ಅಧ್ಯಕ್ಷ: ಸೋಮೇಶ್, ಉಪಾಧ್ಯಕ್ಷೆ : ಕವಿತಾ
ಹಿರೇಬಂಡಾಡಿ: ಹಿರೇಬಂಡಾಡಿ ಸರಕಾರಿ ಉನ್ನತ ಹಿ.ಪ್ರಾ.ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾಗಿ ಸೋಮೇಶ್ ಕೇಪುಳು ಹಾಗೂ ಉಪಾಧ್ಯಕ್ಷರಾಗಿ ಕವಿತಾ ಕೆ.ಆಯ್ಕೆಯಾಗಿದ್ದಾರೆ.
ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು. ಸದಸ್ಯರಾಗಿ ಜ್ಯೋತಿ ಕೊಂಬತ್ತರಕೋಡಿ, ಗಂಗಾಧರ ಎಲಿಯ, ರೋಹಿತ್ ಸರೋಳಿ, ಕೃಷ್ಣ ನೆಕ್ಕಿಲು, ಶುಭಲತಾ ಪೆರಾಬೆ, ನೆಬಿಸಾ ಹೆನ್ನಾಳ, ಆಯಿಷಾ ಹೆನ್ನಾಳ, ಯತೀಶ್ ಶೆಟ್ಟಿ ಪಡ್ಯೊಟ್ಟು, ಝಕಾರಿಯ ನಾಗನಕೋಡಿ, ಸುಧಾಕರ ಮುಡಿಪು, ಜಲೀಲ್ ಅಡಕ್ಕಲ್, ಸೀತಾ ಎಲಿಯ, ಲತಾ ಮುರಕೋಟ್ರಾಸ್, ಲೀಲಾ ಮುರಕೋಟ್ರಾಸ್, ಮಧುಶ್ರೀ ಬಾರ್ಲ, ಬೇಬಿ ಓನಡ್ಕ ಅವರನ್ನು ಆಯ್ಕೆ ಮಾಡಲಾಯಿತು.
ಗ್ರಾ.ಪಂ.ಅಧ್ಯಕ್ಷರಾದ ಸದಾನಂದ ಶೆಟ್ಟಿ ಅಡೆಕ್ಕಲ್, ಉಪಾಧ್ಯಕ್ಷೆ ಶಾಂಭವಿ ಮುರಕೋಟ್ರಾಸ್, ಸದಸ್ಯರಾದ ಚಂದ್ರಾವತಿ ನೆಹರುತೋಟ, ಶೌಕತ್ ಆಲಿ, ಉಪ್ಪಿನಂಗಡಿ ವಲಯ ಸಿಆರ್‌ಪಿ ಅಶ್ರಫ್, ಶಾಲಾ ಪ್ರಭಾರ ಮುಖ್ಯಗುರು ವಾರಿಜಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಶಿಕ್ಷಕರು, ಮಕ್ಕಳ ಪೋಷಕರು ಉಪಸ್ಥಿತರಿದ್ದರು.