ಪುತ್ತೂರು: ಇರ್ದೆ ಉಪ್ಪಳಿಗೆ ಶ್ರೀ ವಿಷ್ಣು ಬಯಲಾಟ ಸೇವಾ ಸಮಿತಿ ಇದರ 9ನೇ ವರ್ಷದ ಸೇವೆಯಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಶ್ರೀದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟವು ಫೆ.18ರಂದು ಸಂಜೆ ಉಪ್ಪಳಿಗೆ ವಠಾರದಲ್ಲಿ ನಡೆಯಲಿದೆ.
ಸಂಜೆ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಿಂದ ಅಪರಾಹ್ನ 2.30ಕ್ಕೆ ಶ್ರೀದೇವಿಯ ವೈಭವದ ಶೋಭಾಯಾತ್ರೆ ನಡೆಯಲಿದೆ. ಸಂಜೆ 5.45ಕ್ಕೆ ಚೌಕಿಪೂಜೆ ನಡೆದ ಬಳಿಕ ಯಕ್ಷಗಾನ ಪ್ರಾರಂಭಗೊಳ್ಳಲಿದೆ. ರಾತ್ರಿ 8.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಬಯಲಾಟ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.