ವಿಟ್ಲ ಭಗವತಿ ದೇವಸ್ಥಾನ; ಸಂಗೀತ ಕಾರ್ಯಕ್ರಮ – ಅಭಿನಂದನಾ ಸಮಾರಂಭ 

0

ನಿಡ್ಪಳ್ಳಿ; ಕರ್ನಾಟಕ ಕಲಾಶ್ರೀ, ಕರ್ನಾಟಕ ಕಲಾಚಾರ್ಯ ವಿದ್ವಾನ್ ಮಧೂರ್. ಪಿ. ಬಾಲಸುಬ್ರಹ್ಮಣ್ಯಂ ಇವರಿಗೆ ಅಭಿನಂದನಾ ಸಮಾರಂಭ ಹಾಗೂ ಸಂಗೀತ ಕಾರ್ಯಕ್ರಮ ವಿಟ್ಲ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.         

ವಿಠಲ ಪ್ರೌಢಶಾಲೆ ವಿಟ್ಲ ಇಲ್ಲಿಯ ಶಿಕ್ಷಕ ಶ್ರೀಹರಿ ಶರ್ಮ ಮಾತನಾಡಿ, ವಿದ್ವಾನ್ ಮಧೂರ್ ಬಾಲಸುಬ್ರಹ್ಮಣ್ಯಂ ಅವರ ಸಂಗೀತ ಸಾಧನೆ ವಿದ್ಯಾರ್ಥಿಗಳನ್ನು ಉತ್ತೇಜಿಸುವ ರೀತಿ ಎಲ್ಲರಿಗೂ ಅನುಕರಣೀಯ ಎಂದು ಶ್ಲಾಘಿಸಿದರು. ಸಂಗೀತ ಗುರು ಶುಭಾ ಶಿವ ಕುಮಾರ್  ತಮ್ಮ ಗುರುಗಳಾದ ಮಧೂರ್ ಬಾಲಸುಬ್ರಹ್ಮಣ್ಯಂ ದಂಪತಿಗಳನ್ನು ಶಾಲು ಸ್ಮರಣಿಕೆ ನೀಡಿ ಸನ್ಮಾನಿಸಿದರು. ನಂತರ  ಅವರಿಂದ ಸಂಗೀತ ಕಚೇರಿ ಕಾರ್ಯಕ್ರಮ ನಡೆಯಿತು. ಕುಮಾರಿ ತನ್ಮಯಿ ಉಪ್ಪಂಗಳ ವಯಲಿನ್ ನಲ್ಲಿ , ವಿದ್ವಾನ್ ಸೂರಳಿ. ಆರ್. ಗಣೇಶ ಮೂರ್ತಿ  ಮೃದಂಗದಲ್ಲಿ  ಧೀಮಂತ್ ಭಟ್ಟ್ ಹರಿಹರಪುರ ಘಟಂನಲ್ಲಿ  ಸಹಕರಿಸಿದರು. ಸಂಗೀತ ಶಾಲೆಯ ಗುರು ಶುಭಾ ಶಿವಕುಮಾರ್ ಸ್ವಾಗತಿಸಿ, ಕಲಾಶಾಲೆಯ ನಿರ್ದೇಶಕ  ಶಿವಕುಮಾರ್  ವಂದಿಸಿದರು.ಶಿಕ್ಷಕ ಶ್ರೀಹರಿ ಶರ್ಮ ಕಾರ್ಯಕ್ರಮ ನಿರೂಪಿಸಿದರು.

ಸಾಮಗಾನ ಸಂಗೀತ  ಕಲಾಶಾಲೆ ಪಡಿಬಾಗಿಲು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಕಲಾಭಿಮಾನಿ ಬಂಧುಗಳು, ವಿವಿಧ ಶಾಲೆಯ ಸಂಗೀತ ಗುರುಗಳು, ವಿದ್ಯಾರ್ಥಿಗಳು ಪಾಲ್ಗೊಂಡರು.

LEAVE A REPLY

Please enter your comment!
Please enter your name here