ಬಡವರನ್ನು ಜೋಡಿಸುವ ಕೆಲಸ ಯುವಕರಿಂದ ಆಗಬೇಕು- ಅಶೋಕ್ ಕುಮಾರ್ ರೈ
ನಿಡ್ಪಳ್ಳಿ; ಯುವಕರಿಗೆ ಸಂಘಟನೆ ಮಾಡುವ ಮೂಲಕ ಜವಾಬ್ದಾರಿ ಹೆಚ್ಚಿದೆ.ಹಣ ನೀಡುವುದು ಮಾತ್ರ ಸಹಾಯ ಅಲ್ಲ. ಉತ್ತಮ ಸಮಾಜಮುಖಿ ಕೆಲಸ ಮಾಡಿ ಅಸಹಾಯಕರಿಗೆ ಸಹಾಯ ಮಾಡುವ ಮೂಲಕ ಬಡವರನ್ನು ಜೋಡಿಸುವ ಕೆಲಸ ಯುವಕರಿಂದ ಆಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಮುರಳಿ ಅಣ್ಣ ಅಭಿಮಾನಿ ಬಳಗ- ನಿಡ್ಪಳ್ಳಿ ಇದರ ಆಶ್ರಯದಲ್ಲಿ ತಾಲೂಕು ಅಮೆಚೂರು ಅಸೋಸಿಯೇಷನ್ ಇದರ ಸಹಭಾಗಿತ್ವದಲ್ಲಿ ದಿ.ಮುರಳೀಕೃಷ್ಣ ಭಟ್ ಮುಂಡೂರು ನಿಡ್ಪಳ್ಳಿ ಇವರ ಸ್ಮರಣಾರ್ಥ ಪೆ.15 ರಂದು ಶ್ರೀ ಶಾಂತದುರ್ಗಾ ದೇವಸ್ಥಾನದ ವಠಾರದಲ್ಲಿ ನಡೆದ ಮ್ಯಾಟ್ ಅಂಕಣದ ಹೊನಲು ಬೆಳಕಿನ 60 ಕೆ.ಜಿ ವಿಭಾಗ ಮತ್ತು ಮುಕ್ತ ಕಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಪಕ್ಷ ಬೇದ ಮರೆತು ಸಮಾಜದ ಅಭಿವೃದ್ಧಿಯಲ್ಲಿ ನಿಮ್ಮೊಂದಿಗೆ ನಾನು ಸಹಕಾರ ನೀಡುತ್ತೇನೆ.ಇಂತಹ ಕಾರ್ಯಕ್ರಮ ಮಾಡುವುದರೊಂದಿಗೆ ಸಮಾಜವನ್ನು ಒಗ್ಗೂಡಿಸುವ ಕೆಲಸ ಅಗುತ್ತದೆ. ನಿಡ್ಪಳ್ಳಿಗೆ ಕಬಡ್ಡಿ ಮ್ಯಾಟ್ ನೀಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು. ನಿಡ್ಪಳ್ಳಿ ಗ್ರಾಮಕ್ಕೆ ನೀಡಿದ ಅನುದಾನದ ಬಗ್ಗೆ ವಿವರಿಸಿದ ಅವರು ಸಹಕಾರ ನೀಡಿದ ನನ್ನ ನೆನಪು ಕೂಡ ಎಲ್ಲರಿಗೂ ಇರಲಿ ಎಂದು ಹೇಳಿದ ಅವರು ಮುರಳೀಕೃಷ್ಣ ಭಟ್ ದೇವಸ್ಥಾನದ ಬ್ರಹ್ಮಕಲಶದ ಸಂದರ್ಭದಲ್ಲಿ ನೀಡಿದ ಸೇವೆಯನ್ನು ನೆನಪಿಸಿ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಅತಿಥಿಗಳಾದ ನಿಡ್ಪಳ್ಳಿ ಚರ್ಚ್ ಧರ್ಮಗುರು ರೇ. ಪಾದರ್ ಜೆಸನ್ ಲೋಬೋ ಮಾತನಾಡಿ, ಕಬಡ್ಡಿ ಸ್ಪರ್ಧೆ ನಮ್ಮ ಸಂಸ್ಕ್ರತಿಯ ಒಂದು ಭಾಗ.ಕ್ರೀಡೆ ನಮ್ಮ ಆರೋಗ್ಯ ಮತ್ತು ಮನಸ್ಸನ್ನು ಸ್ವಚ್ಚವಾಗಿಡಬಹುದು. ಆ ಕೆಲಸ ಇಲ್ಲಿ ನಡೆದಿದ್ದು ಬಹಳ ಉತ್ತಮ ಕಾರ್ಯ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭ ಕೋರಿದರು.
