ಪುತ್ತೂರು: ಸರ್ವೆ ಗ್ರಾಮದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ ಉದಯ ಕುಮಾರ್ ರೈ ಬಾಕುಡರವರು ಆಯ್ಕೆಯಾಗಿದ್ದಾರೆ. ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದ ಉಮೇಶ್ ಕಾವಡಿಯವರು ದೇವಸ್ಥಾನದ ಸಂಪೂರ್ಣ ಆಡಳಿತ, ಬ್ಯಾಂಕ್ ಪಾಸ್ ಪುಸ್ತಕ, ಚೆಕ್ ಪುಸ್ತಕ, ಸ್ಟಾಕ್ ರಿಜಿಸ್ಟರ್ ಇತ್ಯಾದಿ ದಾಖಲೆ ಪತ್ರಗಳನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾಗಿ ಪ್ರಧಾನ ಅರ್ಚಕ ನಾಗೇಶ್ ಕಣ್ಣಾರಾಯ, ಗಣೇಶ್ ನೇರೋಳ್ತಡ್ಕ, ಸುನೀತ ರೈ ಸೊರಕೆ, ಯಶೋಧ ನೆಕ್ಕಿಲು, ಚಂದ್ರಶೇಖರ ಎನ್, ಆನಂದ ರಾವ್,ರಾಧಾಕೃಷ್ಣ ರೈ ಚಾವಡಿ, ಪ್ರವೀಣ್ ಪ್ರಭುರವರುಗಳಾಗಿದ್ದಾರೆ.
