ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯತ್‌ವತಿಯಿಂದ ಅಳವಡಿಸಲಾದ ದಾರಿದೀಪಗಳ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ನೆಲ್ಯಾಡಿ ಗ್ರಾಮ ಪಂಚಾಯತ್‌ನ ಕಲ್ಲಚಡವು ಎಂಬಲ್ಲಿಂದ ಪಡುಬೆಟ್ಟು ಅಂಗನವಾಡಿ ತನಕ ಸುಮಾರು 2.50 ಲಕ್ಷ ರೂ.ಅನುದಾನದಲ್ಲಿ ದಾರಿದೀಪ ಅಳವಡಿಸಲಾಗಿತ್ತು. ಇದರ ಉದ್ಘಾಟನೆಯನ್ನು ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಪುಷ್ಪಾ, ಜಯಲಕ್ಷ್ಮೀಪ್ರಸಾದ್, ಪಿಡಬ್ಲ್ಯುಡಿ ಗುತ್ತಿಗೆದಾರ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ.ಸಿಬ್ಬಂದಿ ಶಿವಪ್ರಸಾದ್ ಸ್ವಾಗತಿಸಿ, ನಿರೂಪಿಸಿದರು.