ಸಹಕಾರ ಭಾರತಿ-11, ರೈತಸ್ನೇಹಿ ಸಹಕಾರಿ ಬಳಗ-1ರಲ್ಲಿ ಗೆಲುವು

ಅಭ್ಯರ್ಥಿಗಳು ಪಡೆದ ಮತಗಳು
ಸಾಲಗಾರ ಸಾಮಾನ್ಯ
ತೀರ್ಥಾನಂದ ದುಗ್ಗಳ-505
ಜನಾರ್ಧನ ಗೌಡ ಪಿ-474
ಸತೀಶ್ ಪಾಂಬಾರು-433
ಪವನ್ ಡಿ.ಜಿ ದೊಡ್ಡಮನೆ-373
ರಾಜೇಶ್ ಗೌಡ ಕುದ್ಕುಳಿ-372
ವಸಂತ ಕುಮಾರ್ ರೈ ಕೆ-367
ಬಾಲಕೃಷ್ಣ ಗೌಡ ಪಳ್ಳತ್ತಡ್ಕ-332
ವೆಂಕಟ್ರಮಣ ಕೆ.ಎಸ್-304
ಯಶೋಧರ ಗೌಡ ಕೊಂರ್ಬಡ್ಕ-212
ಲಕ್ಷ್ಮಣ ಗೌಡ ಪರಣೆ-198
ಲೋಕೇಶ್ ಪೆರ್ಲಂಪಾಡಿ-137
ಬೆಳ್ಯಪ್ಪ ಗೌಡ-59
ಮಹಿಳಾ ಸ್ಥಾನ
ಜಲಜಾಕ್ಷಿ ಮಾಧವ ಗೌಡ-484
ಸುನಂದ ಲೋಕನಾಥ ಗೌಡ-451
ಲಕ್ಷ್ಮೀ ಕೆ.ಜಿ-344
ನಾಗವೇಣಿ ಕೆ.ಕೆ-285
ಹಿಂದುಳಿದ ವರ್ಗ ಬಿ ಸ್ಥಾನ
ಪ್ರಭಾಕರ ರೈ ಕೊಂರ್ಬಡ್ಕ-441
ಸತೀಶ್ ಗೌಡ ನೂಜಿ-252
ಶ್ರೀಧರ ಗೌಡ ಅಂಗಡಿಹಿತ್ಲು-74
ಹಿಂದುಳಿದ ವರ್ಗ ಎ ಸ್ಥಾನ
ಪ್ರವೀಣ ಜಿ.ಕೆ-481
ಶಿವರಾಮ ಪೂಜಾರಿ ಪೆರ್ಲಂಪಾಡಿ-292
ಪರಿಶಿಷ್ಟ ಪಂಗಡ ಸ್ಥಾನ
ಅಣ್ಣಪ್ಪ ನಾಯ್ಕ ಬಿ-480
ಅಪ್ಪು ನಾಯ್ಕ ಎಂ-307
ಪರಿಶಿಷ್ಟ ಜಾತಿ ಸ್ಥಾನ
ಕರಿಯ-447
ಗುರುವಪ್ಪ ಎಂ-341
ಸಾಲಗಾರರಲ್ಲದ ಸ್ಥಾನ
ಪ್ರೇಮ ಗಂಗಾಧರ ಗೌಡ-38
ವಿಶಾಲಾಕ್ಷಿ ಪ್ರಮೋದ್ ಕೆ. ಎಸ್-37
ಸಾಮಾನ್ಯ ಸ್ಥಾನದಲ್ಲಿ ತೀರ್ಥಾನಂದ ದುಗ್ಗಳರವರಿಗೆ ಗರಿಷ್ಟ ಮತ
12 ಅಭ್ಯರ್ಥಿಗಳಿದ್ದ ಸಾಲಗಾರ ಸಾಮಾನ್ಯ ಸ್ಥಾನದಲ್ಲಿ ಸಂಘದ ಹಾಲಿ ನಿರ್ದೇಶಕ, ಮಾಜಿ ಅಧ್ಯಕ್ಷರೂ ಆಗಿರುವ ತೀರ್ಥಾನಂದ ದುಗ್ಗಳರವರು ಗರಿಷ್ಟ ಮತ ಪಡೆದಿದ್ದಾರೆ. ತೀರ್ಥಾನಂದ ದುಗ್ಗಳರವರು ಒಟ್ಟು 505 ಮತಗಳನ್ನು ಪಡೆಯುವ ಮೂಲಕ ಸಾಮಾನ್ಯ ಸ್ಥಾನದಲ್ಲಿ ಮೊದಲ ಸ್ಥಾನದಲ್ಲಿ ಚುನಾಯಿತರಾಗಿದ್ದಾರೆ.
