ಫೆ.16: ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಆಂಡ್ ಮ್ಯಾನೇಜ್‌ಮೆಂಟ್ ಆಶ್ರಯದಲ್ಲಿ ದ್ವಿತೀಯ ಪಿ.ಯು ವಿದ್ಯಾರ್ಥಿಗಳಿಗೆ “ಶ್ರುದ್ಧಿ” ಉಚಿತ ಪರೀಕ್ಷಾ ತಯಾರಿ ಮಾಹಿತಿ ಕಾರ್ಯಾಗಾರ

0

ಪುತ್ತೂರು: ಬೆಂಗಳೂರಿನ ಖ್ಯಾತ ವಿಮಾನಯಾನ ಸಂಸ್ಥೆ ಸ್ಕೈಬರ್ಡ್ ಏವಿಯೇಷನ್ ಕಾಲೇಜಿನ ಅಧಿಕೃತ ಫ್ರಾಂಚೈಸಿ ಸಂಸ್ಥೆ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಆಂಡ್ ಮ್ಯಾನೇಜ್‌ಮೆಂಟ್ ಹಾಗೂ ಪ್ರಗತಿ ಸ್ಟಡಿ ಸೆಂಟರ್‌ ಸಹಯೋಗದಲ್ಲಿ ಪಿ.ಯು.ಸಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ವಿದ್ಯಾರ್ಥಿಗಳು 2024-25ರ ಸಾಲಿನ ಮುಂಬರುವ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕೆಂಬ ಸದುದ್ದೇಶದಿಂದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಅನುಭವಿ ಉಪನ್ಯಾಸಕರಿಂದ ಮಾರ್ಗದರ್ಶನ, ನಿರೀಕ್ಷಿತ ಪರೀಕ್ಷಾ ಪ್ರಶ್ನೆ ಮತ್ತು ಉತ್ತರಗಳ ಮಾಹಿತಿ ಕಾರ್ಯಾಗಾರ “ಶ್ರುದ್ಧಿ” ಫೆ.16ರಂದು ಜರುಗಲಿದೆ.

ನಗರದ ಎಪಿಎಮ್‌ ಸಿ ರಸ್ತೆಯ ಮಾನೈ ಆರ್ಕೇಡ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಆಂಡ್ ಮ್ಯಾನೇಜ್‌ಮೆಂಟ್ ಇಲ್ಲಿ ಪುತ್ತೂರು ಮತ್ತು ಆಸುಪಾಸಿನ ಆಸಕ್ತ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಹಕಾರಿಯಾಗುವಂತೆ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ನುರಿತ ಉಪನ್ಯಾಸಕರಿಂದ ಬೆ.10ರಿಂದ ಕಾರ್ಯಾಗಾರ ಆಯೋಜಿಸಲಾಗಿದೆ.

ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಎಂ ಅವರು ಕಾರ್ಯಾಗಾರ ಉದ್ಘಾಟಿಸಲಿದ್ದು, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಧರ್ಣಪ್ಪ ಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅಳಿಕೆ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಗಣೇಶ್ ಮೂರ್ತಿ,ನೆಹರು ನಗರ ಸುದಾನ ಪಿ.ಯು ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕಿ ರಮ್ಯಶ್ರೀ, ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ರಸಾಯನಶಾಸ್ತ್ರ ಉಪನ್ಯಾಸಕಿ ಅಶ್ವಿನಿ ,ಬಿ.ಸಿ. ರೋಡ್ ಮೌಂಟ್ ಕಾರ್ಮಾಲ್ ಪಿ.ಯು ಕಾಲೇಜಿನ ಭೌತಶಾಸ್ತ್ರ ಉಪನ್ಯಾಸಕಿ ಶೃತಿ,ಅಳಿಕೆ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕಿ ಹರಿಣಾಕ್ಷಿ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಕೆ. ಹೇಮಲತಾ (ಆಂಗ್ಲ ಭಾಷೆ), ಪ್ರಮೀಳಾ ಎನ್.ಡಿ. (ಕನ್ನಡ), ಮಾಧವಿ (ಲೆಕ್ಕಶಾಸ್ತ್ರ), ಅಬ್ದುಲ್ ನಝಿರ್ (ಅರ್ಥಶಾಸ್ತ್ರ), ಹರ್ಷಿತಾ ರೈ ( ವ್ಯವಹಾರ ಅಧ್ಯಯನ), ಸುಮಿತ್ರ ಪಿ.( ರಾಜಕೀಯ ಶಾಸ್ತ್ರ ಮತ್ತು ಸಮಾಜಶಾಸ್ತ್ರ) ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಉಪನ್ಯಾಸ ನೀಡಲಿದ್ದಾರೆ.

