ಪುತ್ತೂರು ತಾಲೂಕು ಸರ್ಕಾರಿ ನೌಕರರ ಸಹಕಾರಿ ಸಂಘದ ಕಛೇರಿಯಲ್ಲಿ ಬೆಳಿಗ್ಗೆ ೧೧ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರ ಸಲ್ಲಿಕೆ
ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಬೆಳಿಗ್ಗೆ ೧೧ರಿಂದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯ ನಾಮಪತ್ರಗಳ ಪರಿಶೀಲನೆ
ಸಂಪ್ಯಾಡಿ ಅಂಗನವಾಡಿ ಕೇಂದ್ರದಲ್ಲಿ ಬೆಳಿಗ್ಗೆ ೧೧ಕ್ಕೆ ರಾಮಕುಂಜ ಗ್ರಾ.ಪಂ ೪ನೇ ವಾರ್ಡ್‌ನ ವಾರ್ಡುಸಭೆ
ಕುಂತೂರುಪದವು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಕುಂತೂರು ೨ನೇ ವಾರ್ಡ್, ಪೆರಾಬೆ ಗ್ರಾ.ಪಂ ಸಭಾಭವನದಲ್ಲಿ ಅಪರಾಹ್ನ ೩ಕ್ಕೆ ಪೆರಾಬೆ ೨ನೇ ವಾರ್ಡ್‌ನ ವಾರ್ಡುಸಭೆ
ನೆಟ್ಲಮುಡ್ನೂರು ಗ್ರಾ.ಪಂ ಕಚೇರಿಯಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಸಾಮಾನ್ಯ ಸಭೆ
ಪುತ್ತೂರು ತಾಲೂಕು ಆಡಳಿತ ಸೌಧದ ತಾಲೂಕು ಕಚೇರಿಯ ಸಭಾಭವನದಲ್ಲಿ ಬೆಳಿಗ್ಗೆ ೧೦.೩೦ಕ್ಕೆ ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ದಿನಾಚರಣಾ ಸಮಿತಿಯ ವತಿಯಿಂದ ಶ್ರೀ ಸಂತ ಸೇವಾಲಾಲ್ ಜಯಂತಿ ದಿನಾಚರಣೆ
ಪುತ್ತೂರು ಭಗವಾನ್ ಶ್ರೀ ಶಾಂತಿನಾಥ ಸ್ವಾಮಿ ಬಸದಿಯಲ್ಲಿ ಬೆಳಿಗ್ಗೆ ೮ರಿಂದ ಆರಾಧನಾ ಪೂರ್ವಕ ಶ್ರೀ ಕ್ಷೇತ್ರಪಾಲ ದೇವರ, ಶ್ರೀ ನಾಗದೇವರ ಪ್ರತಿಷ್ಠೆ, ಶ್ರೀಗಳವರ ಪಾದ ಪೂಜೆ, ತೋರಣ ವಿಸರ್ಜನ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಅಪರಾಹ್ನ ೩ಕ್ಕೆ ಪುತ್ತೂರು ಗಾನಸಿರಿ ಕಲಾ ಕೇಂದ್ರದಿಂದ ಗಾನಸಿರಿ ಪುತ್ತೂರು ಸಂಗೀತ ಹಬ್ಬ ಉದ್ಘಾಟನೆ, ೩.೧೫ರಿಂದ ಗಾನಸಿರಿ ಚಿಣ್ಣರ ಸಂಗೀತ ಹಬ್ಬ
ಪುತ್ತೂರು ಹಾರಾಡಿ ನಂದಿಲ ಮನೆಯಲ್ಲಿ ಬೆಳಿಗ್ಗೆ ೯ಕ್ಕೆ ಗಣಪತಿ ಹೋಮ, ಸಂಜೆ ೬ರಿಂದ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ೯ಕ್ಕೆ ಭಂಡಾರ ತೆಗೆದು ಶ್ರೀ ಕಲ್ಲುರ್ಟಿ ದೈವದ ನೇಮ
