ಪುತ್ತೂರು ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಉಪಾಧ್ಯಕ್ಷ ಕೆ. ಶಂಕರ್ ನಾೖಕ್‌ ನಿಧನ

0

ಪುತ್ತೂರು: ಪುತ್ತೂರು ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಸವಣೂರು ಮೆದು ಕುರುವೈಲು ನಿವಾಸಿ ಕೆ ಶಂಕರ್ ನಾೖಕ್‌ (85ವ) ರವರು ಫೆ.16 ರಂದು ರಾತ್ರಿ ನಿಧನರಾದರು.
ಕೆ.ಶಂಕರ್ ನಾೖಕ್‌ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ರಾತ್ರಿ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆ ತರಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ನಿಧನರಾದರು.

ನಿವೃತ್ತ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿಯಾಗಿದ್ದ ಅವರು ಪುತ್ತೂರಿನಲ್ಲಿ ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಮುಖ್ಯಪ್ರವರ್ತಕರಾಗಿದ್ದರು. ಪುತ್ತೂರು ಆದರ್ಶ ವಿವಿಧೋದ್ದೇಶ ಸಹಕಾರಿ ಸಂಘ ಮತ್ತು ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕಾರಗಿಯೂ ಸೇವೆ ಸಲ್ಲಿಸಿದ ಅವರು ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾಗಿದ್ದರು.

ಮೃತರು ಪತ್ನಿ ಸರೋಜ, ಪುತ್ರ ಪಿಡಬ್ಲ್ಯುಡಿ ಕ್ಲಾಸ್ 1 ಗುತ್ತಿಗೆದಾರ ಗಿರೀಶ್ ಕೆ.ಎಸ್, ಪುತ್ರಿ ಸವಿತಾ ಕೆ.ಎಸ್, ಸೊಸೆ ರಂಜಿತಾ ಗಿರೀಶ್, ಅಳಿಯ ಪ್ರಶಾಂತ್, ಮೊಮ್ಮಕ್ಕಳಾದ ನಿನಾದ, ಲಹರಿ, ಪ್ರತೋಷ್, ಪ್ರಾಜಕ್ತ ಅವರನ್ನು ಅಗಲಿದ್ದಾರೆ. ಕೆ.ಶಂಕರ್ ನಾಕ್ ಅವರು ಚಾನೆಲ್ ವರದಿಗಾರ ಉಮಾಶಂಕರ್ ಅವರ ಮಾವ.

LEAVE A REPLY

Please enter your comment!
Please enter your name here