ನಿಡ್ಪಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಾತನಾಡಿ, ಮುರಳೀಕೃಷ್ಣ ಅವರು ಒಬ್ಬ ಸರಳ ಸಜ್ಜನಿಕೆಯ ವ್ಯಕ್ತಿಯಾಗಿ ಪಂಚಾಯತ್ ಸದಸ್ಯರಾಗಿ ಬಹಳ ಕ್ರೀಯಾ ಶೀಲ ವ್ಯಕ್ತಿಯಾಗಿದ್ದರು. ಆದರೆ ಸಣ್ಣ ಪ್ರಾಯದಲ್ಲಿ ನಮ್ಮನ್ನಗಲಿದ್ದು ಬಹಳ ದುಖ: ತಂದಿದೆ. ಅವರ ಸವಿನೆನಪಿಗಾಗಿ ಅವರು ಮುತುವರ್ಜಿಯಿಂದ ರಚಿಸಿದ ಕೂಟೇಲು ಶಾಲಾ ರಸ್ತೆಗೆ ಅವರ ಹೆಸರನ್ನು ಇಡುವ ಕೆಲಸ ಪಂಚಾಯತ್ ಮಾಡಿದೆ ಎಂದು ಹೇಳಿದರು.
ರಾಜ್ಯ ಬಿ.ಜೆ.ಪಿ ಒಬಿಸಿ ಮೋರ್ಚಾ ಕಾರ್ಯದರ್ಶಿ ಅರ್.ಸಿ.ನಾರಾಯಣ ರೆಂಜ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಸತೀಶ್ ರೈ ಕಟ್ಟಾವು, ಯುವ ಉದ್ಯಮಿ ಜನಾರ್ಧನ ಪೂಜಾರಿ ಪದಡ್ಕ, ಕರ್ನಪ್ಪಾಡಿ ಬ್ರಹ್ಮ ಬೈದರ್ಕಳ ಗರಡಿ ಅಧ್ಯಕ್ಷ ಶಿವಪ್ಪ ಪೂಜಾರಿ ನುಳಿಯಾಲು, ಪಾಣಾಜೆ ಸಿ.ಎ.ಬ್ಯಾಂಕ್ ಅಧ್ಯಕ್ಷ ಪದ್ಮನಾಭ ಬೋರ್ಕರ್, ಪ್ರಗತಿಪರ ಕೃಷಿಕ ಶ್ರೀನಿವಾಸ ಭಟ್ ಚಂದುಕೂಡ್ಲು, ತಾಲೂಕು ಬಜರಂಗದಳ ವಿದ್ಯಾರ್ಥಿ ಪ್ರಮುಖ್ ವೈಶಾಖ್ ಮಾತನಾಡಿ, ಮುರಳೀಕೃಷ್ಣ ಭಟ್ ರವರ ಸವಿನೆನಪಿಗಾಗಿ ಅವರ ಅಭಿಮಾನಿ ಬಳಗ ಅಯೋಜಿಸಿದ ಕಬಡ್ಡಿ ಪಂದ್ಯಾಟದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಶುಭ ಹಾರೈಸಿದರು.