ಸಂಪ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಸಂಜೆ ೫ರಿಂದ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ (ಕೆಂಡಸೇವೆ)
ಪಾಂಗ್ಲಾಯಿ ಶ್ರೀ ಶಾಂತಾದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ೮ರಿಂದ ಗಣಪತಿ ಹವನ, ನವಕ ಕಲಶಾಭಿಷೇಕ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ೬ರಿಂದ ದೀಪಾರಾಧನೆ, ರಂಗಪೂಜೆ, ರಾತ್ರಿ ೧೦ರಿಂದ ಕಲ್ಲುರ್ಟಿ, ಗುಳಿಗ ದೈವಗಳ ಕೋಲ
ಬನ್ನೂರು ಕರ್ಮಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬೆಳಿಗ್ಗೆ ೧೦ಕ್ಕೆ ಜಾತ್ರೋತ್ಸವದ ಗೊನೆ ಮುಹೂರ್ತ
ವೀರಮಂಗಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬೆಳಿಗ್ಗೆ ಗಣಹೋಮ, ಸೀಯಾಳಾಭಿಷೇಕ, ಪವಮಾನಾಭಿಷೇಕ, ನವಕ ಕಲಶಾಭಿಷೇಕ, ಭಜನೆ, ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ದೈವಗಳ ಭಂಡಾರ ತೆಗೆಯುವುದು, ದಾಸ ಸಂಕೀರ್ತನೆ, ಭರತನಾಟ್ಯ, ರಾತ್ರಿ ದೇವರ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಅನ್ನಸಂತರ್ಪಣೆ, ಉಳ್ಳಾಕುಲು, ಹುಲಿಭೂತ, ಕೊಡಮಣಿತ್ತಾಯ, ಅಂಙಣ ಪಂಜುರ್ಲಿ ದೈವಗಳ ನೇಮ
ವಿಟ್ಲ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಬೆಳಿಗ್ಗೆ ೯.೨೫ಕ್ಕೆ ಜನ್ಮಕಲ್ಯಾಣ ಅಷ್ಟದಿಕ್ಷು ಧಾಮ ಸಂಪ್ರೋಕ್ಷಣೆ, ಚತುರ್ದಿಕ್ಷು ಹೋಮ, ಗ್ರಹಯಜ್ಞ ವಿಧಾನ, ಜಲಾಗ್ನಿ ಹೋಮ, ಪಾಂಡುಕಾಶಿಲೋಪರಿ ೧೦೮ ಕಲಶಗಳಿಂದ ಜಿನಬಾಲಕನ ಜನ್ಮಾಭಿಷೇಕ, ನಾಮಕರಣ, ಬಾಲಲೀಲಾ ಮಹೋತ್ಸವ, ಅಪರಾಹ್ನ ೨ರಿಂದ ರಾಜ್ಯಾಭಿಷೇಕ, ಸಂಜೆ ೫.೨೫ಕ್ಕೆ ದೀಕ್ಷಾ ವಿಧಿ, ಪರಿನಿಷ್ಕ್ರಮಣ ಕಲ್ಯಾಣ, ೨೮ ಕಲಶ ಅಭಿಷೇಕ, ಮಹಾಪೂಜೆ, ೫.೩೦ರಿಂದ ಸಭಾ ಕಾರ್ಯಕ್ರಮ, ರಾತ್ರಿ ೭ರಿಂದ ಸಾಂಸ್ಕೃತಿಕ ಕಾರ್ಯಕ್ರಮ
