ನಾಳೆ(ಫೆ.19):ಬೆಟ್ಟಂಪಾಡಿ ಡೆಮ್ಮಂಗರ ಕೆ.ಕೆ ಮಸ್ಜಿದ್ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕ, ಬುಸ್ತಾನುಲ್ ಉಲೂಂ ದರ್ಸ್ ವಾರ್ಷಿಕ, ಮದನೀಯಂ ಆತ್ಮೀಯ ಮಜ್ಲಿಸ್

0

ಪುತ್ತೂರು: ಕೆ.ಕೆ ಮಸ್ಜಿದ್ ಡೆಮ್ಮಂಗರ, ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕ ಹಾಗೂ ಬುಸ್ತಾನುಲ್ ಉಲೂಂ ದರ್ಸ್ ವಾರ್ಷಿಕ ಮತ್ತು ಮದನೀಯಂ ಆತ್ಮೀಯ ಮಜ್ಲಿಸ್ ಫೆ.19ರಂದು ನಡೆಯಲಿದೆ. ಖುದ್ವತ್ತುಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.

ಅಸರ್ ನಮಾಝಿನ ಬಳಿಕ ಅಸ್ಸಯ್ಯಿದ್ ಶಂಸುದ್ದೀನ್ ತಂಙಳ್ ಅಲ್ ಅಝ್‌ಹರಿ ಬನ್ಪುತ್ತಡ್ಕ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದ್ದು ಸಂಜೆ ಗಂಟೆ 5ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಅಸ್ಸಯ್ಯಿದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ದುವಾ ನೆರವೇರಿಸಲಿದ್ದು ಕೊರಿಂಗಿಲ ಜುಮಾ ಮಸೀದಿಯ ಅಧ್ಯಕ್ಷ ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ.

ಅಬೂ ಹಾಮಿದ್ ಝಕರಿಯ್ಯಾ ಫೈಝಿ ಉದ್ಘಾಟಿಸಲಿದ್ದಾರೆ. ಮಗ್ರಿಬ್ ನಮಾಜಿನ ಬಳಿಕ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ನೇತೃತ್ವದಲ್ಲಿ ಮದನೀಯಂ ಆತ್ಮೀಯ ಮಜ್ಲಿಸ್ ನಡೆಯಲಿದೆ. ವಸೀಹತ್ ಮತ್ತು ಕೂಟು ಪ್ರಾರ್ಥನೆಯನ್ನು ಅಸ್ಸಯ್ಯಿದ್ ಶಿಹಾಬುದ್ದೀನ್ ಅಲ್ ಅಹ್ದಲ್ ಮುತ್ತನ್ನೂರು ತಂಙಳ್ ಮಲಪ್ಪುರಂ ನಿರ್ವಹಿಸಲಿದ್ದಾರೆ. ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here