ಶ್ರೀ ಶಾಂತದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಗೌರವಾಧ್ಯಕ್ಷ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು ಇವರು ಅಧ್ಯಕ್ಷತೆ ವಹಿಸಿ ಮಾತನಾಡಿ ಮುರಳೀಕೃಷ್ಣ ಭಟ್ ಯುವಕರ ಸಂಘಟನೆ ಮೂಲಕ ಜನಪರ ಕೆಲಸ ಮಾಡಿದವರು.ಬ್ರಹ್ಮಕಲಶ, ಜಾತ್ರೆ ಸಮಯದಲ್ಲಿ ಉತ್ತಮ ಸೇವೆ ನೀಡುದವರು. ಮುಂಡೂರು ದೇವರ ಜೀರ್ಣೋದ್ಧಾರ ಆಗಬೇಕು ಎಂದು ಆಶೆ ಪಟ್ಟಿದ್ದರು.ಅವರ ಆಶೆ ಈಡೇರಿಸುವ ಕೆಲಸ ನಮ್ಮಿಂದಾಗ ಬೇಕು ಎಂದು ಹೇಳಿದರು.ಕ್ರೀಡೆಗೆ ಜಾತಿ ಎಂಬುದಿಲ್ಲ.ಬೇರೆ ಬೇರೆ ಜಾತಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರವರ ಜಾತಿಯವರು ಮಾತ್ರ ಒಟ್ಟು ಸೇರುತ್ತಾರೆ. ಆದರೆ ಕ್ರೀಡೆಗೆ ಎಲ್ಲರನ್ನು ಒಟ್ಟು ಸೇರಿಸುವ ಶಕ್ತಿ ಇದೆ ಎಂದು ಹೇಳಿ ಅಭಿಮಾನಿ ಬಳಗದವರ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಶ್ರೀ ಶಾಂತದುರ್ಗಾ ದೇವಸ್ಥಾನದ ಪ್ರಧಾನ ಅರ್ಚಕ ನವೀನ್ ಹೆಬ್ಬಾರ್, ವಿಶ್ವಹಿಂದೂ ಪರಿಷತ್ ತಾಲೂಕು ಸೇವಾ ಪ್ರಮುಖ್ ಹರೀಶ್ ಕುಮಾರ್ ದೋಳ್ಪಾಡಿ, ಪಂಚಾಯತ್ ಸದಸ್ಯರಾದ ಅವಿನಾಶ್ ರೈ ಕುಡ್ಚಿಲ, ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ರೈ ಕೊಪ್ಪಳ, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ನಾಗೇಶ ಗೌಡ ಪುಳಿತ್ತಡಿ, ಪಟ್ಟೆ ಅರ್ತ್ ಮೂವರ್ಸ್ ಮಾಲಕ ರಾಧಾಕೃಷ್ಣ ರೈ ಪಟ್ಟೆ, ಬಾಳಿಲ ಶಾರದೋತ್ಸವ ಸಮಿತಿ ಅಧ್ಯಕ್ಷ ಶೇಷಪ್ಪ ಪರವ, ದೇವಸ್ಥಾನದ ಗೌರವ ಸಲಹೆಗಾರ ದಾಮೋದರ ರೈ ಪಡ್ಡಂಬೈಲು, ಪ್ರಗತಿಪರ ಕೃಷಿಕ ತಿಮ್ಮಣ್ಣ ರೈ ಆನಾಜೆ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಾಲಚಂದ್ರ ರೈ ಆನಾಜೆ, ಪ್ರಗತಿಪರ ಕೃಷಿಕ ಶ್ರೀನಿವಾಸ ಭಟ್ ದೇವಸ್ಯ, ಮಂಗಳೂರು ಜೆಪ್ಪು ಕಾಸಿಯಾ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಅರುಣ್ ಪ್ರಸಾದ್ ರೈ, ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಕುಮಾರ ನರಸಿಂಹ ಭಟ್, ತಾಲೂಕು ರೆಫ್ರೀ ಬೋರ್ಡ್ ಅಧ್ಯಕ್ಷ ಅಸಿಫ್ ಹಾಜಿ ತಂಬುತ್ತಡ್ಕ, ವಕೀಲ ಗ್ರೆಗೋರಿ ಡಿ” ಸೋಜಾ, ಸತೀಶ್ ರೈ ಹೊಸಮನೆ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಚಂದ್ರಶೇಖರ ರೈ ಇರ್ದೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತು ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಸಭಾ ಕಾರ್ಯಕ್ರಮದ ನಂತರ ಆಗಮಿಸಿ ಶುಭ ಹಾರೈಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಮೋದ್ ಆರಿಗ ನಿಡ್ಪಳ್ಳಿ ಗುತ್ತು ತೆಂಗಿನ ಕಾಯಿ ಒಡೆದು ಕ್ರೀಡಾಂಗಣ ಉದ್ಘಾಟಿಸಿದರು.