ಟಿಅರ್ಕ ಶ್ರೀ ಗುಳಿಗ ಕೊರಗಜ್ಜ ಕ್ಷೇತ್ರದಲ್ಲಿ ಬೆಳಿಗ್ಗೆ ೯ರಿಂದ ಮಹಾಗಣಪತಿ ಹೋಮ, ಸ್ಥಳಶುದ್ಧಿ, ದೈವಗಳಿಗೆ ಪರ್ವ, ರಾತ್ರಿ ೭ಕ್ಕೆ ಗುಳಿಗ ದೈವದ ನೇಮ, ಅನ್ನಸಂತರ್ಪಣೆ, ೯ರಿಂದ ಕೊರಗಜ್ಜ ದೈವದ ನೇಮ
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ಗೊನೆ ಕಡಿಯುವುದು
ಬೆಟ್ಟಂಪಾಡಿ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ೨೪ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಬೆಳಿಗ್ಗೆ ೭.೩೦ರಿಂದ ಶ್ರೀ ಗಣಪತಿ ಹೋಮ, ೧೦.೩೦ರಿಂದ ಭಜನೆ, ಸಂಜೆ ೪.೩೦ರಿಂದ ಭಜನಾ ಮಂಗಲೋತ್ಸವ, ೫ರಿಂದ ಶ್ರೀ ಸತ್ಯನಾರಾಯಣ ಪೂಜೆ, ಕುಣಿತ ಭಜನೆ, ರಾತ್ರಿ ೮.೩೦ರಿಂದ ಸಭಾ ಕಾರ್ಯಕ್ರಮ
ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರೆಗೆ ಗೊನೆ ಮುಹೂರ್ತ
ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ೮.೩೦ರಿಂದ ಶ್ರೀ ಶಿರಾಡಿ, ರುದ್ರಚಾಮುಂಡಿ, ಕಲೆಂಬಿತ್ತಾಯ, ಗಿಳಿರಾಮ, ಗುಳಿಗ ದೈವಗಳ ನೇಮ
ಪುಣ್ಚಪ್ಪಾಡಿ ಸಾರಕರೆ ಬೀಡು ಶ್ರೀ ಧರ್ಮಅರಸು ಉಳ್ಳಾಕುಲು ದೈವಸ್ಥಾನದಲ್ಲಿ ಬೆಳಿಗ್ಗೆ ೯ರಿಂದ ಶ್ರೀ ಗಣಪತಿ ಹೋಮ, ನಾಗತಂಬಿಲ, ಗೊನೆ ಕೆಡಿಯುವುದು, ದೈವಗಳ ತಂಬಿಲ, ಬೊಟ್ಟಿ ಭೂತ ತಂಬಿಲ, ಸಂಜೆ ೪ಕ್ಕೆ ಹಸಿರುವಾಣಿ ಮೆರವಣಿಗೆ ನೇರೋಳ್ತಡ್ಕದಿಂದ ಕಲ್ಲ ಮಾಡದವರೆಗೆ, ೫.೩೦ರಿಂದ ಶ್ರೀ ದುರ್ಗಾ ನಮಸ್ಕಾರ ಪೂಜೆ, ಭಜನೆ, ರಾತ್ರಿ ೭ರಿಂದ ಶ್ರೀ ಧರ್ಮಅರಸು ಉಳ್ಳಾಕುಲು, ಪರಿವಾರ ದೈವಗಳ ಕಿರುವಾಳು ಭಂಡಾರ ಮೂಲಸ್ಥಾನದಿಂದ ಕಲ್ಲಮಾಡಕ್ಕೆ ಬರುವುದು, ೭.೧೫ರಿಂದ ಸಾರಕರೆ ಬೆಡಿ
