ಪುತ್ತೂರು: ನರಿಮೊಗರು ಶ್ರೀಕ್ಷೇತ್ರ ಧರ್ಮಚಾವಡಿ ಎಲಿಕಾ ಪಾಷಾಣಮೂರ್ತಿ ಸತ್ಯದೇವತೆ ದೈವಸ್ಥಾನದಲ್ಲಿ ಫೆ.16ರಂದು ವರ್ಷಾವಧಿ ಉತ್ಸವ ನಡೆಯಿತು.

ಬೆಳಿಗ್ಗೆ ನವಕಲಶ, ದೈವಗಳಿಗೆ ತಂಬಿಲ, ಸಂಜೆ 7ರಿಂದ ದುರ್ಗಾನಮಸ್ಕಾರ ಪೂಜೆ, ರಾತ್ರಿ ದೈವಗಳ ಭಂಡಾರ ತೆಗೆಯುವುದು, ಬಳಿಕ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಆನಡ್ಕ ಶ್ರೀರಾಮ ಭಜನಾ ಮಂಡಳಿ ಮತ್ತು ಕುಂಡಡ್ಕ ಶ್ರೀವಿಷ್ಣುಮೂರ್ತಿ ಕುಣಿತ ಭಜನಾ ತಂಡದಿಂದ ಕುಣಿತ ಭಜನೆ, ಇರ್ದೆ ಶ್ರೀವಿಷ್ಣು ಸಿಂಗಾರಿ ಮೇಳದಿಂದ ಚೆಂಡೆ ಪ್ರದರ್ಶನ, ರಾತ್ರಿ ದೈವಗಳ ನೇಮೋತ್ಸವ ನಡೆಯಿತು. ದೈವಸ್ಥಾನದ ಮುಖ್ಯಸ್ಥ ದೇವಾನಂದ ಭಟ್ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.