ಮಾ.1 ರಿಂದ 5 :  ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವ  

0

ಬಡಗನ್ನೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ,  ದೇಯಿ ಬೈದೈತಿ, ಕೋಟಿ-ಚೆನ್ನಯ ಮೂಲಸ್ಥಾನ ಇದರ  ವಾರ್ಷಿಕ ಜಾತ್ರಾ ಮಹೋತ್ಸವು ಮಾ.1ರಿಂದ 5 ತನಕ  ಮೂಡಬಿದ್ರೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ  ವೈದಿಕ ವಿಧಿ ವಿಧಾನದೊಂದಿಗೆ ತೌಳವ ಪರಂಪರೆಯ ಅನುಸಾರ ನಡೆಯಲಿದೆ.

ಈ ಪುಣ್ಯ ದೇವತಾ ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ, ತ್ರಿಕರಣ ಪೂರ್ವಕ ಸಹಕಾರ ನೀಡಿ, ಮೂಲಸ್ಥಾನ ಕ್ಷೇತ್ರದ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸುವಂತೆ ಶ್ರೀ ಕ್ಷೇತ್ರ ಅಡಳಿತ ಸಮಿತಿ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಪ್ರಕಟಣೆಯಲ್ಲಿ ತಿಳಿಸಿದರು.

ಕಾರ್ಯಕ್ರಮಗಳು;-
ಮಾ.1 ರಂದು ಸಂಜೆ 5.30ರಿಂದ  ಸ್ವಸ್ತಿ ಪುಣ್ಯಾಹ ಸ್ಥಳಶುದ್ಧಿ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮೂಹೂರ್ತ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿರುವುದು.
ಮಾ. 2 ರಂದು ಬೆಳಗ್ಗೆ ಗಂ 6 ರಿಂದ  ಗಣಪತಿ ಹೋಮ, ಗುರುಪೂಜೆ, ತೋರಣ ಮೂಹೂರ್ತ, ನಾಗದೇವರ ಸಾನಿಧ್ಯದಲ್ಲಿ ಗಣಹೋಮ. ನವಕ ಕಲಶಾಭಿಷೇಕ, ಆಶ್ಲೇಷ ಬಲಿ ಸೇವೆ, ಮಂಗಳಾರತಿ ಮತ್ತು ಧೂಮಾವತಿ ಸಾನಿಧ್ಯ ಹಾಗೂ ಎಲ್ಲಾ ಪರಿವಾರ ಸಾನಿಧ್ಯದಲ್ಲಿ ಶುದ್ಧಿ ನವಕ ಕಲಶಾಭಿಷೇಕ.

ಬೆಳಗ್ಗೆ ಗಂ 11.28 ಕ್ಕೆ ಒದಗುವ ವೃಷಭ ಲಗ್ನ ಸುಮೂಹೂರ್ತದಲ್ಲಿ ಧ್ವಜಾರೋಹಣ, ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ. ಮಧ್ಯಾಹ್ನ ಗಂ 12.ಕ್ಕೆ ಮಹಾಮಾತೆಯ ಮಾತೃಸಂಕಲ್ಪದಂತೆ ದೇಯಿ ಬೈದೆತಿ ಅಮ್ಮನವರ ಮಡಿಲ ಪ್ರಸಾದವನ್ನು ಎಲ್ಲಾ ಮಾತೆಯರಿಗೆ ಮಡಿಲು ತುಂಬಿಸಿ ಆಶೀರ್ವದಿಸಲಾಗುವುದು. ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ ಬಳಿಕ ಸಾರ್ವಜನಿಕ  ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂ 6.30 ರಿಂದ ಧೂಮಾವತಿ ಬಲಿ ಉತ್ಸವ, ಧರ್ಮಚಾವಡಿಯಲ್ಲಿ ಭಗವತೀ ಸೇವೆ, ಮಹಾಪೂಜೆ,  7 ರಿಂದ  ಶ್ರೀ ಗೆಜ್ಜೆಗಿರಿ ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಲಿದೆ.

ಮಾ.3 ರಂದು  ಬೆಳಗ್ಗೆ ಗಂ 6 ರಿಂದ ಶ್ರೀ ಗಣಪತಿ ಹೋಮ, ಗುರುಪೂಜೆ, ದೈವಸಾನಿಧ್ಯದಲ್ಲಿ ಶುದ್ಧಿಕಲಶ,  8 ರಿಂದ  ಧೂಮಾವತಿ ದೈವದ ಭಂಡಾರ ಇಳಿಯುವುದು. ದರ್ಶನ 9 ರಿಂದ ಧೂಮಾವತಿ ದೈವದ ನೇಮೋತ್ಸವ ಪ್ರಸಾದ ವಿತರಣೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ 5 ರಿಂದ ಧೂಮಾವತಿ ಬಲಿ ಉತ್ಸವ, ಮಹಾಪೂಜೆ, ರಾತ್ರಿ ಗಂ 6 ರಿಂದ  ಕುಪ್ಪೆ ಪಂಜುರ್ಲಿ ದೈವದ ಭಂಡಾರ ಇಳಿಯುವುದು.7.30 ರಿಂದ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ ರಾತ್ರಿ 8 ರಿಂದ ಕುಪ್ಪೆ ಪಂಜುರ್ಲಿ ನೇಮೋತ್ಸವ .ರಾತ್ರಿ 10 ರಿಂದ ಕಲ್ಲಲ್ತಾಯ ನೇಮೋತ್ಸವ, ರಾತ್ರಿ ಗಂ 12 ರಿಂದ ಕೊರತಿ ನೇಮೋತ್ಸವ ನಡೆಯಲಿರುವುದು.

