ಪುತ್ತೂರು: ತಾಲೂಕಿನ ಮಾಡನ್ನೂರು ರೇಂಜ್ ಸಮಸ್ತ ಮದರಸ ಮೇನೇಜ್ ಮೆಂಟ್ ಮತ್ತು ಅಧ್ಯಾಪಕರ ಒಕ್ಕೂಟ ಜಂಇಯತ್ತುಲ್ ಮುಅಲ್ಲಿಮೀನ್ ಇದರ ವತಿಯಿಂದ ಪ್ರಸ್ತುತ ರೇಂಜಿಗೆ ಒಳಪ್ಪಟ್ಟ ಎಲ್ಲಾ ಮುಅಲ್ಲಿಮರು, ಮುಫತ್ತಿಷ್, ಮುದರ್ರಿಸರಿಗೆ ರಂಝಾನ್ ಕಿಟ್ ಮತ್ತು ವಸ್ತ್ರ ವಿತರಣೆ ಕಾರ್ಯಕ್ರಮ ಮಾಡನ್ನೂರು ಜುಮಾ ಮಸೀದಿಯಲ್ಲಿ ನಡೆಯಿತು.

ಮೇನೇಜ್ ಮೆಂಟ್ ಅಧ್ಯಕ್ಷ ಖಾದರ್ ಹಾಜಿ ಹಿರಾ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಖತೀಬರಾದ ಎಸ್ ಬಿ ಮುಹಮ್ಮದ್ ದಾರಿಮಿ ಉದ್ಘಾಟಿಸಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಶ್ಲಾಘಿಸಿದರು.
ಮಾಡನ್ನೂರು ರೇಂಜ್ ಅಧ್ಯಕ್ಷ ಶಂಸುದ್ದೀನ್ ದಾರಿಮಿ ಸ್ವಾಗತಿಸಿ ದಾನಿಗಳಿಗಾಗಿ ಪ್ರಾರ್ಥಿಸಿದರು. ಮಾಡನ್ನೂರು ಜಮಾಅತ್ ಅಧ್ಯಕ್ಷ ಬುಶ್ರಾ ಅಬ್ದುಲ್ ಅಝೀಝ್ ರವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ರೇಂಜ್ ಉಪಾಧ್ಯಕ್ಷರಾದ ನಝೀರ್ ಅಝಹರಿ ಬೊಳ್ಮಿನಾರ್, ನೌಶಾದ್ ಫೈಝಿ, ಕೆ ಕೆ ಇಬ್ರಾಹಿಂ ಹಾಜಿ, ಸಿ ಎ ಅಬ್ದುಲ್ ಖಾದರ್ ಹಾಜಿ, ಆಮು ಉಸ್ತಾದ್ ಮುಂತಾದವರು ಮಾತಾಡಿದರು.
ವೇದಿಕೆಯಲ್ಲಿ ಮೇನೇಜ್ ಮೆಂಟ್ ಕಾರ್ಯದರ್ಶಿ ಕೆ ಕೆ ಅಬ್ದುಲ್ ಖಾದರ್ ಅಮ್ಚಿನಡ್ಕ, ಯೂಸುಫ್ ಹಾಜಿ ಅರೆಯಲಡಿ, ಶುಕೂರ್ ದಾರಿಮಿ ಕಾವು, ಅಬ್ದುರ್ರಹ್ಮಾನ್ ಫೈಝಿ, ಆರಿಫ್ ಅಸ್ನವಿ, ನಿಝಾರ್ ಯಮಾನಿ ಮುಂತಾದವರು ಉಪಸ್ಥಿತರಿದ್ದರು. ರೇಂಜ್ ಕಾರ್ಯದರ್ಶಿ ರಝಾಕ್ ಮುಸ್ಲಿಯಾರ್ ಪಾಲ್ಯತ್ತಡ್ಕ ವಂದಿಸಿದರು.