ಪಾಣಾಜೆ: ಅಟಲ್ ಜೀ ಜನ್ಮ ಶತಾಬ್ದಿ ಪ್ರಯುಕ್ತ ಗ್ರಾಮದ ಆಶಕ್ತ ಕುಟುಂಬದ ಮನೆ ನವೀಕರಣಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಕಲ್ಪ

0

ನಿಡ್ಪಳ್ಳಿ: ಪಾಣಾಜೆ ಗ್ರಾಮದ ದೇವಸ್ಯ ಉದಯ ಕುಮಾರ್ ಮಣಿಯಾಣಿಯವರ ಮನೆಯ ಮೇಲ್ಚಾವಣಿಯು ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ವಾಸಕ್ಕೆ ಯೋಗ್ಯವಲ್ಲದ ಕಾರಣ ಈ ಮನೆಯ ದುರಸ್ತಿಯ ಕಾರ್ಯವನ್ನು ಅಟಲ್ ಜೀ ಜನ್ಮ ಶತಾಬ್ದಿಯ ಪ್ರಯುಕ್ತ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವಹಿಸಿಕೊಳ್ಳುವ ಸಂಕಲ್ಪವನ್ನು ಫೆ.22ರಂದು ನಡೆದ ಸಭೆಯಲ್ಲಿ ಮಾಡಲಾಯಿತು.

ಪುತ್ತಿಲ ಪರಿವಾರ ಸೇವಾ ಟ್ರಸ್ಟ್  ಸಂಸ್ಥಾಪಕರಾದ ಅರುಣ್ ಕುಮಾರ್ ಪುತ್ತಿಲ, ಬಾ,ಜ,ಪ ಮಂಡಲ ಪ್ರದಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು, ನೆಕ್ಕಿಲಾಡಿ ಪಂಚಾಯತ್ ಮಾಜಿ ಅದ್ಯಕ್ಷ ಪ್ರಶಾಂತ್ ನೆಕ್ಕಿಲಾಡಿ, ಬಾ.ಜ.ಪ ಎಸ್,ಸಿ ಮೋರ್ಛಾ ಪ್ರಧಾನ ಕಾರ್ಯದರ್ಶಿ ಸುಜಿತ್ ಕಜೆ, ಪಾಣಾಜೆ ಬಾ,ಜ,ಪ ಶಕ್ತಿಕೇಂದ್ರದ ಸಂಚಾಲಕ ಪ್ರೇಮ್ ರಾಜ್ ಆರ್ಲಪದವು, ಬಾ,ಜ,ಪ ಮಂಡಲ ಯುವ ಮೋರ್ಛಾ ಕಾರ್ಯಕಾರಣಿ ಸದಸ್ಯ ಪ್ರದೀಪ್ ಪಾಣಾಜೆ, ಪಾಣಾಜೆ ಬಾ.ಜ.ಪ ಬೂತ್ ಪ್ರಮುಖರುಗಳಾದ ಪಷ್ಪರಾಜ ರೈ ಕೋಟೆ, ಸಂದೀಪ್ ಕೆ. ಕೀರ್ತಿರಾಜ್ ಉಡ್ಡಂಗಳ ಪಾಣಾಜೆ ಕೃಷಿ ಪತ್ತಿನ ಸಹಾಕಾರಿ ಸಂಘದ ನಿರ್ದೇಶಕ ಹರೀಶ್ ಕಡಮಾಜೆ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸದಸ್ಯರುಗಳಾದ ವಸಂತ ಕುಮಾರ್ ಭರಣ್ಯ,ಸುಖಿನ್ ರಾಜ್ ಪಾಣಾಜೆ, ಜಾನು ನಾಯ್ಕ ಭರಣ್ಯ ಮುಂತಾದ ಪ್ರಮುಖರು ಮನೆಗೆ ಭೇಟಿ ನೀಡಿ ಯೋಜನೆಯ ಬಗ್ಗೆ ಪರಿಶೀಲಿಸಲಾಯಿತು.

LEAVE A REPLY

Please enter your comment!
Please enter your name here