ಕಾಮಣ ಕೃಷ್ಣಾಪುರ ಜೋಕಾಲಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ ೧೧ಕ್ಕೆ ಜೋಕಾಲಿ ಬಳಗದ ಬೆಳ್ಳಿಹಬ್ಬದ ಪ್ರಯುಕ್ತ ಪ್ರೋ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ
ಸವಣೂರು ಗ್ರಾಮದ ಆರೇಲ್ತಡಿ ಕೆಡೆಂಜಿ ಮನೆಯಲ್ಲಿ ರಾತ್ರಿ ೮ರಿಂದ ೬ನೇ ವರ್ಷದ ಶ್ರೀ ಕೊರಗಜ್ಜ ದೈವದ ನೇಮೋತ್ಸವ
ತಿಂಗಳಾಡಿ ಶ್ರೀ ಕ್ಷೇತ್ರ ದೇವಗಿರಿಯಲ್ಲಿ ಶ್ರೀ ಕೃಷ್ಣ ಮಿತ್ರವೃಂದದಿಂದ ಸಂಜೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ, ಸಾಂಸ್ಕೃತಿಕ ವೈಭವ, ಅನ್ನಸಂತರ್ಪಣೆ, ರಾತ್ರಿ ೮.೩೦ರಿಂದ ಧಾರ್ಮಿಕ ಸಭೆ, ೯.೩೦ರಿಂದ ತನಿಯಜ್ಜೆ ತುಳು ನಾಟಕ
ಕುಂಬ್ರ ಸಮೃದ್ಧಿ ನಿಲಯದಲ್ಲಿ ಸಂಜೆ ೬ರಿಂದ ಶ್ರೀ ಕೊರಗಜ್ಜ ದೈವದ ನೇಮೋತ್ಸವ
ನಿಡ್ಪಳ್ಳಿ ಶಾಂತಾದುರ್ಗಾ ದೇವಸ್ಥಾನದ ವಠಾರದಲ್ಲಿ ನಿಡ್ಪಳ್ಳಿ ಮುರಳಿ ಅಣ್ಣ ಅಭಿಮಾನಿ ಬಳಗದಿಂದ ಮ್ಯಾಟ್ ಅಂಕಣದ ಹೊನಲು ಬೆಳಕಿನ ಮುಕ್ತ ಕಬಡ್ಡಿ ಪಂದ್ಯಾಟ
ಗಾಳಿಮುಖ ಪುದಿಯವಳಪ್ಪು ಮಖಾವಿನ ಎದುರುಗಡೆ ಖಿಳರ್ ಮೈದಾನದಲ್ಲಿ ರಾತ್ರಿ ಮಖಾಂ ಉರೂಸ್ ಸಮಾರೋಪ
ನೂಜಿಬಾಳ್ತಿಲ ಗ್ರಾಮ ಶ್ರೀ ಹುಲಿಚಾಮುಂಡಿ, ಪರಿವಾರ ದೈವಗಳ ದೈವಸ್ಥಾನ ಕಾರಣಿಕ ಕ್ಷೇತ್ರ ಬದಿಬಾಗಿಲಿನಲ್ಲಿ ಬೆಳಿಗ್ಗೆ ೭.೩೦ರಿಂದ ಗಣಪತಿ ಹವನ, ಕಲಶಾಭಿಷೇಕ, ತಂಬಿಲ ಸೇವೆ, ರಾತ್ರಿ ೮ರಿಂದ ಹುಲಿಚಾಮುಂಡಿ ದೈವದ ನೇಮೋತ್ಸವ, ೧೦.೩೦ರಿಂದ ಕಾಡೆತ್ತಿ ಪಂಜುರ್ಲಿ ದೈವಗಳ ನೇಮೋತ್ಸವ, ಗುಳಿಗ ದೈವದ ನೇಮೋತ್ಸವ
ಕಾಣಿಯೂರು ಹಿ.ಪ್ರಾ. ಶಾಲೆಯಲ್ಲಿ ಬೆಳಿಗ್ಗೆ ೧೦ರಿಂದ ಮೆಟ್ರಿಕ್ ಮೇಳ
ವೈಕುಂಠ ಸಮಾರಾಧನೆ
ಕೊಂಬೆಟ್ಟು ದ್ರಾವಿಡ ಬ್ರಾಹ್ಮಣರ ಹಾಸ್ಟೆಲ್‌ನಲ್ಲಿ ಹಾರಾಡಿ ಕೆ. ನರಸಿಂಹ ಭಟ್ಟರ ವೈಕುಂಠ ಸಮಾರಾಧನೆ
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಮುದಾಯ ಭವನದಲ್ಲಿ ಮಧ್ಯಾಹ್ನ ೧೨.೩೦ಕ್ಕೆ ಪುತ್ತೂರು ಚೇತನ್ ಕುಮಾರ್‌ರವರ ಉತ್ತರಕ್ರಿಯೆ