ಪುತ್ತೂರು: ಕೋರ್ಟ್ ರಸ್ತೆಯಲ್ಲಿ 98 ವರ್ಷಗಳಿಂದ ಚಿನ್ನಾಭರಣ ವ್ಯಾಪಾರ ನಡೆಸುತ್ತಿರುವ ಗ್ರಾಹಕರ ನಂಬಿಕೆಗೆ ಪಾತ್ರವಾಗಿರುವ ಶಿವ ಭಟ್ ಜ್ಯುವೆಲರ್ಸ್ನಲ್ಲಿ ಎಕ್ಸ್ಕ್ಲೂಸಿವ್ ಆಫರ್ ವೇಸ್ಟೇಜ್ ಶೇಕಡ 5 ರಿಂದ ಪ್ರಾರಂಭ ಮತ್ತು ಅತಿ ಹೆಚ್ಚಿನ ವೆರೈಟಿ ಮತ್ತು ವಿನ್ಯಾಸಗಳ ಆಭರಣಗಳು ಗ್ರಾಹಕರಿಗೆ ಲಭ್ಯವಿರುತ್ತದೆ.
ಎಕ್ಸ್ಕ್ಲೂಸಿವ್ ಆಫರ್ ವೇಸ್ಟೇಜ್ ಶೇಕಡ 5 ರಿಂದ ಪ್ರಾರಂಭ ಈ ಕೊಡುಗೆ ಮಾರ್ಚ್ 5ರ ತನಕ ಮಾತ್ರ ಇರುತ್ತದೆ. ಈ ಕೊಡುಗೆಯ ಪ್ರಾರಂಭೋತ್ಸವವನ್ನು ವಿದ್ಯಾ ಈಶ್ವರ ಚಂದ್ರ ಇವರು ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು. ಈ ಸಂದರ್ಭದಲ್ಲಿ ಬಂಗಾರಡ್ಕ ರಾಮ ಭಟ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ನವೀನ ಮಾದರಿಯ ಡಿಸೈನ್ಗಳನ್ನು ಗ್ರಾಹಕರಿಗೆ ಕಡಿಮೆ ವೇಸ್ಟೇಜ್ ನೊಂದಿಗೆ ಕೊಡುತ್ತಿದ್ದಾರೆ. ಪ್ರಾರಂಭದಿಂದಲೂ ಅತಿ ಕಡಿಮೆ ವೇಸ್ಟೇಜ್ನಲ್ಲಿ ಆಭರಣಗಳನ್ನು ಗ್ರಾಹಕರಿಗೆ ಕೊಡುತ್ತಿರುವ ಈ ಮಳಿಗೆ ತುಂಬಾ ವಿಶ್ವಾಸಾರ್ಹ ಮಳಿಗೆಯಾಗಿದೆ. ಇನ್ನು ಎರಡು ವರ್ಷಗಳಲ್ಲಿ ಶತಮಾನವನ್ನು ಪೂರೈಸುತ್ತಿರುವ ಮಳಿಗೆ ಇದಾಗಿದೆ ಎಂದು ಹೇಳಿದರು. ವಿದ್ಯಾಶ್ರೀ ಇವರು ಪ್ರಥಮ ಖರೀದಿಯನ್ನು ಮಾಡಿದರು. ಗ್ರಾಹಕರೆಲ್ಲರೂ ಇದರ ಸದುಪಯೋಗವನ್ನು ಪಡೆಯುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.