ಅಧ್ಯಕ್ಷರಾಗಿ ಅಬೂಬಕ್ಕರ್ ತೋಟದಮೂಲೆ, ಕಾರ್ಯದರ್ಶಿಯಾಗಿ ಕೆ ಎಂ ಹಮೀದ್ ಕೊಮ್ಮೆಮಾರ್
ಪುತ್ತೂರು: ಇತಿಹಾಸ ಪ್ರಸಿದ್ದ ಕರಾವಳಿಯ ಸೌಹಾರ್ದತೆಯ ಕೇಂದ್ರವೆಂದೇ ಪ್ರಸಿದ್ದಿ ಪಡೆದಿರುವ ಇರ್ದೆ ಪಳ್ಳಿತ್ತಡ್ಕ ದರ್ಗಾ ಶರೀಫ್ ಉರೂಸ್ ಸಮಾರಂಭ ಎ.20ರಿಂದ ಎ.26ರ ವರೆಗೆ ಅಸ್ಸಯ್ಯದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಆ ಪ್ರಯುಕ್ತ ಕೊರಿಂಗಿಲ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉರೂಸ್ ಕಮಿಟಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಅಬೂಬಕ್ಕರ್ ತೋಟದಮೂಲೆ, ಕಾರ್ಯದರ್ಶಿಯಾಗಿ ಕೆ ಎಂ ಹಮೀದ್ ಕೊಮ್ಮೆಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಾಫಿ ಕೇಕನಾಜೆ, ಅಶ್ರಫ್ ಕೆ.ಎಂ ಕೊರಿಂಗಿಲ, ಹಮೀದ್ ಎಂಪೆಕಲ್ಲು ಜೊತೆ ಕಾರ್ಯದರ್ಶಿಗಳಾಗಿ ಅಝೀಝ್ ತೋಟದಮೂಲೆ, ಅನ್ವರ್ ಕೊರಿಂಗಿಲ, ಅಶ್ರಫ್ ಗುಂಡಿಯಡ್ಕ, ಮೂಸ ಕುಂಞಿ ಕೀಲಂಪಾಡಿ ಆಯ್ಕೆಯಾದರು.
ಪ್ರಚಾರ ಸಮಿತಿ ಸದಸ್ಯರಾಗಿ ಅಲಿ ಶಾಲಾಬಳಿ, ಲತೀಫ್ ಗುಂಡ್ಯಡ್ಕ, ನೌಫಲ್ ಬೆಟ್ಟಂಪಾಡಿ, ನವಾಝ್ ತೊಟ್ಲಮೂಲೆ, ಪತ್ರಿಕಾ ಪ್ರತಿನಿಧಿಯಾಗಿ ಶಫೀಕ್ ಅಂಕತ್ತಲ ಹಾಗು 50 ಸದಸ್ಯರನ್ನೊಳಗೊಂಡ ಕಮಿಟಿಯನ್ನು ರಚಿಸಲಾಯಿತು.
ಉರೂಸ್ ಸಮಿತಿಯ ಸಲಹೆಗಾರರಾಗಿ ಜಮಾಅತ್ ಕಮಿಟಿ ಅಧ್ಯಕ್ಷ ಮಹಮ್ಮದ್ ಕುಂಞಿ ಹಾಜಿ, ಮಹಮ್ಮದ್ ಹಾಜಿ ಶಾಲಾಬಳಿ, ಆಲಿಕುಂಞಿ ಹಾಜಿ ಕೊರಿಂಗಿಲ, ಶಾಹುಲ್ ಹಮೀದ್ ಕೊರಿಂಗಿಲ, ಶಾಹುಲ್ ಹಮೀದ್ ಮುಸ್ಲಿಯಾರ್, ಮಹಮ್ಮದ್ ಹಾಜಿ ಕುಕ್ಕುವಳ್ಳಿ, ಅಬ್ದುಲ್ಲ ಮೌಲವಿ ಬೇಂಗತ್ತಡ್ಕ, ಅಬ್ದುಲ್ ಹಮೀದ್ ಕೊಮ್ಮೆಮಾರ್, ಅಬ್ದುಲ್ಲ ಹಾಜಿ ಆನಡ್ಕ, ಅಬ್ದುಲ್ಲ ನೆಕ್ಕರೆ, ಅಬ್ದುಲ್ ಕುಂಞಿ ಹಾಜಿ ಕೊರಿಂಗಿಲ ಮೊದಲಾದವರನ್ನು ಆಯ್ಕೆ ಮಾಡಲಾಯಿತು.