ಈ ಮಾಹಿತಿ ಕಾರ್ಯಾಗಾರದಲ್ಲಿ ಎಲ್ಲಾ ವಿಷಯಗಳಲ್ಲಿ ನಿರೀಕ್ಷಿತ ಪ್ರಶ್ನೆ ಮತ್ತು ಅದಕ್ಕೆ ಸರಳ ಮತ್ತು ಸುಲಭವಾಗಿ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಉಪಯುಕ್ತ ಸಲಹೆಗಳನ್ನು ನೀಡಲಾಗುವುದು.ಪರೀಕ್ಷಾ ಸಮಯ ನಿರ್ವಹಣೆ, ಮೌಲ್ಯಮಾಪನ ತಂತ್ರಗಳು ಮತ್ತು ಸ್ವಯಂ ಮೌಲ್ಯಮಾಪನದ ಕುರಿತು ಅತಿಥಿ ಉಪನ್ಯಾಸಕರು ಮಾರ್ಗದರ್ಶನ ನೀಡಲಿದ್ದಾರೆ. ಪ್ರಶ್ನೆ ಪತ್ರಿಕೆಗಳ ಅಭ್ಯಾಸದ ಮೂಲಕ ಯಶಸ್ವಿ ಫಲಿತಾಂಶಗಳನ್ನು ಸಾಧಿಸಲು ಉತ್ತಮ ಅಂಕಗಳಿಸಲು ಯೋಜನೆಯನ್ನು ರೂಪಿಸುವ ಬಗ್ಗೆ ಮಾಹಿತಿ ನೀಡುವುದಲ್ಲದೆ ಈ ಮಾಹಿತಿ ಕಾರ್ಯಾಗಾರದಲ್ಲಿ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗದ ಎಲ್ಲಾ ವಿಷಯಗಳ ಕುರಿತು ಹಾಗೂ ಗತ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಯ ಒಳನೋಟಗಳ ವಿಶ್ಲೇಷಣೆ ಮತ್ತು ಅವಲೋಕನ ನಡೆಸಲಾಗುವುದು. ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯ, ಆತಂಕ, ವಿಷಯಗಳ ಗೊಂದಲವನ್ನು ಮುಕ್ತವಾಗಿ ಉಪನ್ಯಾಸಕರ ಜೊತೆ ಚರ್ಚಿಸಲು ಅವಕಾಶವಿದ್ದು ಆಸಕ್ತ ವಿದ್ಯಾರ್ಥಿಗಳು ಈ ಉಚಿತ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳಿಗೆ ಉಚಿತವಾಗಿ ಮಧ್ಯಾಹ್ನದ ಭೊಜನದ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಶಿಬಿರವು ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್ ಆಂಡ್ ಮ್ಯಾನೇಜ್‌ಮೆಂಟ್ ಮಾನೈ ಆರ್ಕೇಡ್ ಎರಡನೇ ಮಹಡಿ, ಐಸಿಐಸಿಐ ಬ್ಯಾಂಕ್ ಕಟ್ಟಡ, ಎ.ಪಿ.ಎಂ.ಸಿ ರೋಡ್ ಪುತ್ತೂರುನಲ್ಲಿ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ವಿದ್ಯಾರ್ಥಿಗಳು ದೂರವಾಣಿ ಸಂಖ್ಯೆ : 9900109490, 8904561447 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here