ಈಶ್ವರಮಂಗಲ :ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯು ಬ್ರಹ್ಮಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಫೆ.24ರಿಂದ ಮಾ.04 ರವರೆಗೆ ನಡೆಯಲಿದೆ.
ಫೆ.24ರಂದು ಬೆಳಿಗ್ಗೆ ಗಣಪತಿ ಹೋಮ, ಧ್ವಜಾರೋಹಣ, ಬಲಿವಾಡು ಕೂಟ, ನಂತರ ಶ್ರೀಪಂಚಲಿಂಗೇಶ್ವರ ಭಕ್ತವೃಂದ ಮತ್ತು ಯಕ್ಷಾಭಿಮಾನಿಗಳು ಈಶ್ವರಮಂಗಲ ಇವರಿಂದ ಯಕ್ಷಗಾನ ತಾಳಮದ್ದಳೆ “ಮಾಗಧ ವಧೆ/ಅಗ್ರಪೂಜೆ”, ಮಧ್ಯಾಹ್ನ ಮಹಾಪೂಜೆ, ದೇವರ ನಿತ್ಯಬಲಿ, ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ, ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ವೈಭವ, ರಾತ್ರಿ ನಿತ್ಯಬಲಿ, ಸಮರ್ಥ ಸಾಂಸ್ಕೃತಿಕ ಕಲಾ ತಂಡ ಈಶ್ವರಮಂಗಲ ಇವರಿಂದ “ನಟರಾಜ ನಾಟ್ಯ-ಗಾನ ವೈಭವ”, ಅನ್ನಸಂತರ್ಪಣೆ ನಡೆಯಲಿದೆ.
ಫೆ.25ರಂದು ಬೆಳಿಗ್ಗೆ ಮೂಲಸ್ಥಾನದ ಮೆಣಸಿನಕಾನದಲ್ಲಿ ತಂತ್ರಿಗಳಿಂದ ಪೂಜೆ, ನಿತ್ಯಬಲಿ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ಪಂಚಶ್ರೀ ಮಹಿಳಾ ಭಜನಾ ತಂಡ ಈಶ್ವರಮಂಗಲ ಇವರಿಂದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ನಿತ್ಯಬಲಿ, ರಾತ್ರಿ ಎಂಕ್ಲು ತುಳುವೆರ್ ಕಲಾಬಳಗ ಈಶ್ವರಮಂಗಲ ಇವರಿಂದ ವಿಭಿನ್ನ ಶೈಲಿಯ ನಾಟಕ “ಕಡಂಬರ”, ಅನ್ನಸಂತರ್ಪಣೆ ನಡೆಯಲಿದೆ.
ಫೆ.26ರಂದು ಬೆಳಿಗ್ಗೆ ನಿತ್ಯಬಲಿ, ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಉತ್ಸವ ಬಲಿ, ಮಹಾಶಿವರಾತ್ರಿ ಮಹೋತ್ಸವ, ಅರ್ಧ ಏಕಾಹ ಭಜನೆ. ಫೆ.27ರಂದು ಬೆಳಿಗ್ಗೆ ಉತ್ಸವಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ ವರ್ಣಂ ನೃತ್ಯ ತಂಡ ಈಶ್ವರಮಂಗಲ ಹಾಗೂ ಲಹರಿ ನಾಟ್ಯಾಲಯ ಪಂಚೋಡಿ ಇವರ ಸಹಯೋಗದಲ್ಲಿ ನೃತ್ಯ ವೈಭವ, ರಾತ್ರಿ ಉತ್ಸವಬಲಿ, ಅನ್ನಸಂತರ್ಪಣೆ ನಂತರ ಯಕ್ಷಗಾನ ಬಯಲಾಟ “ಶ್ರೀಶಿವ ಪಂಚಾಕ್ಷರಿ ಮಹಿಮೆ” ನಡೆಯಲಿದೆ.
