ವಾರದೊಳಗೆ ಸಂಪರ್ಕ ನೀಡದಿದ್ದರೆ ಪ್ರತಿಭಟನೆ-ಸ್ಥಳೀಯರ ಎಚ್ಚರಿಕೆ
ಕಡಬ: ಕೋಡಿಂಬಾಳ ಗ್ರಾಮದ ಅಂಚಿನ ಪ್ರದೇಶಗಳಾದ ಕಲ್ಲಗಂಡಿ, ಬಾಜಿನಾಡಿ, ಕಲ್ಲಿಮಾರ್, ಮರೆಂಗೋಡಿ, ಬದಿಗುಡ್ಡೆ ಈ ಪ್ರದೇಶಗಳಿಗೆ ಕಡಬ ಪಟ್ಟಣ ಪಂಚಾಯತ್‌ನ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೂಡಲೇ ಕುಡಿಯುವ ನೀರಿನ ಸರಬರಾಜು ಮಾಡಿಕೊಡಬೇಕೆಂದು ಆ ಭಾಗದ ಸುಮಾರು 35 ಮನೆಯವರು ಆಗ್ರಹಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಒಂದೆಡೆ ಸೇರಿದ ಅಲ್ಲಿನ ನಿವಾಸಿಗಳು ನೀರು ಸರಬರಾಜು ಸಮಸ್ಯೆಯನ್ನು ಸರಿಪಡಿಸಲಿಲ್ಲ ಎಂದು ಪಟ್ಟಣ ಪಂಚಾಯತ್ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಂದಾಳು ಅಶೋಕ್ ಕುಮಾರ್ ರೈಯವರು, ಕಳೆದ 13 ವರ್ಷಗಳಿಂದ ಈ ಭಾಗದಲ್ಲಿ ನೀರಿನ ಸಂಪರ್ಕವನ್ನೇ ನೀಡಿಲ್ಲ, ಸುಮಾರು 13 ವರ್ಷಗಳ ಹಿಂದೆ ಟ್ಯಾಂಕಿ ನಿರ್ಮಿಸಿ ಕೊಳವೆ ಬಾವಿಯನ್ನು ತೆಗೆಯಲಾಗಿತ್ತು. ಕೊಳವೆಯಲ್ಲಿಯೂ ಉತ್ತಮ ನೀರು ಇತ್ತು, ಅಲ್ಲದೆ ಪೈಪ್ ಲೈನ್ ಮಾಡಿದ್ದಾರೆ. ಆದರೆ ಯಾರಿಗೂ ಸಂಪರ್ಕ ನೀಡಿಲ್ಲ, 15 ದಿನಗಳ ಹಿಂದೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ, ಅಲ್ಲದೆ ಫೆ.10ರಂದು ಕೊಳವೆ ಬಾವಿಯಲ್ಲಿದ್ದ ಪಂಪ್‌ನ್ನು ಕೂಡ ಪಟ್ಟಣ ಪಂಚಾಯತ್‌ನವರು ಕೊಂಡೊಯ್ದಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯರೊಬ್ಬರು ಪಟ್ಟಣ ಪಂಚಾಯತ್ ಇಂಜಿನಿಯರ್ ಅವರಿಗೆ ಕರೆ ಮಾಡಿದಾಗ ಇಂಜಿನಿಯರ್ ಅವರು ಉಢಾಪೆಯಾಗಿ ಮಾತನಾಡಿ, ನಾವು ತೆಗೆಯುವುದು ತೆಗೆಯುವುದೇ ಎಂದು ಹೇಳಿದ್ದಾರೆ. 13 ವರ್ಷಗಳ ಹಿಂದೆ ಜಿ.ಪಂ. ಅನುದಾನದಲ್ಲಿ ನಿರ್ಮಿಸಲಾದ ಟ್ಯಾಂಕಿಗೆ ನೀರು ಹೋಗುತ್ತದೆ, ಆದರೆ ಟ್ಯಾಂಕಿನಿಂದ ನೀರು ಹಿಂದಕ್ಕೆ ಪೈಪ್ ಮೂಲಕ ಬರುವುದಿಲ್ಲ, ಆ ನೀರು ಅರ್ಧ ಒಂದು ಗಂಟೆಯಲ್ಲಿ ಪುನಃ ಕೊಳವೆ ಬಾವಿಗೆ ಹೋಗಿ ಖಾಲಿಯಾಗುತ್ತದೆ. ಇಲ್ಲಿರುವ ಎರಡು ಕೊಳವೆ ಬಾವಿಗೆ ಒಂದು ಸಿಂಗಲ್ ಪೇಸ್, ಮತ್ತೊಂದು ತ್ರಿಫೀಸ್ ವಿದ್ಯುತ್ ಸಂಪರ್ಕ ಇದೆ. ಇದೀಗ ಎರಡು ಕೊಳವೆ ಬಾವಿಯ ಮೊಟಾರ್‌ಗಳನ್ನು ಕೊಂಡೊಯ್ದಿದ್ದಾರೆ. ಇಲ್ಲಿರುವ ವಿದ್ಯುತ್ ಸಂಪರ್ಕವನ್ನು ಬೇರೊಂದು ಕಡೆಗೆ ಸ್ಥಳಾಂತರ ಮಾಡುವ ಹುನ್ನಾರ ನಡೆಯುತ್ತಿದೆ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ. ಮೊದಲು ಗ್ರಾ.