ಹಿರೇಬಂಡಾಡಿ: ಉಳತ್ತೋಡಿ ಶ್ರೀ ಷಣ್ಮುಖ ದೇವಸ್ಥಾನದ ವಾರ್ಷಿಕ ಉತ್ಸವವು ಫೆ.24ರಿಂದ 26ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರ ಬಿಡುಗಡೆಯು ದೇವಸ್ಥಾನದಲ್ಲಿ ನಡೆಯಿತು.
ದೇವಸ್ಥಾನದ ಪ್ರಧಾನ ಅರ್ಚಕರಾದ ಗೋಪಾಲಕೃಷ್ಣ ತೋಳ್ಪಾಡಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಶಾಂತಿತ್ತಡ್ಡ, ಸದಸ್ಯರಾದ ಗಣೇಶ್ ಮಠಂದೂರು, ಸತೀಶ್ ಶೆಟ್ಟಿ ಪಡ್ಯೋಟ್ಟು, ನಾರಾಯಣ ಕನ್ಯಾನ, ಉತ್ಸವ ಸಮಿತಿಯ ಅಧ್ಯಕ್ಷ ನವೀನ್ ಪಡ್ಪು, ಜಗದೀಶ್ ಹಂಚಿನಮನೆ, ರುಕ್ಮಯ ಗೌಡ, ವಸಂತ ಕಜೆ, ಜಯಪ್ರಕಾಶ್, ವಿಶ್ವನಾಥ ಕೆಮ್ಮಾಟೆ ಮತ್ತಿತರರು ಉಪಸ್ಥಿತರಿದ್ದರು.