ಉಪಾಧ್ಯಕ್ಷರಾಗಿ ಉಮೇಶ್ ರೈ ಗಿಳಿಯಾಲು
ನಿಡ್ಪಳ್ಳಿ: ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಪದ್ಮನಾಭ ಬೋರ್ಕರ್ ಕತ್ತಲಕಾನ ಪುನರಾಯ್ಕೆಗೊಂಡು, ಉಪಾಧ್ಯಕ್ಷರಾಗಿ ಉಮೇಶ್ ರೈ ಗಿಳಿಯಾಲುರವನ್ನು ಆಯ್ಕೆ ಮಾಡಲಾಯಿತು.
ಫೆ.20 ರಂದು ಸಂಘದ ಸಭಾಭವನದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಆಯ್ಕೆಯಾದ ನಿರ್ದೇಶಕರನ್ನು ಬಾ.ಜ.ಪ ಮಂಡಲ ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.

ಬಾ.ಜ.ಪ ಮುಖಂಡರಾದ ದಯಾನಂದ ಶೆಟ್ಟಿ ಉಜಿರೆಮಾರ್,ಉಮೇಶ್ ಕೋಡಿಬೈಲು,ಕೃಷ್ಣ ಕುಮಾರ್ ರೈ,ನಿತೀಶ್ ಶಾಂತಿವನ,ಹರೀಶ್ ಬಿಜತ್ರೆ ಮತ್ತು ಗ್ರಾಮಾಂತರ ಮಂಡಲದ ಪದಾಧಿಕಾರಿಗಳು, ಶಕ್ತಿ ಕೆಂದ್ರದ ಅದ್ಯಕ್ಷರು, ಬೂತ್ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.