ಶ್ರೇಯಾ ಸಿ.ಎಚ್, ಅನನ್ಯ ಸಿ.ಎಚ್ ಪ್ರಾರ್ಥಿಸಿದರು.ಪ್ರೀಯದರ್ಶಿನಿ ಶಾಲಾ ಮುಖ್ಯ ಗುರು ರಾಜೇಶ್ ನೆಲ್ಲಿತ್ತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲಾ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.ಉಚಿತವಾಗಿ ಮಾಧ್ಯಮ ಪ್ರಚಾರ ನೀಡಿದ ರೆಂಜ ಭಗವತಿ ಸ್ಟುಡಿಯೋ ಮಾಲಕ ಪ್ರಸಾದ್ ಪಾಟಾಳಿ ಕೂಟೇಲು ಇವರನ್ನು ಅಭಿನಂದಿಸಲಾಯಿತು.
ಸಮಾರೋಪ ಸಮಾರಂಭ; ಫೆ.16 ರಂದು ಬೆಳಿಗ್ಗೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ನಿಡ್ಪಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ಗೀತಾ ಸಂತೋಷ್ ಮಾತನಾಡಿ, ಮುರಳೀಕೃಷ್ಣ ಭಟ್ ಪಂಚಾಯತ್ ಸದಸ್ಯರಾಗಿದ್ದ ಸಂದರ್ಭದಲ್ಲಿ ತಮ್ಮ ಒಡನಾಡಿಯಾಗಿ ಮಾಡಿದ ಸೇವೆ ಮತ್ತು ಕಾರ್ಯ ವೈಖರಿ ಬಗ್ಗೆ ಶ್ಲಾಘಿಸಿದರು.ಅವರನ್ನು ಕಳೆದುಕೊಂಡು ನಿಡ್ಪಳ್ಳಿ ಗ್ರಾಮದ ಅಭಿವೃದ್ಧಿಗೆ,ಯುವಕರ ಸಂಘಟನೆಗೆ ದೊಡ್ಡ ಹೊಡೆತ ನೀಡಿದೆ ಎಂದು ದುಃಖ ವ್ಯಕ್ತಪಡಿಸಿದರು.ಪಂಚಾಯತ್ ಸದಸ್ಯೆ ಗ್ರೇಟಾ ಡಿ’ ಸೋಜಾ, ಪ್ರಗತಿಪರ ಕೃಷಿಕರಾದ ಆನಂದ ರೈ ನರೈಮಾರ್, ರಘುರಾಮ ಆಳ್ವ ಗೋಳಿತ್ತಡಿ, ಶೀನಪ್ಪ ಪೂಜಾರಿ ಕುಕ್ಕುಪುಣಿ, ಮುರಳೀಕೃಷ್ಣರವರ ಸಹೋದರ ಸಿ.ಎ ಬ್ಯಾಂಕ್ ಉದ್ಯೋಗಿ ಕೃಷ್ಣ ಕುಮಾರ್ ಮುಂಡೂರು, ಕೆ.ಎಸ್.ಅರ್.ಟಿ.ಸಿ ನಿವೃತ್ತ ಟಿ.