ಅಧ್ಯಕ್ಷ: ಜಯರಾಮ ಗೌಡ, ಉಪಾಧ್ಯಕ್ಷ: ಶರೀಫ್
ಮರ್ದಾಳ: ಇಲ್ಲಿನ ಪಾಲೆತ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಂದಿನ ವರ್ಷದ ಅವಧಿಗೆ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಜಯರಾಮ ಗೌಡ ಬಸವಪಾಲು ಪುನರಾಯ್ಕೆಗೊಂಡರು. ಉಪಾಧ್ಯಕ್ಷರಾಗಿ ಶರೀಫ್ ಮರುವಂತಿಲ ಆಯ್ಕೆಯಾದರು. ಉಳಿದಂತೆ ಸದಸ್ಯರಾಗಿ ದಿನೇಶ ಪಿ., ಕುಸುಮ, ಪ್ರಸಾದ, ಭವ್ಯ, ಸರೋಜಿನಿ ಎಂ., ಶೇಷಪ್ಪ ನಾಯ್ಕ, ಮಹಮ್ಮದ್ ರಫೀಕ್, ಆಯಿಷಾ, ಆಶಾಬಿ, ತಸ್ಲೀಮಾ, ಸುಭಾಷಿಣಿ, ಸಂಧ್ಯಾ ಸುರೇಶ್, ಪರಮೇಶ್ವರ, ಹಸ್ತ, ಪ್ರಭಾಕರ ರೈ, ಸಾಯಿರಾಮ ಇವರನ್ನು ಆಯ್ಕೆ ಮಾಡಲಾಯಿತು.
ಮುಖ್ಯಗುರು ಶ್ಯಾಮಲಾ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶಾಲತಾರವರು ಎಸ್ಡಿಎಂಸಿ ರಚನೆ ಬಗ್ಗೆ ತಿಳಿಸಿದರು. ಸಂಧ್ಯಾ ಸುರೇಶ್ ಸ್ವಾಗತಿಸಿದರು. ರೇಖಾ ಎಂ.ವಂದಿಸಿದರು. ಪ್ರವೀಣ ಎಸ್.ಕೆ.ನಿರೂಪಿಸಿದರು.