ಉಪವಿಭಾಗದ ನೂತನ ಎ.ಸಿ‌ ಕು.ಸ್ಟೆಲ್ಲಾ ವರ್ಗೀಸ್ ಅಧಿಕಾರ ಸ್ವೀಕಾರ

0

ಪುತ್ತೂರು:ಪುತ್ತೂರು ಉಪವಿಭಾಗದ ನೂತನ ಸಹಾಯಕ ಆಯುಕ್ತರಾಗಿ ನೇಮಕಗೊಂಡು ವರ್ಗಾವಣೆ ಹೊಂದಿ ಆಗಮಿಸಿರುವ ಕೆಎಎಸ್ ಕಿರಿಯ ಶ್ರೇಣಿಯ ಅಧಿಕಾರಿ ಕು.ಸ್ಟೆಲ್ಲಾ ವರ್ಗೀಸ್ ಅವರು ಫೆ.17ರಂದು ಅಽಕಾರ ಸ್ವೀಕರಿಸಿದ್ದಾರೆ.


ಪ್ರೊಬೇಷನರಿ ಸಹಾಯಕ ಆಯುಕ್ತ ಶ್ರವಣ್ ಕುಮಾರ್ ಅವರು ಕು|ಸ್ಟೆಲ್ಲಾ ವರ್ಗೀಸ್ ಅವರನ್ನು ಸ್ವಾಗತಿಸಿ, ಅಽಕಾರ ಹಸ್ತಾಂತರಿಸಿದರು.ಕು|ಸ್ಟೆಲ್ಲಾ ವರ್ಗೀಸ್ ಅವರು ಉತ್ತರ ಕನ್ನಡ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾಗಿದ್ದರು.ಇದೀಗ ಅವರು ಪುತ್ತೂರು ಉಪವಿಭಾಗಕ್ಕೆ ಸಹಾಯಕ ಆಯುಕ್ತರಾಗಿ ವರ್ಗಾವಣೆಗೊಂಡು ಆಗಮಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.ಪುತ್ತೂರಿನಲ್ಲಿ ಹಿರಿಯ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಾಪಾತ್ರ ಅವರು ರಾಯಚೂರುಗೆ ವರ್ಗಾವಣೆಗೊಂಡ ಬಳಿಕ ಪ್ರೊಬೇಷನರಿ ಎಸಿಯಾಗಿ ಶ್ರವಣ್ ಕುಮಾರ್ ಪ್ರಭಾರ ಕರ್ತವ್ಯ ನಿರ್ವಹಿಸುತ್ತಿದ್ದರು.

LEAVE A REPLY

Please enter your comment!
Please enter your name here