ಪುತ್ತೂರು: ಶೃಂಗೇರಿಯಲ್ಲಿ ನಡೆದ ರಾಜ್ಯಮಟ್ಟದ “ಟೈಕ್ವಾಂಡೊ ಕಪ್ 2025” ಸ್ಪರ್ಧೆಯಲ್ಲಿ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ, ಒಟ್ಟು 28 ಪದಕ ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳು 12 ಚಿನ್ನ, 10 ಬೆಳ್ಳಿ ಹಾಗೂ 6 ಕಂಚು ಪದಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲಾ ತರಬೇತುದಾರ ಶಿಹಾಬ್ ಟಿ ಮಾರ್ಗದರ್ಶನ ನೀಡಿರುತ್ತಾರೆ.
ಯೂಸುಫ್ ರಾಫಿ (1ನೇ ತರಗತಿ), ಅಸ್ಬತ್ (2ನೇ ತರಗತಿ), ಅಬ್ದುಲ್ಲಾ ಯು.ಎಂ. (2ನೇ ತರಗತಿ), ಅಬೂಬಕರ್ ಯೂಸುಫ್ ಅಕ್ಮಲ್ (3ನೇ ತರಗತಿ), ಮಹಮ್ಮದ್ ಶಮೂನ್ ಅಜ್ಮಲ್ (3ನೇ ತರಗತಿ), ಮೊಹಮ್ಮದ್ ಶಮೀಮ್ (4ನೇ ತರಗತಿ), ಅಹ್ಮದ್ ತುಫೈಲ್ (4ನೇ ತರಗತಿ), ಫಾತಿಮಾ ಅಸ್ಬಾ (4ನೇ ತರಗತಿ), ಮುಹಮ್ಮದ್ ಸುಲೈಮಾನ್, ಶಾಹಲ್ (5ನೇ ತರಗತಿ), ಎ. ಮುಹಮ್ಮದ್ ಶಂಶೀರ್ (7ನೇ ತರಗತಿ), ಅಬ್ದುಲ್ಲಾ ಅಲಿ ಅಮರ್ (7ನೇ ತರಗತಿ), ಫಾತಿಮತ್ ಶಾಹಿಮಾ (5ನೇ ತರಗತಿ) ಚಿನ್ನದ ಪದಕವನ್ನು ಪಡೆದಿದ್ದಾರೆ.
ಮುಹಮ್ಮದ್ ರೈಸ್ (2ನೇ ತರಗತಿ), ಮಹಮ್ಮದ್ ಶಮೀಲ್ (2ನೇ ತರಗತಿ), ಮಹಮ್ಮದ್ ಶೌಬಾನ್ (3ನೇ ತರಗತಿ), ನೈಫ್ ಜೈನುದ್ದೀನ್ (4ನೇ ತರಗತಿ), ರಿಹಾನ್ ಅಹ್ಮದ್ (4ನೇ ತರಗತಿ), ಮುಹಮ್ಮದ್ ನಿಶಾತ್ ಉಸ್ಮಾನ್ (4ನೇ ತರಗತಿ), ಫಾತಿಮತ್ ಶಾನೂಫಾ (5ನೇ ತರಗತಿ), ಮೊಹಮ್ಮದ್ ಮಾಜಿನ್ (6ನೇ ತರಗತಿ), ಎ.ಮುಹಮ್ಮದ್ ಶಂಶೀರ್ (7ನೇ ತರಗತಿ) ಮೊಹಮ್ಮದ್ ಅಫಾನ್ (2ನೇ ತರಗತಿ) ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.
ಇನ್ನುಳಿದಂತೆ ಮುಹಮ್ಮದ್ ಸುಹಾನ್ (3ನೇ ತರಗತಿ), ಇಹಾನ್ ಅಬ್ದುಲ್ ಕಾದರ್ (6ನೇ ತರಗತಿ), ಮೊಹಮ್ಮದ್ ಮಾಜಿನ್ (6ನೇ ತರಗತಿ), ಮೊಹಮ್ಮದ್ ಶಮೀಲ್ (7ನೇ ತರಗತಿ), ಮುಹಮ್ಮದ್ ಯೂಸುಫ್ ಕೆ.ಎ (8ನೇ ತರಗತಿ), ಮಹಮ್ಮದ್ ಶಿಯಾಂ (5ನೇ ತರಗತಿ) ಕಂಚಿನ ಪದಕ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಯ ಬಗ್ಗೆ ಶಾಲೆಯ ಪ್ರಾಂಶುಪಾಲೆ ಸಂಶಾದ್ ಬೇಗಂ ಹಾಗೂ ಆಡಳಿತ ಮಂಡಳಿ ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳತ್ತ ಒಲವು ತೋರುವಂತೆ ಹಾರೈಸಿದ್ದಾರೆ.