ಫಲ್ಗುಣಿ ನದಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಮೃತ್ಯು

0

ಪುತ್ತೂರು: ಹತ್ತನೇ ತರಗತಿ ವಿದ್ಯಾರ್ಥಿ ಫಲ್ಗುಣಿ ನದಿಗೆ ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಆರಂಬೋಡಿ ಗ್ರಾಮದಲ್ಲಿ ಫೆ.23ರ ಸಂಜೆ ಸಂಭವಿಸಿದೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ಮಾರಂಗ ನಿವಾಸಿ ಪವನ್‌(16.ವ) ಮೃತಪಟ್ಟ ಬಾಲಕ.

ಮೃತರು ತಂದೆ ವಸಂತ ಪೂಜಾರಿ ತಾಯಿ ವಿಜಯ, ಹಾಗೂ ತಮ್ಮನನ್ನು ಅಗಲಿದ್ದಾರೆ. ಆರಂಬೋಡಿ ಗ್ರಾಮದ ಸೂರಂಟೆಯಲ್ಲಿರುವ ತನ್ನ ಅಜ್ಜಿಯ ಮನೆಯಿಂದ ಸಿದ್ದಕಟ್ಟೆ ಪ್ರೌಢಶಾಲೆಗೆ ಹೋಗುತ್ತಿದ್ದ ಪವನ್ 10ನೇ ತರಗತಿಯಲ್ಲಿ ಓದುತ್ತಿದ್ದರು. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಾಜ್ಜಿ

LEAVE A REPLY

Please enter your comment!
Please enter your name here