʼ ಆಯ್ಕೆಯಾಗಿದ್ದು, ಕೋಸ್ಟಲ್‌ ವುಡ್‌ ನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಇನ್ನು ಅವಿನಾಶ್‌ ವಿಜಯ್‌ ಕುಮಾರ್‌ ನಿರ್ದೇಶನದ ʼಮೈ ಹೀರೋʼ, ಸಾಗರ್‌ ಪುರಾಣಿಕ್‌ ನಿರ್ದೇಶನದ ʼವೆಂಕ್ಯʼ, ಸಾಗರ್‌ ಸೋಮಯಾಜಿ ನಿರ್ದೇಶನದ ʼ ಮರ್ಯಾದೆ ಪ್ರಶ್ನೆʼ, ಕೃಷ್ಣೇಗೌಡ ನಿರ್ದೇಶನದ ʼಲಚ್ಚಿʼ, ನವೀನ್‌ ದೇಶಬೋಯಿನಾ ನಿರ್ದೇಶನದ ʼಅಂತಿಮ ಯಾತ್ರೆʼ, ದಯಾನಂದ್‌ ಕೆ ಅವರ ʼದಡ ಸೇರದ ದೋಣಿʼ , ಸಭಾಸ್ಟಿನ್‌ ಡೇವಿಡ್‌ ಅವರ ʼಬೇಲಿ ಹೂʼ, ಗುರುರಾಜ್‌ ಅವರ ʼಕೆರೆ ಬೇಟೆʼ, ಮಹಾದೇವ ಹಡಪದ ಅವರ ʼ ಪರಜ್ಯʼ , ಮನೋಹರ್‌ ಅವರ ʼಮಿಕ್ಕ ಬಣ್ಣದ ಹಕ್ಕಿಗಳುʼ ಕನ್ನಡ ಚಿತ್ರ ಮತ್ತು ಪ್ರಕಾಶ್‌ ಕಾರ್ಯಪ್ಪ ಅವರ ಕೊಡವ ಚಿತ್ರ ʼಕಾರಗತ ಮೂಡ್‌ʼ ಆಯ್ಕೆಯಾಗಿದ್ದು, ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ.

ಇನ್ನುಳಿದಂತೆ ಸೂರಜ್‌ ಟಾಮ್‌ ನಿರ್ದೇಶನದ ʼ ವಿಶೇಷಂʼ, ಅರ್ಫಾಝ್‌ ಅಯ್ಯೂಬ್‌ ಅವರ ʼಲೆವೆಲ್‌ ಕ್ರಾಸ್‌ʼ, ಇಂದುಲಕ್ಷ್ಮೀ ಅವರ ʼ ಅಪ್ಪೂರಂʼ, ಫಾಝಿಲ್‌ ಮಹಮ್ಮದ್‌ ಅವರ ʼ ಫೆಮಿನಿಟಿ ಫಾತಿಮಾʼ, ಮಲಯಾಳಂ ಚಿತ್ರ, ಮಾರಿಸೆಲ್ವರಾಜ್‌ ನಿರ್ದೇಶನದ ʼ ವಾಳ್ಯೆʼ, ಪ್ರೇಮ್‌ ಕುಮಾರ್‌ ಅವರ ʼ ಮೇಯಳಗನ್‌ʼ, ರಾಜ್‌ ಕುಮಾರ್‌ ಪೆರಿಯಸ್ವಾಮಿ ಅವರ ʼಅಮರನ್‌, ತಮಿಳು ಚಿತ್ರಗಳು ಅಸ್ಸಾಮಿ ಚಿತ್ರ ʼರದೋರ್‌ ಸಾಕಿʼ, ಬೆಂಗಾಲಿ ಚಿತ್ರ ‌ʼಬೀಲೈನ್ ಮತ್ತು ಸಭಾʼ, ತೆಲುಗಿನ ʼ35 ಚಿನ್ನ ಕಥಾ ಕಾಡುʼ, ರಾಜಸ್ಥಾನಿ ಚಿತ್ರ ʼ ಶಾಂತಿನಿಕೇತನ್‌ʼ ಸೇರಿದಂತೆ ಹಿಂದಿಯ ಸ್ವಾಹಾ, ಮಾಂಗ್ರಜೋಗಿ, ಹ್ಯೂಮನ್ಸ್‌ ಈನ್‌ ದ ಲೂಪ್‌, ಇನ್‌ ದ ಬೆಲ್ಲಿ ಆಪ್‌ ಟೈಗರ್‌ ಚಿತ್ರಗಳು ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಭೂತಾನ್‌ ನ ʼಐ ದ ಸಾಂಗ್‌ʼ , ಕಿರ್ಗಿಝ್‌ ಗಣರಾಜ್ಯದ ‌ʼಡೀಲ್‌ ಆಟ್‌ ದ ಬಾರ್ಡರ್ʼ ,ಇರಾನ್‌ ನ ʼಇನ್‌ ದ ಲ್ಯಾಂಡ್‌ ಆಫ್‌ ಬ್ರದರ್ಸ್‌ʼ, ಇಸ್ರೇಲ್‌ ನ ʼ ರೀಡಿಂಗ್‌ ಲೋಲಿಟಿ ಇನ್‌ ಟೆಹ್ರಾನ್‌ʼ, ದಕ್ಷಿಣ ಕೊರಿಯಾದ ʼಸಿಸ್ಟರ್‌ ಯೂಜಿಂಗ್‌ʼ ,ʼವಾಟರ್‌ ಲಿಲ್ಲಿಸ್ʼ ಮತ್ತು ʼ ವೆನ್‌ ದಿಸ್‌ ಸಮ್ಮರ್‌ ಈಸ್‌ ಓವರ್‌ʼ, ಥ್ಯಾಲಾಂಡ್‌ ನ ʼ ಧಿ ಪ್ಯಾರಡೈಸ್‌ ಆಫ್‌ ಥ್ರೋನ್ಸ್‌ʼ, ಇರಾನ್‌ ನ ʼದಿಸ್‌ ಕಂಟ್ರೋಲೇಬಲ್‌ ಕ್ರೌಡ್‌ʼ, ಚಿತ್ರಗಳು ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

LEAVE A REPLY

Please enter your comment!
Please enter your name here