ದರ್ಬೆತ್ತಡ್ಕ : ಎನ್‌ಎಸ್‌ಎಸ್ ಶಿಬಿರಾರ್ಥಿಗಳಿಗೆ ಗೌರವಾರ್ಪಣೆ

0

ಪುತ್ತೂರು: ದರ್ಬೆತ್ತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳು ದಿನಗಳ ಕಾಲ ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನವರು ನಡೆಸಿಕೊಟ್ಟ ಎನ್ ಎಸ್ ಎಸ್ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ತಂಡದ ನಾಯಕ ಹಾಗೂ ನಾಯಕಿಯರನ್ನು ಕ್ಯಾಂಪ್ಕೋ ಮತ್ತು ದರ್ಬೆತ್ತಡ್ಕದ ಊರವರ ಪರವಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಶಿಬಿರಾರ್ಥಿಗಳನ್ನು ಕಿರು ಸ್ಮರಣಿಕೆ (ನೋಟ್ ಬುಕ್ )ಕೊಟ್ಟು ಗೌರವಿಸಲಾಗಿದ್ದು ಇದರ ಪ್ರಾಯೋಜಕರಾಗಿ ವಿವೇಕಾನಂದ ವಿದ್ಯಾಸಂಸ್ಥೆಯ ಸಂಸ್ಕೃತ ಅಧ್ಯಾಪಕ ವೆಂಕಟೇಶ್ ಪ್ರಸಾದ್ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ಸದಸ್ಯರುಗಳಾದ ಪ್ರದೀಪ್ ಸೇರ್ತಾಜೆ, ಶಾರದಾ ಆಚಾರ್ಯ, ಕ್ಯಾಂಪ್ಕೋ ಉದ್ಯೋಗಿ ಈಶ್ವರ ನಾಯ್ಕ ಅಜ್ಜಿಕಲ್ಲು, ಎಸ್‌ಡಿಎಂಸಿ ಸದಸ್ಯ ಬಾಬು ಪ್ರಸಾದ್, ಮಾಧವ ದರ್ಬೆತ್ತಡ್ಕ, ಅಡುಗೆ ಸಹಾಯಕಿ ಮಾಲತಿ, ಅಂಗನಾಡಿ ಕಾರ್ಯಕರ್ತೆ ಇಂದಿರಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here