ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿಬಿಎಸ್ಸಿಯಲ್ಲಿ ಶನಿವಾರ ಗಣಿತ ಮಾದರಿ ಪ್ರದರ್ಶನ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪಪ್ರಾಂಶುಪಾಲೆ ಶೈನಿ ಜೆ. ಮಾತನಾಡಿಶಾಲಾ ಮಕ್ಕಳು ಯಾವಾಗಲೂ ಕಠಿಣ ಪರಿಶ್ರಮ ಮಾಡುವುದಕ್ಕಿಂತಲೂ ಹೆಚ್ಚು ಜಾಣತನದ ಪರಿಶ್ರಮ ಮಾಡಬೇಕಿರುವುದು ಈಗ ಅನಿವಾರ್ಯವಾಗಿದೆ ಎಂದು ಹೇಳಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಮಾತನಾಡಿ ಎಲ್ಲಾ ಗಣಿತ ವಿಜ್ಞಾನ ವಿಷಯಗಳಿಗೆ ತಾಯಿ ಇದ್ದಂತೆ. ದೈನಂದಿನ ಜೇವನದಲ್ಲಿ ಗಣಿತದ ಲೆಕ್ಕಗಳು ಹಾಸುಹೊಕ್ಕಂತಿದೆ. ಇತರೆ ವಿಷಯಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಗಣಿತ ಅಗತ್ಯ ಎಂದರು.
ಐದು, ಆರು ಹಾಗೂ ಏಳನೇ ತರಗತಿಯ ವಿದ್ಯಾರ್ಥಿಗಳು ಗಣಿತ ಮಾದರಿ ತಯಾರಿಸಿ ಪ್ರದರ್ಶಿಸಿದರು. ಅತಿಥಿಗಳು, ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಗಣಿತ ಮಾದರಿ ವೀಕ್ಷಿಸಿ ಅವರ ಕೆಲಸವನ್ನು ಪ್ರಶಂಸಿದರು. ವಿದ್ಯಾರ್ಥಿಗಳಾದ ಸನ್ಮಯ್ ಸ್ವಾಗತಿಸಿದರು, ಅನ್ವಿತಾ ವಂದಿಸಿದರು. ಶ್ರೀರಾಮ್ ಏಲ್. ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.