ಪಂ. ಈಗ ಪಟ್ಟಣ ಪಂಚಾಯತ್ ಆದರೂ ಇದುವರೆಗೆ ಇಲ್ಲಿ ಯೂರಿಗೂ ನೀರು ಕೊಟ್ಟಿಲ್ಲ. ಟ್ಯಾಂಕಿನಿಂದ ನೀರು ಬಾರದೆ ಇರುವುದರಿಂದ ಇಲ್ಲಿ ಯಾರೂ ಸಂಪರ್ಕ ಪಡೆದಿಲ್ಲ, ಇನ್ನೆರಡು ತಿಂಗಳಿನಲ್ಲಿ ನೀರಿನ ಅಭಾವ ಪ್ರಾರಂಭವಾಗುತ್ತದೆ, ಪಂಚಾಯತ್‌ನವರು ಈ ರೀತಿ ಮಾಡಿದರೆ ಜನರು ಏನು ಮಾಡಬೇಕು ಎಂದರು.
ನಾವು ಸಂಪರ್ಕ ಪಡೆದಿಲ್ಲ ಅದಕ್ಕಾಗಿ ಪಂಪನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಪಂಚಾಯತ್‌ನವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಮಗೆ ನೀರಿನ ಸಂಪರ್ಕ ಬೇಕು, ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇನ್ನು ಒಂದು ವಾರ ಕಾಯುತ್ತೇವೆ, ಮುಂದೆ ಪಂಚಾಯತ್ ಎದುರಿನಲ್ಲಿಯೇ ಪ್ರತಿಭಟನೆ ಮಾಡುತ್ತೇವೆ ಎಂದು ಅಶೋಕ್ ಕುಮಾರ್ ರೈಯವರು ಹೇಳಿದರು. ಸ್ಥಳೀಯರಾದ ಅಬ್ಬಾಸ್, ದಾವೂದ್, ನಾರಾಯಣ ರೈ, ಲೋಕಯ್ಯ ಗೌಡ, ಅಬೂಬಕ್ಕರ್, ಅಝೀಜ್, ಜಾನ್ಸನ್, ನಝ್‌ರತ್, ಸೀತಾರಾಮ, ಕೆ.ಪಿ.ಬಾವಚ್ಚನ್, ಪದ್ಮನಾಭ ಭಟ್, ಅಬ್ಬು ಬ್ಯಾರಿ, ಇಬ್ರಾಹಿಂ ಟಿ.ಎಚ್. ಅಹ್ಮದ್, ಸತ್ತಾರ್, ನಾವು ಸಂಪರ್ಕ ಪಡೆದಿಲ್ಲ ಅದಕ್ಕಾಗಿ ಪಂಪನ್ನು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಪಂಚಾಯತ್‌ನವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ನಮಗೆ ನೀರಿನ ಸಂಪರ್ಕ ಬೇಕು, ಪ್ರತಿ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಇನ್ನು ಒಂದು ವಾರ ಕಾಯುತ್ತೇವೆ, ಮುಂದೆ ಪಂಚಾಯತ್ ಎದುರಿನಲ್ಲಿಯೇ ಪ್ರತಿಭಟನೆ ಮಾಡುತ್ತೇವೆ ಎಂದು ಅಶೋಕ್ ಕುಮಾರ್ ರೈಯವರು ಹೇಳಿದರು. ಸ್ಥಳೀಯರಾದ ಅಬ್ಬಾಸ್, ದಾವೂದ್, ನಾರಾಯಣ ರೈ, ಲೋಕಯ್ಯ ಗೌಡ, ಅಬೂಬಕ್ಕರ್, ಅಝೀಜ್, ಜಾನ್ಸನ್, ನಝ್‌ರತ್, ಸೀತಾರಾಮ, ಕೆ.ಪಿ.ಬಾವಚ್ಚನ್, ಪದ್ಮನಾಭ ಭಟ್, ಅಬ್ಬು ಬ್ಯಾರಿ, ಇಬ್ರಾಹಿಂ ಟಿ.ಎಚ್. ಅಹ್ಮದ್, ಸತ್ತಾರ್, ಯೂಸೂಫ್
ಸೇರಿದಂತೆ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.