ಸುದಾನ ಶಾಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ‘ಟಿಂಕರ್ ಸ್ಪೇಸ್ ಫೆಸ್ಟ್’

0

ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಫೆಬ್ರವರಿ 18ರಂದು ಶಾಲೆಯ ತಂತ್ರಜ್ಞಾನ ಪ್ರಯೋಗಾಲಯದ ‘ಟಿಂಕರ್ ಸ್ಪೇಸ್ ಫೆಸ್ಟ್’ ನ್ನು ಟಿಂಕರ್ ಸ್ಪೇಸ್ ನವರ ಸಹಯೋಗದೊಂದಿಗೆ ಆಯೋಜಿಸಲಾಯಿತು.

ಕೇರಳ ಟಿಂಕರ್ ಸ್ಪೇಸ್ ವಿಭಾಗ ಮುಖ್ಯಸ್ಥ ಪುನೀತ್, ಕಾಸರಗೋಡಿನ ಟಿಂಕರ್ ಸ್ಪೇಸ್ ತಂತ್ರಜ್ಞಾನ ತರಬೇತುದಾರ ವೈಶಾಖ ಅಭ್ಯಾಗತರಾಗಿ ಪಾಲ್ಗೊಂಡಿದ್ದರು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ದೀಪೋಜ್ವಲನ ಮಾಡಿ ಮಾತನಾಡಿ“ಶಾಲಾ ಹಂತದಲ್ಲೇ ಸಿಗುತ್ತಿರುವ ಈ ಅತ್ಯಾಧುನಿಕ  ಸದವಕಾಶವನ್ನು ಚೆನ್ನಾಗಿ ಬಳಸಿಕೊಂಡರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಸುಲಭ”  ಎಂದರು.

ಪುತ್ತೂರು ಮತ್ತು ಸುಳ್ಯದ ಟಿಂಕರ್ ಸ್ಪೇಸ್ ತಂತ್ರಜ್ಞಾನ ತರಬೇತುದಾರ ಶ್ರೀನಿಧಿ ಯವರು, ಅಭ್ಯಾಗತರಾಗಿ ಪಾಲ್ಗೊಂಡು ‘ವಿದ್ಯಾರ್ಥಿಗಳು ಸೃಜನಶೀಲರಾಗಿ ಮುಂದುವರಿಯಲು ಟಿಂಕರ್ ಸ್ಪೇಸ್ ಉತ್ತಮ ಅವಕಾಶವನ್ನು ಒದಗಿಸುತ್ತದೆ’ ಎಂದರು. ವಿದ್ಯಾರ್ಥಿ ಉಪನಾಯಕ ಅದ್ವಿತ್ ಸಜೆಶ್  ಸ್ವಾಗತಿಸಿ, ವಿಜ್ಞಾನ ಸಂಘದ ಕಾರ್ಯದರ್ಶಿ ಮಿಥುನ್ ಪಿಪಿ ವಂದಿಸಿದರು. ವಿಜ್ಞಾನ ಶಿಕ್ಷಕಿ ರೇಖಾಮಣಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜ್ಞಾನ ಸಂಯೋಜಕಿ ಪ್ರತಿಮಾ, ಸಹ ಶಿಕ್ಷಕಿಯರಾದ ರಂಜಿತ ಹಾಗೂ ನಿರ್ಮಲ ಸಹಕರಿಸಿದರು.

ಸಭಾ ಕಾರ್ಯಕ್ರಮದ ಬಳಿಕ ಶಾಲೆಯ 6 ರಿಂದ 9ನೇ ತರಗತಿಯ ವರೆಗಿನ ವಿದ್ಯಾರ್ಥಿಗಳು ತಾವು ನಿರ್ಮಿಸಿದ ಸುಮಾರು ಐವತ್ತಕ್ಕೂ ಮೀರಿದ ತಾಂತ್ರಿಕ ಮಾದರಿಗಳನ್ನು ಪ್ರದರ್ಶಿಸಿದರು. ವಿಜ್ಞಾನ ಮಾದರಿಗಳ ಅವಲೋಕನವನ್ನು ಮಾಡಿದ ರೆ. ವಿಜಯ ಹಾರ್ವಿನ್  “ ಮಕ್ಕಳು ಈ ದೇಶದ ಭದ್ರ ಭವಿಷ್ಯ. ಅವರನ್ನು ಸಶಕ್ತರನ್ನಾಗಿ ಬೆಳೆಸುವುದು ನಮ್ಮ ಹೊಣೆ”. ಎಂದು ವಿದ್ಯಾರ್ಥಿಗಳ ಪ್ರಯೋಗ, ಪ್ರಯತ್ನಗಳನ್ನು ಶ್ಲಾಘಿಸಿದರು. ಈ ಕಾರ್ಯಕ್ರಮವನ್ನು ಶಾಲೆಯ ವಿಜ್ಞಾನ ಸಂಘ ಅವನಿಯು ಆಯೋಜಿಸಿತ್ತು.

LEAVE A REPLY

Please enter your comment!
Please enter your name here