ಮಾ.4 ರಂದು  ಬೆಳಗ್ಗೆ 6 ರಿಂದ  ಗಣಪತಿ ಹೋಮ, ಗುರುಪೂಜೆ, ಮೂಲಸ್ಥಾನ ಗರಡಿ, ಬೆಮ್ಮೆರೆ ಗುಂಡ, ಸತ್ಯಧರ್ಮ ಚಾವಡಿಯಲ್ಲಿ ನವಕ ಪ್ರಧಾನ ಹೋಮ, ನವಕ ಕಲಶಾಭಿಷೇಕ, ಅಲಂಕಾರ ಪೂಜೆ, 11.45 ಕ್ಕೆ  ಗರಡಿಯಲ್ಲಿ ಮಹಾಪೂಜೆ, ಮಧ್ಯಾಹ್ನ ಗಂ 12.30 ಕ್ಕೆ ಸತ್ಯಧರ್ಮ ಚಾವಡಿಯಲ್ಲಿ ಮಹಾಪೂಜೆ, ಪಲ್ಲಪೂಜೆ, ಅನ್ನಸಂತರ್ಪಣೆ ನಡೆಯಲಿರುವುದು.

ಸಂಜೆ 3.30ರಿಂದ ಮೂಲಸ್ಥಾನ ಗರಡಿಯಲ್ಲಿ ಶುದ್ಧಹೋಮ ಕಲಶ,  5 ರಿಂದ ಧೂಮಾವತಿ ಬಲಿ ಸೇವೆ, ಸಂಜೆ 6 ರಿಂದ  ಸತ್ಯಧರ್ಮ ಚಾವಡಿಯಲ್ಲಿ ದೀಪಾರಾಧನೆ ಮಹಾಪೂಜೆ  7 ರಿಂದ ಮೂಲಸ್ಥಾನ ಗರಡಿಯಿಂದ ಒಲಿಮದೆಯಿಂದ ಹೊರಡುವುದು ರಾತ್ರಿ 8 ರಿಂದ ದೇಯಿಬೈದೆತಿ ನೇಮೋತ್ಸವ, ಮಾತೆ ಮಕ್ಕಳ ಪುನೀತ ಸಮಾಗಮ ನಡೆಯಲಿರುವುದು.

ರಾತ್ರಿ 9 ರಿಂದ ದೇಯಿಬೈದೆತಿ ಪ್ರಸಾದ ವಿತರಣೆ,  ದೇಯಿ ಬೈದೆತಿ ಸಮಾಧಿಯಲ್ಲಿ ದೀಪಾರಾಧನೆ, ಮೂಲಸ್ಥಾನ ಗರಡಿಯಲ್ಲಿ ಬೈದರ್ಕಳ ದರ್ಶನ ಸೇವೆ ಬೈದರ್ಕಳ ನೇಮೋತ್ಸವ, ಪ್ರಸಾದ ವಿತರಣೆ ನಡೆಯಲಿರುವುದು.

ಮಾ.5 ರಂದು ಬೆಳಗ್ಗೆ  ಗಂ 5.30ರಿಂದ  ಗಣಹೋಮ ಹಾಗೂ ಎಲ್ಲಾ ಸಾನಿಧ್ಯಗಳಲ್ಲಿ ಶುದ್ದಿ ಕ್ರಿಯೆಗಳು, ಕಲಶಾಭಿಷೇಕ, ಧ್ವಜಾವರೋಹಣ ಗುರುಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು.

ಫೆ..28  ಪ್ರತಿಷ್ಥಾ ವರ್ಧಂತುತ್ಸವ
ಫೆ. 28 ಪ್ರತಿಷ್ಥಾ ವರ್ಧಂತುತ್ಸವ ಅಂಗವಾಗಿ ಬೆಳಗ್ಗೆ ಗಣಪತಿ ಹವನ, ತನು -ತಂಬಿಲ, ನವಕ ಕಲಶ, ಹಾಗೂ ಹೋಮ, ಶುದ್ಧಿಹೋಮ, ಪರ್ವಸೇವೆ ಮತ್ತು ಪ್ರಸನ್ನ ಪೂಜೆ, ಮಂಗಳಾರತಿ ನಡೆಯಲಿರುವುದು.

ಹಸಿರು ಹೊರೆಕಾಣಿಕೆ  ಮೆರವಣಿಗೆ;-
ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ  ಫೆ. 28 ರಂದು  ಬೆಳಗ್ಗೆ ಗಂ. 10 ಕ್ಕೆ ಕಂಕನಾಡಿ ಗರಡಿ ಕ್ಷೇತ್ರದಿಂದ  ಹಸಿರು ಹೊರೆಕಾಣಿಕೆ ಮೆರವಣಿಗೆ ಹೊರಟು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರಕ್ಕೆ ಬರಲಿದೆ. ಬಳಿಕ ಅಪರಾಹ್ನ ಗಂ. 3 ಕ್ಕೆ  ಮಹಾಲಿಂಗೇಶ್ವರ ದೇವಸ್ಥಾನದಿಂದ ವಾಹನ ಜಾಥ ಮೂಲಕ  ಭವ್ಯ ಮೆರವಣಿಗೆಯು  ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಬರಲಿದೆ.

LEAVE A REPLY

Please enter your comment!
Please enter your name here