ಹಾಲಿ ಅಧ್ಯಕ್ಷರಿಗೆ ಸೋಲು
ಕಳೆದ ಅವಧಿಯಲ್ಲಿ ಬಹುಮತ ಪಡೆದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಬೆಂಬಲಿತರು 5 ವರ್ಷದಲ್ಲಿ ಎರಡೂವರೆ ವರ್ಷದ ಅಧಿಕಾರ ಹಂಚಿಕೆಯಲ್ಲಿ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ವಸಂತ ಕುಮಾರ್ ರೈ ಹಾಗೂ 2ನೇ ಅವಧಿಯಲ್ಲಿ ಹಾಲಿ ಅಧ್ಯಕ್ಷರಾಗಿದ್ದ ವೆಂಕಟ್ರಮಣ ಕೆ.ಎಸ್ ಈರ್ವರು ಕೂಡ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದಾರೆ.
ಅಧಿಕಾರ ಕಳೆದುಕೊಂಡ ಕಾಂಗ್ರೆಸ್
ಕಳೆದ ಬಾರಿಯ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಕಾಂಗ್ರೆಸ್ಬೆAಬಲಿತ 8, ಸಹಕಾರ ಭಾರತಿ 4 ಅಭ್ಯರ್ಥಿಗಳು ಗೆಲುವು ಪಡೆಯುವ ಮೂಲಕ ಅಧಿಕಾರ ಕಾಂಗ್ರೆಸ್ ಬೆಂಬಲಿತರ ಪಾಲಾಗಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ ಸಹಕಾರ ಭಾರತಿ 11, ರೈತ ಸ್ನೇಹಿ ಸಹಕಾರಿ ಬಳಗ 1 ಸ್ಥಾನ ಪಡೆಯುವ ಮೂಲಕ ಬಿಜೆಪಿ ಅಧಿಕಾರವನ್ನು ಮತ್ತೆ ತನ್ನ ವಶಕ್ಕೆ ಪಡೆದುಕೊಂಡಿದೆ.
ಪುತ್ತೂರು: ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 12 ಸ್ಥಾನಗಳಲ್ಲಿ 11 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಭರ್ಜರಿ ಜಯಭೇರಿ ಬಾರಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಫೆ.22ರಂದು ಕೊಳ್ತಿಗೆ ಸಹಕಾರ ಸಂಘದ ಮುಂದಿನ ಆಡಳಿತ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರುಗಳ ಆಯ್ಕೆಗಾಗಿ ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ ಸಹಕಾರ ಭಾರತಿ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ರೈತಸ್ನೇಹಿ ಸಹಕಾರಿ ಬಳಗ 1 ಸ್ಥಾನವನ್ನಷ್ಟೇ ಪಡೆದುಕೊಂಡಿದೆ. ಪಕ್ಷೇತರರಾಗಿ ಸ್ಪರ್ಧಿಸಿದ್ದ ಮೂವರೂ ಪರಾಜಿತರಾಗಿದ್ದಾರೆ.
