ಪುತ್ತೂರು: ಬನ್ನೂರು ಆನೆಮಜಲಿನಲ್ಲಿರುವ ಶ್ರೀ ದೈಯ್ಯೆರೆ ಮಾಡ, ನಡಿಮಾರ್, ಭಾವದಕೆರೆ ಶ್ರೀ ನಾಗ ಸಾನಿಧ್ಯ, ಅಲುಂಬುಡ, ಶ್ರೀ ಇಷ್ಟದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ ಸಾನಿಧ್ಯದಲ್ಲಿ ಫೆ. 23ರಂದು ನಡೆಯಲಿರುವ ಶ್ರೀ ದೈಯ್ಯೆರೆ ಮಾಡ ನಡಿಮಾರ್ ಶ್ರೀ ಇಷ್ಟದೇವತೆ, ರಕ್ತೇಶ್ವರಿ, ಅಣ್ಣಪ್ಪ ಪಂಜುರ್ಲಿ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ವಾರ್ಷಿಕ ತಂಬಿಲ ಸೇವೆಯ ಅಂಗವಾಗಿ ಫೆ. 22ರಂದು ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಿತು.

ಹಸಿರು ಹೊರೆಕಾಣಿಕೆ ಮೆರವಣಿಗಯು ಪಡಿಲು ಮಹಾಲಿಂಗೇಶ್ವರ ದೇವರ ಕಟ್ಟೆ, ಬನ್ನೂರು ಶ್ರೀ ಶಿವಪಾರ್ವತಿ ಮಂದಿರ, ಚೆಲುವಮ್ಮನ ಕಟ್ಟೆ, ಜೈನರಗುರಿ ರಸ್ತೆ ಮುಖಾಂತರ ಸಾಗಿ ಬನ್ನೂರು ಶನೀಶ್ವರ ಕಟ್ಟೆ, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನ, ಸೇಡಿಯಾಪು, ಕೆಮ್ಮಾಯಿ, ಕೃಷ್ಣನಗರ, ಆನೆಮಜಲು ಮೂಲಕ ದೈಯ್ಯೆರೆ ಮಡಕ್ಕೆ ತೆರಳಿ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಸಮಿತಿ ಪ್ರಮುಖರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.