ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮುಂದಿನ ಮೂರು ವರ್ಷಗಳ ಅವಧಿಗೆ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳನ್ನು ನೇಮಕಗೊಳಿಸಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್‌ನ ಸದಸ್ಯ ಕಾರ್ಯದರ್ಶಿಯವರು ಆದೇಶಿಸಿದ್ದಾರೆ.
ಸಾಮಾನ್ಯ ಸ್ಥಾನದಿಂದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಡಾ. ಕೆ.ಸುರೇಶ್ ಪುತ್ತೂರಾಯ ವಿನಾಯಕ ನಗರ ದರ್ಬೆ, ನಿಕಟಪೂರ್ವ ಸದಸ್ಯರಾದ ಜಯಕುಮಾರ್ ನಾಯರ್ ಸಂಪ್ಯ, ಲಕ್ಷ್ಮಣ ಬೈಲಾಡಿ, ವಿನ್ಯಾಸ್ ಯು.ಎಸ್. ಸಂಪ್ಯ, ಮಹಿಳಾ ಸ್ಥಾನದಿಂದ ನಿಕಟಪೂರ್ವ ಸದಸ್ಯೆ ಪ್ರೇಮ ಸಪಲ್ಯ ಸಂಪ್ಯರವರು ಪುನರ್ ನೇಮಕಗೊಂಡಿದ್ದಾರೆ.
ಸಾಮಾನ್ಯ ಸ್ಥಾನದಿಂದ ರವಿಚಂದ್ರ ಆಚಾರ್ಯ ಸಂಪ್ಯ, ಮಹಿಳಾ ಸ್ಥಾನದಿಂದ ಮೀನಾಕ್ಷಿ ಶೇಷಪ್ಪ ಗೌಡ ನೀರ್ಕಜೆ, ಪ.ಜಾತಿ ಮತ್ತು ಪ.ಪಂಗಡ ಸ್ಥಾನದಿಂದ ಆದರ್ಶ ಅಮ್ಮುಂಜ ಹಾಗೂ ಅರ್ಚಕ ಸ್ಥಾನದಿಂದ ಮೋಹನ ರಾವ್‌ರವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.