ಫೆ.28ರವರೆಗೆ ಇರಲಿದೆ ಉತ್ಸವ
ಪುತ್ತೂರು: ನವೀನತೆ ಹಾಗೂ ಪರಿಶುದ್ಧತೆ ಆಭರಣದ ಮೂಲಕ ಮನೆ ಮಾತಾಗಿರುವ ಮುಳಿಯ ಜ್ಯುವೆಲ್ಸ್ ಪುತ್ತೂರು ಹಾಗೂ ಬೆಳ್ತಂಗಡಿ ಮಳಿಗೆಯಲ್ಲಿ ಪೆ.15 ರಿಂದ 28 ರವರೆಗೆ Gem stone ಉತ್ಸವ ಪ್ರಾರಂಭಗೊಂಡಿದೆ.
ಮುಳಿಯ ಮಳಿಗೆಯಲ್ಲಿ Gem Stone ಉತ್ಸವದ ಅನಾವರಣ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಎಕ್ಸಲ್ ಕಾಲೇಜ್ ಗುರುವಾಯನಕೆರೆಯ ಉಪನ್ಯಾಸಕಿ ಸಹನಾ ಜೈನ್, ನಿಶಾ ಪೂಜಾರಿ, ಶ್ರುತಿ ಶೆಟ್ಟಿ ಅನಾವರಾಣಗೊಳಿಸಿದರು. ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿ ಶಾಖಾ ಪ್ರಬಂಧಕ ಲೋಹಿತ್ ಕುಮಾರ್ ಹಾಗೂ ಉಪಶಾಖ ಪ್ರಬಂಧಕ ದಿನೇಶ್ ಮತ್ತು ಮುಳಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಗ್ರಾಹಕರಿಗೆ ವಿಶೇಷತೆಗಳನ್ನು ನೀಡುತ್ತಾ ಬಂದಿರುವ ಮುಳಿಯದಲ್ಲಿ 13 ದಿನಗಳ ಕಾಲ Gem Stone ಉತ್ಸವದಲ್ಲಿ ಒಂಬತ್ತು ವಿಭಿನ್ನ ರತ್ನದ ಕಲ್ಲುಗಳನ್ನು ಒಳಗೊಂಡಿರುವ ಮಾಣಿಕ್ಯ, ಮುತ್ತು, ಹವಳ, ಪಚ್ಚೆ, ಪುಷ್ಯರಾಗ, ವಜ್ರ, ನೀಲ, ಗೋಮೇಧಿಕ ಮತ್ತು ವೈಡೂರ್ಯ ಗಳಾದ ನವರತ್ನ ಆಭರಣಗಳ ಉತ್ಸವದ ಮೂಲಕ ಗ್ರಾಹಕರಿಗೆ ಹೊಸತನವನ್ನು ಪರಿಚಯಿಸುವುದಕ್ಕೆ ಮುಂದಾಗಿದೆ.

ನವರತ್ನ ಆಭರಣಗಳಾದ ಉಂಗುರ , ನೆಕ್ಲೇಸ್, ಬ್ರೇಸ್ಲೆಟ್ಸ್, ಪದಕ, ಬಳೆ ಮತ್ತು ಸರಗಳು ಅಧಿಕ ವಿನ್ಯಾಸದ ನವರತ್ನ ಆಭರಣಗಳ ಅಮೋಘ ಸಂಗ್ರಹವಿದೆ. ಮಹಿಳೆಯರ ಮನಸೂರೆಗೊಳಿಸುವ ರೀತಿಯಲ್ಲಿ ಚಿನ್ನಾಭರಣದ ಸಂಗ್ರಹ ಹೊಂದಿರುವ ಮುಳಿಯದಲ್ಲಿ ಗ್ರಾಹಕರು ಉತ್ಸವದ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.