ಪುತ್ತೂರು : ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯವು ನಡೆಸಿದ ಕರ್ನಾಟಕ ತಾಳವಾದ್ಯ (ಮೃದಂಗ )ಸೀನಿಯರ್ ವಿಭಾಗದಲ್ಲಿ ಶ್ರೀಚರಣ ಅಮೈಕಟ್ಟೆ ರಾಜ್ಯಕ್ಕೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಇವರು ವಿದ್ವಾನ್ ಕಾಂಚನ ಎ. ಈಶ್ವರ ಭಟ್ ಇವರ ಶಿಷ್ಯ. ರಾಮಕುಂಜ ಗ್ರಾಮದ ಗೋಳಿತ್ತಡಿ ಅಮೈಕಟ್ಟೆ ನಿವಾಸಿ ಕೃಷಿಕ ಕೆ ನರಸಿಂಹ ಭಟ್ ಮತ್ತು ಶ್ರೀಮತಿ ಸಂಧ್ಯಾ ಎನ್ ಭಟ್ ಇವರ ಪುತ್ರ. ಪ್ರಸ್ತುತ ಕೆ.ಶ್ರೀ ಚರಣ ಮಹಾಲಸ ದೃಶ್ಯಕಲಾ ವಿದ್ಯಾಲಯ ಮಂಗಳೂರಿನಲ್ಲಿ ಕೊನೆಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.