ಅರಿಯಡ್ಕ: ಸ.ಹಿ.ಪ್ರಾ.ಶಾಲೆ ಪಾಪೆಮಜಲು ಇದರ 2025-2026ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಗಳ ಆಂದೋಲನಕ್ಕೆ ಫೆ.14 ರಂದು ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ ದೀಪ ಬೆಳಗಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಈ ವಿದ್ಯಾಸಂಸ್ಥೆ ಸರ್ವ ವಿಧದಲ್ಲೂ ಅಭಿವೃದ್ಧಿ ಹೊಂದಿ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಚಾರ. ಪ್ರಸ್ತುತ ಎಲ್.ಕೆ.ಜಿ, ಹಾಗೂ ಯು.ಕೆ.ಜಿ. ತರಗತಿ ಆರಂಭಿಸುತ್ತಿರುವುದು ಸಂತಸದ ವಿಚಾರ. ಗ್ರಾಮ ಪಂಚಾಯತ್ ವತಿಯಿಂದ ಈ ಒಳ್ಳೆಯ ಕಾರ್ಯಕ್ಕೆ ಸರ್ವರೀತಿಯ ಸಹಕಾರ ನೀಡಲಿದ್ದೇವೆ ಎಂದು ಶುಭ ಹಾರೈಸಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಅಪ್ಪಯ್ಯ ನಾಯ್ಕ ಬಪ್ಪುಂಡೇಲು ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಅನೇಕ ವರ್ಷಗಳ ಬೇಡಿಕೆ ಹಾಗೂ ಕನಸು ನನಸಾಗಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಸಿಗುವಂತಾಗಿದೆ. ಶಾಲೆಯ ಸರ್ವತೋಭಿವೃದ್ದಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಪ್ರಾಸ್ತಾವಿಕವಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಎಂ ರವರು ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯಲ್ಲಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಪ್ರಾರಂಭಿಸುವ ಹಿಂದಿನ ಯೋಜನೆ, ಯೋಜನೆಯ ಮಾಹಿತಿ ನೀಡಿ ಈ ಶುಭ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ನಯನ ಬಳ್ಳಿಕಾನ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿಯರಾದ ಮೇಬಲ್ ಡಿಸೋಜ, ರಜನಿ ಕೆ.ಆರ್, ಸ್ವಾತಿ ಕೆ.ಜೆ, ಕುಸುಮ ಮರತ್ತಮೂಲೆ, ಎಲ್.ಕೆ.ಜಿ, ಯು.ಕೆ.ಜಿ ಪುಟಾಣಿಗಳು, ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಶಿಕ್ಷಕಿ ಜಯಲತಾ ಸ್ವಾಗತಿಸಿ, ಶಿಕ್ಷಕಿ ಪುಷ್ಪಾವತಿ ವಂದಿಸಿದರು. ಶಿಕ್ಷಕ ಕಿರಣ್ ರಾಜ್ ನಿರೂಪಿಸಿದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆಂಗ್ಲ ಮಾಧ್ಯಮ ಕಲಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಮ್ಮ ವಿದ್ಯಾ ಸಂಸ್ಥೆಯಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ತರಗತಿಯನ್ನು ಆರಂಭ ಮಾಡಲು ಉದ್ದೆಶಿಸಲಾಗಿದೆ. ಇದಕ್ಕೆ ಎಸ್.ಡಿ.ಎಂ.ಸಿ, ಪೋಷಕರ ಹಾಗೂ ಊರವರ ಸಹಕಾರವನ್ನು ಬಯಸುತ್ತೇನೆ.
ಶಶಿಕಲಾ ಎಂ, ಮುಖ್ಯೋಪಾಧ್ಯಾಯಿನಿ