ಸವಣೂರು ಸೀತಾರಾಮ ರೈ ನಿವಾಸದಲ್ಲಿ “ಸ್ನೇಹ ರಶ್ಮಿ” ಇಂಟರ್ ಕ್ಲಬ್ ಫೆಲೋಶಿಫ್ ಮೀಟ್

0


ಪುತ್ತೂರು: ರೋಟರಿ ಕ್ಲಬ್ ಸುಳ್ಯ, ಸುಳ್ಯ ಸಿಟಿ, ಸುಬ್ರಹ್ಮಣ್ಯ, ಬೆಳ್ಳಾರೆ, ಪುತ್ತೂರು, ಪುತ್ತೂರು ಎಲೈಟ್, ಸುಳ್ಯ ಲಯನ್ಸ್ ಕ್ಲಬ್ ಹಾಗೂ ಇನ್ನರ್ ವೀಲ್ ಕ್ಲಬ್ ಇವರ ಭಾಗವಹಿಸುವಿಕೆಯಲ್ಲಿ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರ ಅತಿಥ್ಯದಲ್ಲಿ ಫೆ. 15 ರಂದು ಸವಣೂರು ಸೀತಾರಾಮ ರೈಯವರ ರಶ್ಮಿ ನಿವಾಸದಲ್ಲಿ” ಸ್ನೇಹ ರಶ್ಮಿ” ಇಂಟರ್ ಕ್ಲಬ್ ಫೆಲೋಶಿಫ್ ಮೀಟ್ ಕಾರ‍್ಯಕ್ರಮ ನಡೆಯಿತು.

ಲಯನ್ಸ್ ಜಿಲ್ಲಾ ಗವರ್ನರ್ ವಿಕ್ರಮ್ ದತ್ತರವರು ಕಾರ‍್ಯಕ್ರಮ ಉದ್ಘಾಟಿಸಿದರು. ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಯೋಗೀತಾ ಗೋಪಿನಾಥ್‌ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲಯನ್ಸ್ ಬಿ.ಎಂ, ಭಾರತಿ, ಲಯನ್ಸ್ ಆಸಿಸ್ಟೆಂಟ್ ಗವರ್ನರ್ ವಿನಯ ಕುಮಾರ್ ಕೆ, ರೋಟರಿ ಸುಳ್ಯ ಅಧ್ಯಕ್ಷ ಶಿವಪ್ರಸಾದ್, ರೋಟರಿ ಸುಬ್ರಹ್ಮಣ್ಯ ಅಧ್ಯಕ್ಷ ಚಂದ್ರಶೇಖರ್ ನಾಯರ್, ರೋಟರಿ ಬೆಳ್ಳಾರೆ ಅಧ್ಯಕ್ಷ ಚಂದ್ರಶೇಖರ್ ರೈ, ರೋಟರಿ ಎಲೈಟ್ ಪುತ್ತೂರು ಅಧ್ಯಕ್ಷ ಆಶ್ವಿನ್ ಎಲ್ ಶೆಟ್ಟಿ, ರೋಟರಿ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಲಯನ್ಸ್ ರಾಮಕೃಷ್ಣ ರೈ, ಸುಳ್ಯ ಇನ್ನರ್‌ವೀಲ್ ಅಧ್ಯಕ್ಷೆ ಚೇತನಾ ಸುಬ್ರಹ್ಮಣ್ಯ ಹಾಗೂ ರೋಟರಿ ಕ್ಲಬ್‌ನ ಕಾರ‍್ಯದರ್ಶಿಗಳು ಉಪಸ್ಥಿತರಿದ್ದರು.


ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು, ಕಸ್ತೂರಿ ಕಲಾ ಎಸ್ ರೈ, ಅಶ್ವಿನ್ ಎಲ್ ಶೆಟ್ಟಿ, ರಶ್ಮಿ ಆಶ್ವಿನ್ ಶೆಟ್ಟಿ ಅತಿಥಿಗಳನ್ನು ಗೌರವಿಸಿದರು. ಜಯಪ್ರಕಾಶ್ ರೈ ಸುಳ್ಯ ವಂದಿಸಿದರು.ಅಖಿಲಾ ನೆಕ್ರಾಜೆ ಪ್ರಾರ್ಥನೆಗೈದರು. ಹೇಮಾ ಜಯರಾಮ್ ರೈ ಹಾಗೂ ಚಂದ್ರಾವತಿ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here