ಸಿ ವಸಂತ ರೈ ಕೊಲ್ಲಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಗತಿಪರ ಕೃಷಿಕ ರಾಜಾರಾಮ ಭಟ್ ನಾಕುಡೇಲು ಅಧ್ಯಕ್ಷತೆ ವಹಿಸಿದ್ದರು.ಸ್ಪರ್ಧಾ ವಿಜೇತ ತಂಡಗಳಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಲಾಯಿತು.ಶರತ್ ಕುಮಾರ್ ಪುಳಿತ್ತಡಿ ಸ್ವಾಗತಿಸಿ ವಂದಿಸಿದರು.ಅಭಿಮಾನಿ ಬಳಗದ ಎಲ್ಲಾ ಕಾರ್ಯಕರ್ತರು ಉತ್ಸಾಹದಿಂದ ಸಹಕರಿಸಿದರು.ಇಡೀ ಸ್ಪರ್ಧೆಯ ಟೈಮರ್ ಆಗಿ ಕಾರ್ಯ ನಿರ್ವಹಿಸಿದ ಪುಟ್ಟ ಬಾಲಕ ಕೆ.ಎಸ್ ಪ್ರೀತೇಶ್ ನನ್ನು ಗೌರವಿಸಲಾಯಿತು.
ಫಲಿತಾಂಶ;
60 ಕೆ.ಜಿ. ವಿಭಾಗದಲ್ಲಿ ಪ್ರಥಮ ಜೈ ಭೀಮ್ ಟ್ರಸ್ಟ್ (ರಿ) ನಿಡ್ಪಳ್ಳಿ, ಬಿ.ಕೆ ಬಾಯ್ಸ್ ಬಂಗಾರ ಕೋಡಿ ದ್ವಿತೀಯ, ಅಟ್ಟಾಕೇರ್ ವಿಟ್ಲ ತೃತೀಯ, ಸೆವನ್ ಸ್ಟಾರ್ ಕಲ್ಪಣೆ ಚತುರ್ಥ ಸ್ಥಾನ ಪಡೆದು ಕೊಂಡರು. ಉತ್ತಮ ದಾಳಿಗಾರ ಸುಮುಖ್, ಉತ್ತಮ ಹಿಡಿತಗಾರ ಚಿದಾನಂದ, ಸವ್ಯಸಾಚಿ ಹಸನ್ ಜಾಸೀನ್ ಪಡೆದರು.
ಮುಕ್ತ ಪಂದ್ಯಾಟದಲ್ಲಿ ಬ್ರದರ್ಸ್ ಬೆಹ್ರೈನ್ ಪ್ರಥಮ, ರಿತ್ವಿ ಚಾಲೆಂಜರ್ಸ್ ಪದಡ್ಕ ದ್ವಿತೀಯ, ಬಿ.ಕೆ.ಬಾಯ್ಸ್ ಬಂಗಾರ ಕೋಡಿ ತೃತೀಯ, ಎನ್.ವೈ.ಟಿ ತಂಬುತ್ತಡ್ಕ ಚತುರ್ಥ ಬಹುಮಾನ ಪಡೆದುಕೊಂಡರು.ರಿತ್ವಿಕ್ ಉತ್ತಮ ದಾಳಿಗಾರ, ನಾಸಿರ್ ಬಂಗಾರ ಕೋಡಿ ಉತ್ತಮ ಹಿಡಿತಗಾರ ಹಾಗೂ ಸತ್ತಾರ್ ಸವ್ಯಸಾಚಿ ಬಹುಮಾನ ಪಡೆದರು.