ಪುತ್ತೂರು: ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಅವರ ತಾಯಿ ಸುಶೀಲಾ ಶಿವಾನಂದ ರಾವ್(85ವ) ಅವರು ಫೆ.17ರಂದು ರಾತ್ರಿ ನಿಧನರಾದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿದ್ದ ದಿ.ಶಿವಾನಂದ ನಟ್ಟೋಜ ಅವರ ಪತ್ನಿಯಾಗಿರುವ ಸುಶೀಲಾ ಶಿವಾನಂದ ರಾವ್ ಅಲ್ಪಕಾಲದ ಅಸೌಖ್ಯದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅಲ್ಲಿ ಅವರು ನಿಧನರಾದರು.
ಮೃತರು ಪುತ್ರ ಸುಬ್ರಹ್ಮಣ್ಯ ನಟ್ಟೋಜ, ಸೊಸೆ ರಾಜಶ್ರೀ ನಟ್ಟೋಜ, ಪುತ್ರಿಯರಾದ ಮೀನಾಕ್ಷಿ ವೆಂಕಟ್ರಮಣ, ಮನೋಹರಿ ಕೃಷ್ಣರಾಜ್, ನಾರಾಯಣಿ ಸತ್ಯಶಂಕರ ಬೊಳ್ಳಾವ, ಗಾಯತ್ರೀ ಬಾಲಕೃಷ್ಣ, ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.