ಆಡಳಿತ ಮಂಡಳಿಯ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ 12, ರೈತಸ್ನೇಹಿ ಸಹಕಾರ ಬಳಗದಿಂದ 12, ಪಕ್ಷೇತರರು 3 ಸೇರಿದಂತೆ ಒಟ್ಟು 27 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು.
ಸಾಲಗಾರ ಕ್ಷೇತ್ರದ ಸಾಮಾನ್ಯ ಸ್ಥಾನದಿಂದ ಸಹಕಾರ ಭಾರತಿಯ ಜನಾರ್ಧನ ಗೌಡ ಪಿ, ತೀರ್ಥಾನಂದ ದುಗ್ಗಳ, ರಾಜೇಶ್ ಗೌಡ ಕುದ್ಕುಳಿ, ಸತೀಶ್ ಪಾಂಬಾರು, ಕಾಂಗ್ರೆಸ್ ಬೆಂಬಲಿತ ರೈತಸ್ನೇಹಿ ಸಹಕಾರಿ ಬಳಗದ ಪವನ್ ಡಿ.ಜಿ ದೊಡ್ಡಮನೆಯವರು ಚುನಾಯಿತರಾಗಿದ್ದಾರೆ. ಸಹಕಾರ ಭಾರತಿಯ ಬಾಲಕೃಷ್ಣ ಗೌಡ ಪಳ್ಳತ್ತಡ್ಕ, ರೈತ ಸ್ನೇಹಿ ಸಹಕಾರಿ ಬಳಗದ ವೆಂಕಟ್ರಮಣ ಕೆ.ಎಸ್ ಕಟ್ಟಪುಣಿ, ವಸಂತ ಕುಮಾರ್ ರೈ ಕೆ, ಲಕ್ಷ್ಮಣ ಗೌಡ ಪರಣೆ, ಯಶೋಧರ ಗೌಡ ಕೊಂರ್ಬಡ್ಕ, ಪಕ್ಷೇತರರಾಗಿದ್ದ ಲೋಕೇಶ್ ಪೆರ್ಲಂಪಾಡಿ, ಬೆಳ್ಯಪ್ಪ ಗೌಡರವರು ಸೋಲು ಅನುಭವಿಸಿದ್ದಾರೆ.
ಸಾಲಗಾರ ಕ್ಷೇತ್ರ ಮಹಿಳಾ ಸ್ಥಾನದಿಂದ ಸಹಕಾರ ಭಾರತಿಯ ಜಲಜಾಕ್ಷಿ ಮಾಧವ ಗೌಡ ದೊಡ್ಡಮನೆ ಕುಂಟಿಕಾನ, ಸುನಂದ ಲೋಕನಾಥ ಗೌಡರವರು ಗೆಲುವು ಸಾಧಿಸಿದ್ದಾರೆ. ರೈತ ಸ್ನೇಹಿ ಸಹಕಾರಿ ಬಳಗದ ನಾಗವೇಣಿ ಕೆ.ಕೆ ಕಟ್ಟಪುಣಿ, ಲಕ್ಷ್ಮೀ ಕೆ.ಜಿ ಕೆಮ್ಮಾರರವರು ಸೋಲು ಕಂಡಿದ್ದಾರೆ.
ಸಾಲಗಾರ ಹಿಂದುಳಿದ ವರ್ಗ ಎ ಸ್ಥಾನದಿಂದ ಸಹಕಾರ ಭಾರತಿಯ ಪ್ರವೀಣ ಜಿ.ಕೆರವರು ಗೆಲುವು ಸಾಧಿಸಿದ್ದಾರೆ. ರೈತ ಸ್ನೇಹಿ ಸಹಕಾರಿ ಬಳಗದ ಶಿವರಾಮ ಪೂಜಾರಿ ಪೆರ್ಲಂಪಾಡಿಯವರು ಸೋಲು ಕಂಡಿದ್ದಾರೆ.
