ಪುತ್ತೂರು: ದೇಯಿ ಬೈದ್ಯೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ 5 ರ ವರೆಗೆ ಜರಗುವ ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ವಿತರಣೆ ಯುವವಾಹಿನಿ ಸುಳ್ಯ ಘಟಕ ಹಾಗೂ ಬಿಲ್ಲವ ಸಂಘದ ನೇತೃತ್ವದಲ್ಲಿ ಸುಳ್ಯದಲ್ಲಿ ಜರಗಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ ಧಾರ್ಮಿಕತೆಯ ಜೊತೆ ಸಮಾಜದ ಅಭಿವೃದ್ಧಿಗೆ ಶಕ್ತಿ ನೀಡುವ ಕೆಲಸ ಗೆಜ್ಜೆಗಿರಿಯ ಮೂಲಕ ನಡೆಯುತ್ತಿದ್ದು ಬಿಲ್ಲವ ಸಮಾಜ ಒಗ್ಗಟ್ಟಿನ ಮೂಲಕ ಕೆಲಸ ಮಾಡಬೇಕಾಗಿದೆ ಎಂದರು. ಸುಳ್ಯ ತಾಲೂಕಿನ ದೇಯಿ ಬೈದ್ಯೆತಿ ಕೋಟಿ ಚೆನ್ನಯರ ಸರ್ವ ಭಕ್ತರನ್ನು ಕ್ಷೇತ್ರದ ಜಾತ್ರೋತ್ಸವಕ್ಕೆ ಬಿಲ್ಲವ ಸಂಘ ಹಾಗೂ ಯುವವಾಹಿನಿ ಸುಳ್ಯ ಘಟಕದ ಮೂಲಕ ಆಮಂತ್ರಿಸಿ ಜಾತ್ರೋತ್ಸವ ಯಶಸ್ವಿ ಗೊಳಿಸಬೇಕು ಎಂದರು.
ಸಭೆಯಲ್ಲಿ ಸುಳ್ಯ ತಾಲೂಕು ನಗರಸಭೆಯ ಅಧ್ಯಕ್ಷೆ ಶಶಿಕಲಾ ನಿರಬಿದಿರೆ ಮಾತನಾಡಿ, ಗೆಜ್ಜೆಗಿರಿ ಜಾತ್ರಾ ಮಹೋತ್ಸವದ ಯಶಸ್ವಿಗೆ ನಾವೆಲ್ಲರೂ ಕೆಲಸ ಮಾಡ ಬೇಕಾಗಿದೆ ಬಿಲ್ಲವ ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕಾಗಿದೆ ಎಂದರು.
ವೇದಿಕೆಯಲ್ಲಿ ಗೆಜ್ಜೆಗಿರಿ ಮಾಧ್ಯಮ ವಕ್ತಾರ ರಾಜೇಂದ್ರ ಚಿಲಿಂಬಿ,ಗೆಜ್ಜೆಗಿರಿ ವಲಯ ಪ್ರಮುಖರಾದ ನಾಗೇಶ್ ಬೈಕಂಪಾಡಿ, ವಿಜಯ ಕುಮಾರ್, ಸುಳ್ಯ ತಾಲೂಕು ಬಿಲ್ಲವ ಸಂಘ ಕಾರ್ಯದರ್ಶಿ ನವೀನ್ ಸಾರಕರೆ, ಯುವವಾಹಿನಿ ಸುಳ್ಯ ಘಟಕದ ಅಧ್ಯಕ್ಷರು ಹರೀಶ್ ಬೆಳ್ಳಾರೆ,ಕಾರ್ಯದರ್ಶಿ ನವೀನ್ ರಾಮಕುಮೇರಿ, ಸಂಘಟನಾ ಕಾರ್ಯದರ್ಶಿ ಲೋಹಿತ್ ರೆಂಜಳ, ಯುವವಾಹಿನಿ ಘಟಕದ ಪೂರ್ವಾಧ್ಯಕ್ಷ, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನೂತನ ಪ್ರವೀಣ್ ನೆಟ್ಟಾರು ಸ್ವಾಗತಿಸಿ ,ವಂದಿಸಿದರು. ಜಿವಿತಾ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.