ಫೆ.28ರಂದು ಬೆಳಿಗ್ಗೆ ಉತ್ಸವ ಬಲಿ, ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಗೀತಾ ಸಾಹಿತ್ಯ ಸಂಭ್ರಮ, ರಾತ್ರಿ ಉತ್ಸವ ಬಲಿ, ನಡುದೀಪೋತ್ಸವ, ರಾತ್ರಿ ತಾಯಂಬಕ, ಅನ್ನಸಂತರ್ಪಣೆ, ನಂತರ ಶ್ರೀಪಂಚಲಿಂಗೇಶ್ವರ ಕಲಾಸಂಘ ಇವರಿಂದ ಯಕ್ಷಗಾನ ಬಯಲಾಟ “ಮಾಗಧವಧೆ” ನಡೆಯಲಿದೆ.
ಮಾ.01ರಂದು ಮಹಾದರ್ಶನಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ನಂತರ ಮಧ್ಯಾಹ್ನ ದೇಲಂಪಾಡಿ ಯಕ್ಷಗಾನ ಕಲಾ ಸಂಘ ಬನಾರಿ ಇದರ ಮಹಿಳಾ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ “ಇಂದ್ರಜಿತು”, ಸಂಜೆ ಕುತ್ಯಾಳ ಶ್ರೀಮಹಾವಿಷ್ಣು ದೇವರ ಸನ್ನಿಧಿಗೆ ಶ್ರೀದೇವರ ಸವಾರಿ, ಕಟ್ಟೆಪೂಜೆ, ಮರಳಿ ಬಂದು ಶಯನೋತ್ಸವ, ಶೇಖರ್ ಮೆಲೊಡೀಸ್ ಈಶ್ವರಮಂಗಲ ಇವರ ಸಾರಥ್ಯದಲ್ಲಿ ಸಾಂಸ್ಕೃತಿಕ ಮತ್ತು ಜನಪದ ಶೈಲಿಯ ಹಾಗೂ ಯಕ್ಷಲೋಕದಲ್ಲಿ ಯಕ್ಷಪ್ರೇಮಿಗಳ ಹೃದಯ ಗೆದ್ದ ಹಾಡುಗಳು ಅದ್ಭುತ ಪ್ರತಿಭೆಗಳ ಸಮಾಗಮ, ಬಳಿಕ ಅನ್ನಸಂತರ್ಪಣೆ, ರಾತ್ರಿ ಗಂಟೆ 9.00ರಿಂದ ರಮೇಶ್ ಶಿರ್ಲಾಲು ಸಾರಥ್ಯದ ಚಿತ್ತಾರ ಕಲಾವಿದರು ಕರ್ನೂರು ಸಾದರ ಪಡಿಸುವ ತುಳು ಹಾಸ್ಯಮಯ ನಾಟಕ “ಪಿರಬನ್ನಗ” ನಡೆಯಲಿದೆ.
ಮಾ.02ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಸೀಯಾಳಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ ಚೌಕಿ ಪೂಜೆ ನಂತರ ಮಲ್ಲ ಶ್ರೀದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ(ರಿ.) ಇವರಿಂದ ಯಕ್ಷಗಾನ ಬಯಲಾಟ “ತ್ರಿಜನ್ಮ ಮೋಕ್ಷ”, ರಾತ್ರಿ ಉತ್ಸವ ಬಲಿ ಹೊರಟು ಅವಭೃತ ಸ್ನಾನಕ್ಕೆ ಸಸ್ಪೆಟ್ಟಿಗೆ ಶ್ರೀದೇವರ ಸವಾರಿ, ಕಟ್ಟೆಪೂಜೆ, ಅವಭೃತ ಸ್ನಾನ, ಅನ್ನಸಂತರ್ಪಣೆ ನಡೆಯಲಿದೆ.
