ಶ್ರೀ ರಾಮಕುಂಜೇಶ್ವರ ದೇವರಿಗೆ ಲಕ್ಷ್ಮೀಶ ಅರ್ಬಿತ್ತಾಯರಿಂದ ಚಿನ್ನದ ರುದ್ರಾಕ್ಷಿ ಮಾಲೆ ಸಮರ್ಪಣೆ

0

ರಾಮಕುಂಜ: ಶ್ರೀ ರಾಮಕುಂಜೇಶ್ವರ ದೇವರ ಪರಮ ಭಕ್ತರಾದ ರಾಮಕುಂಜ ಗ್ರಾಮದ ಅರ್ಬಿ ನಿವಾಸಿ, ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಲಕ್ಷ್ಮೀಶ ಅರ್ಬಿತ್ತಾಯ (ಆರ್.ಯಲ್.ಭಟ್ ಮುಂಬೈ )ರವರು ಫೆ.15ರಂದು ಶ್ರೀ ದೇವರಿಗೆ ಚಿನ್ನದ ರುದ್ರಾಕ್ಷಿ ಮಾಲೆ ಸಮರ್ಪಿಸಿದರು.


ದೇವರಿಗೆ ಶತರುದ್ರಾಭಿಷೇಕ ಹಾಗೂ 108 ಬಲಿ ರಂಗಪೂಜೆ ಸೇವೆ ಅರ್ಪಿಸಿದ ಅವರು ಸುಮಾರು 8 ಪವನ್ ತೂಕದ ಚಿನ್ನದ ರುದ್ರಾಕ್ಷಿ ಮಾಲೆಯನ್ನು ದೇವರಿಗೆ ಸಮರ್ಪಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರಾದ ಅನಂತ ಉಡುಪ ಅವರು ಪೂಜಾ ವಿಧಿ ವಿಧಾನ ನೆರವೇರಿಸಿದರು.

ಈ ಸಂದರ್ಭದಲ್ಲಿ ವೇದವ್ಯಾಸ ರಾಮಕುಂಜ, ರಾಜಮಣಿ ರಾಮಕುಂಜ, ರಾಜಾರಾಮ್ ರಾಮಕುಂಜ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಗುರುಪ್ರಸಾದ ರಾಮಕುಂಜ, ಉತ್ಸವ ಸಮಿತಿ ಅಧ್ಯಕ್ಷರಾದ ಮಾಧವ ಆಚಾರ್ಯ ಇಜ್ಜಾವು, ಉಪಾಧ್ಯಕ್ಷರಾದ ಟಿ.ನಾರಾಯಣ ಭಟ್, ರಾಧಾಕೃಷ್ಣ ಕುವೆಚ್ಚಾರು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಉತ್ಸವ ಸಮಿತಿ ಸದಸ್ಯರು, ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here