ಹಿಂದುಳಿದ ವರ್ಗ ಬಿ ಸ್ಥಾನದಿಂದ ಸಹಕಾರ ಭಾರತಿಯ ಪ್ರಭಾಕರ ರೈ ಕೊಂರ್ಬಡ್ಕರವರು ಗೆಲುವು ಸಾಧಿಸಿದ್ದಾರೆ, ರೈತ ಸ್ನೇಹಿ ಸಹಕಾರಿ ಬಳಗದ ಸತೀಶ್ ಗೌಡ ನೂಜಿ, ಪಕ್ಷೇತರರಾಗಿದ್ದ ಶ್ರೀಧರ ಗೌಡ ಅಂಗಡಿಹಿತ್ಲುರವರು ಸೋಲು ಅನುಭವಿಸಿದ್ದಾರೆ.
ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಅಣ್ಣಪ್ಪ ನಾಯ್ಕ ಬಟ್ರಹಿತ್ಲುರವರು ಗೆಲುವು ಸಾಧಿಸಿದ್ದಾರೆ. ರೈತಸ್ನೇಹಿ ಸಹಕಾರಿ ಬಳಗದ ಅಪ್ಪು ನಾಯ್ಕ ಅಟೋಳಿಯವರು ಸೋಲು ಅನುಭವಿಸಿದ್ದಾರೆ.
ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಸಹಕಾರ ಭಾರತಿಯ ಕರಿಯರವರು ಗೆಲುವು ಸಾಧಿಸಿದ್ದಾರೆ. ರೈತಸ್ನೇಹಿ ಸಹಕಾರಿ ಬಳಗದ ಗುರುವಪ್ಪ ಎಂರವರು ಸೋಲು ಅನುಭವಿಸಿದ್ದಾರೆ.
ಸಾಲಗಾರರಲ್ಲದ ಸ್ಥಾನದಿಂದ ಸಹಕಾರ ಭಾರತಿಯ ಪ್ರೇಮಾ ಗಂಗಾಧರ ಗೌಡ ಕುಂಟಿಕಾನರವರು ಗೆಲುವು ಸಾಧಿಸಿದ್ದಾರೆ. ರೈತ ಸ್ನೇಹಿ ಸಹಕಾರಿ ಬಳಗದ ವಿಶಾಲಾಕ್ಷಿ ಪ್ರಮೋದ್ ಕೆ.ಎಸ್ರವರು ಸೋಲು ಅನುಭವಿಸಿದ್ದಾರೆ.
ಚುನಾವಣೆಯಲ್ಲಿ ಸಾಲಗಾರ ಕ್ಷೇತ್ರದಿಂದ ಅರ್ಹರಾಗಿದ್ದ 840 ಜನರಲ್ಲಿ ಒಟ್ಟು 801 ಜನ, ಸಾಲಗಾರರಲ್ಲದ ಕ್ಷೇತ್ರದಿಂದ ಅರ್ಹರಾಗಿದ್ದ 79 ಜನರಲ್ಲಿ 75 ಜನ ಸದಸ್ಯರು ಮತ ಚಲಾಯಿಸಿದ್ದಾರೆ. ಚುನಾವಣಾ ರಿಟರ್ನಿಂಗ್ ಅಧಿಕಾರಿಯಾಗಿದ್ದ ಶಿವಲಿಂಗಯ್ಯರವರು ಚುನಾವಣಾ ಪ್ರಕ್ರಿಯೆ ನಡೆಸಿ ಫಲಿತಾಂಶ ಘೋಷಣೆ ಮಾಡಿದರು. ಇಲಾಖಾ ಸಿಬ್ಬಂದಿಗಳು ಮತ್ತು ಕೊಳ್ತಿಗೆ ಸಹಕಾರ ಸಂಘದ ಸಿಇಓ ಗಿರಿಜಾ ಕೆ ಹಾಗೂ ಸಂಘದ ಸಿಬ್ಬಂದಿಗಳು ಸಹಕರಿಸಿದರು.