ಮಾ.03ರಂದು ಬೆಳಿಗ್ಗೆ ಬೆಡಿಸೇವೆ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಧ್ವಜಾವರೋಹಣ, ಮಂತ್ರಾಕ್ಷತೆ, ಸಂಪ್ರೋಕ್ಷತೆ ನಂತರ ಪ್ರತಿಷ್ಠಾ ದಿನದ ಪ್ರಯುಕ್ತ ಗಣಪತಿ ಹೋಮ, ಬಲಿವಾಡು ಶೇಖರಣೆ, ನವಕ, ಶತರುದ್ರಾಭಿಷೇಕ, ಸೀಯಾಳಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಶ್ರೀಕ್ಷೇತ್ರದ ದೈವಗಳ ಸ್ಥಾನದಿಂದ ದೈವಗಳ ಭಂಡಾರ ಹೊರಟು ಮಾಡದಗುಡ್ಡೆ ದೈವಗಳ ಚಾವಡಿಯಲ್ಲಿ ಏರುವುದು.
ಮಾ.04ರಂದು ಬೆಳಿಗ್ಗೆ ಶ್ರೀಕ್ಷೇತ್ರದಲ್ಲಿ ಕಿನ್ನಿಮಾಣಿ ದೈವ ಶ್ರೀಮುಡಿ ಧರಿಸಿ ಹೊರಟು ಮಾಡದಗುಡ್ಡೆ ದೈವಗಳ ಚಾವಡಿಯಲ್ಲಿ ಕಿನ್ನಿಮಾಣಿ, ಪೂಮಾಣಿ, ಪಿಲಿಚಾಮುಂಡಿ ದೈವಗಳ ನೇಮ, ಅನ್ನಸಂತರ್ಪಣೆ, ನಂತರ ಮಾಡದಗುಡ್ಡೆಯಿಂದ ಶ್ರೀಕ್ಷೇತ್ರಕ್ಕೆ ಭಂಡಾರ ಮರಳಿ ಬರುವುದು, ರಾತ್ರಿ ಶ್ರೀ ಕ್ಷೇತ್ರದಲ್ಲಿ ಗುಳಿಗ ಕೋಲ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಫೆ.23ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ
ಫೆ.23ರಂದು ಸಂಜೆ 5ರಿಂದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ನೂಜಿಬೈಲು, ಪೆರ್ನಾಜೆ, ನೆಲ್ಲಿತ್ತಡ್ಕ, ಸಾಂತ್ಯ, ಮುಂಡ್ಯ ಕುತ್ಯಾಳ, ಪಟ್ಲಡ್ಕ, ಪುಳಿಮಾರಡ್ಕ, ಮೇನಾಲ, ಮೆಣಸಿನಕಾನ, ಮಯ್ಯಾಳ, ಪಂಚೋಡಿ, ಕುದ್ರೋಳಿ, ಕರ್ನೂರು, ಗಾಳಿಮುಖ, ಆಲಂತಡ್ಕದಿಂದ ಹೊರೆಕಾಣಿಕೆ ಈಶ್ವರಮಂಗಲ ಪಂಚಾಯತ್ ಬಳಿಗೆ ಆಗಮಿಸಿ ನಂತರ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
ಮಾ.2ರಂದು ನವೀಕೃತ ಮಾಡದ ಶುದ್ಧಿ ಕಲಶೋತ್ಸವ
ಈಶ್ವರಮಂಗಲ ಮಾಡದಗುಡ್ಡೆಯಲ್ಲಿ ಪುನರ್ನಿರ್ಮಾಣಗೊಂಡ(ಉಳ್ಳಾಕುಲು) ಶ್ರೀಕಿನ್ನಿಮಾಣಿ ಪೂಮಾಣಿ ದೈವಗಳ ನವೀಕೃತ ಮಾಡದ ಶುದ್ಧಿ ಕಲಶೋತ್ಸವ ಮಾ.2ರಂದು ಬೆಳಿಗ್ಗೆ 11.25ರ ವೃಷಭ ಲಗ್ನದ ಮುಹೂರ್ತದಲ್ಲಿ ನಡೆಯಲಿದೆ.