ಸವಣೂರು :ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾಗಿ ಸಂದೇಶ್ ಕೆ.ಎನ್ ಅವರನ್ನು ನಿಯೋಜಿಸಲಾಗಿದೆ.
ಸಂದೇಶ್ ಕೆ.ಎನ್ ಅವರು ಸವಣೂರು ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ , ಕಡಬ ತಾಲೂಕಿನ ಕೊಯಿಲ ಗ್ರಾ.ಪಂ.ಪಿಡಿಒ ಆಗಿ ಕರ್ತವ್ಯದಲ್ಲಿದ್ದರು.
ಪುತ್ತೂರು ತಾಲೂಕಿನ ಬನ್ನೂರು ನಿವಾಸಿಯಾಗಿರುವ ಸಂದೇಶ್ ಕೆ.ಎನ್.ಅವರು 2011ರ ಜನವರಿಯಲ್ಲಿ ಸುಳ್ಯ ತಾಲೂಕಿನ ಪಂಜ ಗ್ರಾ.ಪಂ.ಗೆ ಪಿಡಿಒ ಆಗಿ ನೇಮಕಗೊಂಡಿದ್ದರು. ಅಲ್ಲಿ 3 ವರ್ಷ ಕರ್ತವ್ಯ ನಿರ್ವಹಿಸಿದ್ದ ಅವರು, ಬಳಿಕ ಉಬರಡ್ಕ, ನಂತರ ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ಗೆ ವರ್ಗಾವಣೆಗೊಂಡು ಆಗಮಿಸಿದ್ದರು. ಸುಳ್ಯದಲ್ಲಿ ಪಿಡಿಒ ಆಗಿದ್ದ ವೇಳೆಯಲ್ಲಿ ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಪ್ರಭಾರ ಸಹಾಯಕ ನಿರ್ದೇಶಕರಾಗಿ, ಪ್ರಭಾರ ವಿಷಯ ನಿರ್ವಾಹಕರಾಗಿಯೂ ಸೇವೆ ಸಲ್ಲಿಸಿದ್ದರು. ಅಜ್ಜಾವರ ಗ್ರಾ.ಪಂ.ನಲ್ಲೂ ಪ್ರಭಾರ ಪಿಡಿಒ ಆಗಿ ಸೇವೆ ಸಲ್ಲಿಸಿದ್ದರು. ನೆಟ್ಟಣಿಗೆ ಮುಡ್ನೂರು ಗ್ರಾ.ಪಂ.ನಲ್ಲಿ ನಾಲ್ಕು ವರ್ಷ ಪಿಡಿಒ ಆಗಿದ್ದರು.ಈ ವೇಳೆ ಬೆಟ್ಟಂಪಾಡಿ ಗ್ರಾ.ಪಂ.ಪ್ರಭಾರ ಪಿಡಿಒ ಆಗಿಯೂ ಸೇವೆ ಸಲ್ಲಿಸಿದ್ದರು. ಬಳಿಕ ಕೊಯಿಲ ಗ್ರಾ.ಪಂ.ಪಿಡಿಒ ಆಗಿ ವರ್ಗಾವಣೆಗೊಂಡು, ಬಳಿಕ ಸವಣೂರು ಗ್ರಾ.ಪಂ.ನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕರ್ತವ್ಯದಲ್ಲಿದ್ದರು.
ಕಡಬ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕರಾಗಿದ್ದ ಚೆನ್ನಪ್ಪ ಗೌಡ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಸಂದೇಶ್ ಕೆ.ಎನ್ ಅವರನ್ನು ನಿಯೋಜನೆ ಮಾಡಲಾಗಿದೆ.