ಪುತ್ತೂರು: ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸವಣೂರಿನಲ್ಲಿ ನಡೆದ ಎಸ್ಪಿಎಲ್ ಕ್ರೀಡಾಕೂಟದಲ್ಲಿ ಉದ್ಯಮಿ ರಫೀಕ್ ಟಾಸ್ಕೋ ಅವರನ್ನು ಸನ್ಮಾನಿಸಲಾಯಿತು.
ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಸವಣೂರು ಸ.ಹಿ.ಪ್ರಾ.ಶಾಲಾ ಮುಖ್ಯ ಗುರು ನಿಂಗರಾಜು ಕೆ ಪಿ, ಸವಣೂರು ಗ್ರಾ.ಪಂ ಸದಸ್ಯರಾದ ರಜಾಕ್ ಕೆನರಾ, ಗಿರಿಶಂಕರ್ ಸುಲಾಯ, ರಫೀಕ್ ಎಂ ಎ, ಸವಣೂರು ಯೂತ್ ಫ್ರೆಂಡ್ ಅಧ್ಯಕ್ಷ ಶರೀಫ್ ಸಿ ಎಚ್, ಸವಣೂರು ಶಾಲಾ ಎಸ್ಡಿಎಂಸಿ ಅಧ್ಯಕ್ಷ ಅಶ್ರಫ್ ಜನತಾ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ಸೂಡಿಮುಳ್ಳು, ನ್ಯಾಯವಾದಿ ಅವಿನಾಶ್ ಬೈತಡ್ಕ, ಅಲ್ ಅನ್ಸಾರ್ ಚಾರಿಟೇಬಲ್ ಟ್ರಸ್ಟ್ನ ಮಾಜಿ ಅಧ್ಯಕ್ಷ ಯಾಕೂಬ್ ಸವಣೂರು, ಕಾನಾವು ಕನ್ಸ್ಟ್ರಕ್ಷನ್ನ ಮಾಲಕ ಇಸ್ಮಾಯಿಲ್ ಕಾನಾವು, ಸಿವಿಲ್ ಇಂಜಿನಿಯರ್ ಆಸಿಫ್ ಚಾಪಲ್ಲ, ರ್ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಿದ್ದೀಕ್ ಚಾಪಲ್ಲ ಉಪಸ್ಥಿತರಿದ್ದರು.