ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಹಿಂದೂ ಧಾರ್ಮಿಕ ಶಿಕ್ಷಣದ 24 ನೇ ಕೇಂದ್ರ ಉದ್ಘಾಟನೆ

0

ಪುತ್ತೂರು: ಹಿಂದೂ ಧಾರ್ಮಿಕ ಶಿಕ್ಷಣ ಕೇಂದ್ರದ 24ನೇ ಕೇಂದ್ರವು ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ ಫೆ.20ರಂದು ನಡೆಯಿತು.


ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಯು.ಪೂವಪ್ಪ ಅವರು ಶಿಕ್ಷಣ ಕೇಂದ್ರ ಉದ್ಘಾಟಿಸಿ ಮಾತನಾಡಿ, ಇಂದಿನ ಮಕ್ಕಳಿಗೆ ಮನೆಯಲ್ಲಿ ಧಾರ್ಮಿಕ ಶಿಕ್ಷಣ ಸಿಗುತ್ತಿಲ್ಲ ಹಾಗಾಗಿ ಇದು ಅತ್ಯಂತ ಪ್ರಸ್ತುತ ಮತ್ತು ಅಗತ್ಯದ್ದು ಎಂದರು.


ದೇವಾಲಯ ಸಂವರ್ಧನ ಸಮಿತಿ ಪ್ರಮುಖ್ ಕೇಶವಪ್ರಸಾದ್ ಮುಳಿಯ ಅವರು ಮಾತನಾಡಿ, ಧಾರ್ಮಿಕ ಶಿಕ್ಷಣದಲ್ಲಿ ಶ್ಲೋಕಗಳು, ಆಚಾರ -ವಿಚಾರ ಕಗ್ಗವಾಚನ, ಭಗವದ್ಗೀತೆ, ಕುಣಿತ ಭಜನೆ , ಮುಂತಾದ ವಿಚಾರಗಳನ್ನು ಹೇಳಿಕೊಡುವುದಲ್ಲದೆ ಜೀವನ ಮೌಲ್ಯಗಳನ್ನು ಕೂಡಾ ಮಕ್ಕಳಿಗೆ ಹೇಳಿಕೊಡಲಾಗುವುದು ಎಂದರು.

ನಗರ ಸಭೆ ಸ್ಥಳೀಯ ಸದಸ್ಯ ಮನೋಹರ ಕಲ್ಲಾರೆ ಇವರು ಶುಭ ಹಾರೈಸಿದರು. ಅಟಲ್ ಉದ್ಯಾನ ಹಿಂದೂ ಧಾರ್ಮಿಕ ಶಿಕ್ಷಣದ ಮಕ್ಕಳು ಮತ್ತು ಪಾಂಗಲಾಯಿ ಅರಸು ಮುಂಡಿತ್ತಾಯ ಕೇಂದ್ರದ ಮಕ್ಕಳು ಧಾರ್ಮಿಕ ಶಿಕ್ಷಣದ ಕುರಿತು ಕಾರ್ಯಕ್ರಮಗಳನ್ನು ನೀಡಿದರು. ಬೋಧಕಿಯರಾದ ಡಾ.ವಿಜಯ ಸರಸ್ವತಿ, ಶಂಕರಿ ಶರ್ಮ, ಶರಾವತಿ ರವಿ ನಾರಾಯಣ್, ವೀಣಾ ಬಿಕೆ, ಜಯಶ್ರೀ ಚಂದ್ರಪ್ರಭಾ, ಪ್ರಭಾವತಿ ಇತರರು ಉಪಸ್ಥಿತರಿದ್ದರು. ಸುಮಂಗಲ ಗಿರೀಶ್ ಸ್ವಾಗತಿಸಿ, ಕೃಷ್ಣವೇಣಿ ಪ್ರಸಾದ್ ಮುಳಿಯ ವಂದಿಸಿದರು.

ಕಾರ್ಯಕ್ರಮದ ಬಳಿಕ ಆರಂಭದ ತರಗತಿಗೆ ಚಾಲನೆ ನೀಡಲಾಯಿತು. ವೀಣಾ ಕೊಳತ್ತಾಯ, ವತ್ಸಲಾ ರಾಜ್ಞಿ ವಿಶೇಷವಾಗಿ ಉಪಸ್ಥಿತರಿದ್ದರು. ಉಮಾ ಡಿ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಕವಿತಾ ಕೊಳತ್ತಾಯ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here