
ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಿತ್ತೂರು ಹಿ.ಪ್ರಾ ಶಾಲೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಸಭಾಭವನಕ್ಕೆ ಫ್ರೆಂಡ್ಸ್ ಕ್ಲಬ್ (ರಿ.) ಮಿತ್ತೂರು ಇದರ ವತಿಯಿಂದ ನಡೆದ 65 ಕೆಜಿ ವಿಭಾಗದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಮತ್ತು ಅದೃಷ್ಟ ಚೀಟಿಯಲ್ಲಿ ಉಳಿಕೆಯಾದ ಮೊತ್ತ ಒಂದು ಲಕ್ಷ ರೂಪಾಯಿಯನ್ನು ಮುಖ್ಯೋಪಾಧ್ಯಾಯರಾದ ಸರೋಜ ಎ , ಸಹಶಿಕ್ಷಕರಾದ ಸಂಜೀವ ನಾಯ್ಕ , ವಿಮಲ ನಾಗೇಶ ಸಾಣಿಕಟ್ಟಾ, ಜೂಲಿಯಾನ ಮೇವಿಸ್ ಡಿಸೋಜ, ರೇಷ್ಮಾ ಹೆಚ್ ಎಂ , ಪೂರ್ಣಿಮಾ ಕೆ , ಅಶ್ವಿನಿ ಹಾಗೂ ಶಾಲಾ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷರಾದ ಆದಂ ಮಿತ್ತೂರು ಇವರ ಸಮ್ಮುಖದಲ್ಲಿ ನಗದನ್ನು ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷರು, ಮಿತ್ತೂರು ಶಾಲಾಭಿವೃದ್ದಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಎಂ ಸುಧೀರ್ ಕುಮಾರ್ ಶೆಟ್ಟಿ , ಕಾರ್ಯದರ್ಶಿ ವಸಂತ ಪೂಜಾರಿ, ಕ್ರೀಡಾ ಕಾರ್ಯದರ್ಶಿ ಈಶ್ವರ ಗೌಡ , ಸದಸ್ಯರುಗಳಾದ ಗಂಗಾಧರ ಸುವರ್ಣ , ದಾಮೋದರ ಶೆಟ್ಟಿ, ಸುಧಾಕರ ಗೌಡ, ವಿನೋದ್ ಗಾಣದಕೊಟ್ಯ, ವೆಂಕಪ್ಪ ಗೌಡ, ಜಯಚಂದ್ರ ಮೊದಲಾದವರು ಉಪಸ್ಥಿತರಿದ್ದರು.