ಅಧ್ಯಕ್ಷರಾಗಿ ಶ್ರೀಮತಿ ಆಚಾರ್ಯ, ಕಾರ್ಯದರ್ಶಿಯಾಗಿ ಕುಶಾಲಪ್ಪ ನಾಯ್ಕ
ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ನಿಡ್ಪಳ್ಳಿ ಒಕ್ಕೂಟ ಹಾಗೂ ಊರ ಹತ್ತು ಸಮಸ್ತರ ವತಿಯಿಂದ ನಡೆಯುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯನ್ನು ನಿಡ್ಪಳ್ಳಿ ಒಕ್ಕೂಟ ಸಭೆಯಲ್ಲಿ ರಚಿಸಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಆಚಾರ್ಯ ಕೊಪ್ಪಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಕುಶಾಲಪ್ಪ ನಾಯ್ಕ ಕೋಡಿ ಇವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ದಿವ್ಯಾ ಸಿ.ಎಚ್ , ಸತೀಶ್.ಎಂ, ಜತೆ ಕಾರ್ಯದರ್ಶಿಯಾಗಿ ಹರಿಪ್ರಸಾದ್ .ಸಿ.ಎಚ್, ಕೋಶಾಧಿಕಾರಿ: ರಕ್ಷಿತ್.ಕೆ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಯೋಗೀಶ್.ಎನ್ ,ಸುನಿತಾ ರೈ ,ನವನೀತ.ಡಿ, ಪುಷ್ಪಲತಾ, ಕವಿತಾ, ಮಾಲತಿ ,ಚೈತ್ರಾ ,ಬಾಲಚಂದ್ರ.ಕೆ ಇವರನ್ನು ಆರಿಸಲಾಯಿತು. ಗೌರವ ಸಲಹೆಗಾರರಾಗಿ ಮಂಜುನಾಥ ರೈ ,ಗಂಗಾಧರ ಸಿ,ಎಚ್, ರಾಧಾಕೃಷ್ಣ ಪಾಟಾಳಿ ಆಯ್ಕೆಯಾದರು.ಒಕ್ಕೂಟದ ಎಲ್ಲಾ ಸದಸ್ಯರು ಸಮಿತಿಯ ಸದಸ್ಯರಾಗಿದ್ದಾರೆ.