ಪುತ್ತೂರು: ತಾಲೂಕು ಮಹಿಳಾ ಬಂಟರ ಸಂಘದ ಸಾರಥ್ಯದಲ್ಲಿ ಮಾ.11 ರಂದು ಪುತ್ತೂರು ಬಂಟರಭವನದಲ್ಲಿ ನಡೆಯಲಿರುವ ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಫೆ.15 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು.
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ಮಹಿಳಾ ಬಂಟರ ಸಂಘದ ಗೌರವಾಧ್ಯಕ್ಷೆ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಅಧ್ಯಕ್ಷೆ ಗೀತಾ ಮೋಹನ್ ರೈ, ನಿಕಟಪೂರ್ವಧ್ಯಕ್ಷೆ ಸಬಿತಾ ಭಂಡಾರಿ, ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ.ಶೆಟ್ಟಿ, ಕೋಶಾಧಿಕಾರಿ ಅರುಣಾ ಡಿ.ರೈ, ಸಾಂಸ್ಕೃತಿಕ ಸಂಚಾಲಕರಾದ ಹರಿಣಾಕ್ಷಿ ಜೆ.ಶೆಟ್ಟಿ, ಕ್ರೀಡಾ ಸಂಚಾಲಕರಾದ ಸ್ವರ್ಣಲತಾ ಜೆ.ರೈ, ಜಯಂತಿ ಎಂ.ರೈ ಮಾಡಾವು, ಶಿಲ್ಪಾ ಎಚ್.ರೈ, ಅಮಿತಾ ಯಸ್ ಶೆಟ್ಟಿ, ವತ್ಸಲಾ ಪಿ.ಶೆಟ್ಟಿ, ಗೀತಾ ಡಿ.ರೈ, ನಯನಾ ರೈ ನೆಲ್ಲಿಕಟ್ಟೆ, ಶಕುಂತಲಾ ವಿ.ಕೆ.ಶೆಟ್ಟಿ, ಕಿರಣ ವಿ.ರೈ, ಮಲ್ಲಿಕಾ ಜೆ.ರೈ, ಶೀಲಾ ಎಂ.ರೈ, ಅನುಶ್ರೀ ಬಿ.ಶೆಟ್ಟಿ, ವೀಣಾ ಕೆ.ಭಂಡಾರಿ, ಮೈತ್ರಿ ಎಸ್ ರೈ, ಭಾರತಿ ರೈ ಅರಿಯಡ್ಕ, ಗೀತಾ ಗಣೇಶ್ ರೈ, ಶಶಿಕಲಾ ಎ.ಶೆಟ್ಟಿ, ರಂಜನಿ ಶೆಟ್ಟಿ, ನಳಿನಿ ರೈ, ಸವಿತಾ ರೈ ಮೆಲ್ಮಜಲು ಸಹಿತ ಸದಸ್ಯರುಗಳು, ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಶೆಟ್ಟಿ ಸಾಜ, ಮಾಜಿ ಕಾರ್ಯದರ್ಶಿ ಮೋಹನ್ ರೈ ನರಿಮೊಗ್ರು, ಉಪಾಧ್ಯಕ್ಷ ರಮೇಶ್ ರೈ ಡಿಂಬ್ರಿ, ಬಂಟರ ಸಂಘದ ಪ್ರಮುಖರಾದ ಕೃಷ್ಣ ಪ್ರಸಾದ್ ಆಳ್ವ ಉಪ್ಪಳಿಗೆ, ರವಿಪ್ರಸಾದ್ ಶೆಟ್ಟಿ ಬನ್ನೂರು, ಜಗಜೀವನ್ದಾಸ್ ರೈ ಚಿಲ್ಮೆತ್ತಾರು, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ದಯಾನಂದ ರೈ ಕೊರ್ಮಂಡ, ಶಶಿರಾಜ್ ರೈ ಮುಂಡಾಳಗುತ್ತು, ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಕಾರ್ತಿಕ್ ರೈ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು.