ಈಶ್ವರಮಂಗಲ: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಫೆ.25ರಂದು ಬೆಳಿಗ್ಗೆ ಮೂಲಸ್ಥಾನವಾದ ಮೆಣಸಿನಕಾನ ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯರ ಜಾಗದಲ್ಲಿ ವರ್ಯರಿಂದ ಪೂಜೆ ನಡೆಯಿತು.
ಪವಿತ್ರಪಾಣಿ ಗೋಪಾಲಕೃಷ್ಣ ಕುಂಜತ್ತಾಯ, ಪ್ರಗತಿಪರ ಕೃಷಿಕ ಮುಂಡ್ಯ ಶ್ರೀಕೃಷ್ಣ ಭಟ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರತನ್ ಕುಮಾರ್, ಆಶಿಷ್ ಕುಂಜತ್ತಾಯ, ಸಂದೀಪ ಕಾರಂತ, ನಾೖಕ್ ಕರ್ನೂರುಗುತ್ತು, ಪ್ರಧಾನ ಕಾರ್ಯದರ್ಶಿ ಎಸ್. ಮೋಹನದಾಸ ಶೆಟ್ಟಿ ನೂಜಿಬೈಲು, ಉಪಾಧ್ಯಕ್ಷ ಸದಾಶಿವ ರೈ ನಡುಬೈಲು, ಉತ್ಸವ ಸಮಿತಿಯ ಉಪಾಧ್ಯಕ್ಷ ಸುಭಾಶ್ಚಂದ್ರ ರೈ ಮೈರೋಳು, ಕಾರ್ಯದರ್ಶಿ ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ ಭಕ್ತಾದಿಗಳು ಉಪಸ್ಥಿತರಿದ್ದರು.

ಹಗಲು ಮತ್ತು ರಾತ್ರಿ ನಿತ್ಯ ಬಲಿ, ಸಂಜೆ ಪಂಚಶ್ರೀ ಮಹಿಳಾ ಭಜನಾ ತಂಡ ಈಶ್ವರಮಂಗಲ ಇವರಿಂದ ಮಕ್ಕಳ ಸಾಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ನೀಡಿದ ತಂಡದವರಿಗೆ ದೇವಳದ ವತಿಯಿಂದ ಜಯಂತಿ ಗಂಗಾಧರರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ. ಮಂಜುನಾಥ ರೈ, ಕಾರ್ಯದರ್ಶಿ ಎಸ್. ಮೋಹನದಾಸ ಶೆಟ್ಟಿ ನೂಜಿಬೈಲು, ಜತೆಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ, ಉತ್ಸವ ಸಮಿತಿಯ ಉಪಾಧ್ಯಕ್ಷ ಸುಭಾಶ್ಚಂದ್ರ ರೈ ಮೈರೋಳು, ಕಾರ್ಯದರ್ಶಿ ಪೂರ್ಣಚಂದ್ರ ನೆಲ್ಲಿತ್ತಡ್ಕ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಆನಂದ ರೈ ಸಾಂತ್ಯ, ಸಂಚಾಲಕ ಕೊರಗಪ್ಪ ಮುಂಡ್ಯ ಉಪಸ್ಥಿತರಿದ್ದರು.
ಶಿಕ್ಷಕಿ ಸುಮಾಲತಾ ಜಗದೀಶ ರಾವ್ ಸಾಂತ್ಯ ಮತ್ತು ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ವೀಕ್ಷಿಸಿದ ಅದೃಷ್ಟಶಾಲಿಗಳಿಗಾಗಿ ಲಕ್ಕಿ ಚೀಟಿ ಮುಖಾಂತರ ಆಯ್ಕೆ ಮಾಡಲಾಯಿತು. ವಿಜೇತರಾಗಿ ಪ್ರಥಮ ತನ್ವಿ ರೈ, ದ್ವಿತಿಯ ಸನಿಹ, ತೃತಿಯ ರಂಜಿತಾ ಪ್ರಸಾದ್, ನಾಲ್ಕನೆ ಬಹುಮಾನ ಸುಜಯ್, ಐದನೇ ಬಹುಮಾನ ರಿಷಿಕಾ ಪಡೆದುಕೊಂಡರು.
ವಿಭಿನ್ನ ಶೈಲಿಯ ತುಳು ನಾಟಕ ಕಡಂಬರ
ಎಂಕ್ಲು ತುಳುವೆರ್ ಕಲಾಬಳಗ ಈಶ್ವರಮಂಗಲ ಇವರಿಂದ ರಂಗ ಚಾಣಕ್ಯ ಯಂ. ರಾಮ ನಿರ್ದೆಶನದಲ್ಲಿ ವಿಶೇಷ ಆಕರ್ಷಣೆಗಳೊಂದಿಗೆ ತುಳು ವಿಭಿನ್ನ ಶೈಲಿಯ ನಾಟಕ ಕಡಂಬರ ನಡೆಯಿತು. ಕಳೆದ 25 ವರ್ಷಗಳಿಂದ ಕಲಾವಿದರಾಗಿ ಕಥೆ, ನಿರ್ದೆಶನ ಮಾಡುತ್ತಿರುವ ಯಂ. ರಾಮರವರನ್ನು ಆನಂದ ರೈ ಸಾಂತ್ಯರವರು ಸನ್ಮಾನಿಸಿದರು. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಎ. ಮಂಜುನಾಥ ರೈ, ಕಾರ್ಯದರ್ಶಿ ಎಸ್. ಮೋಹನದಾಸ ಶೆಟ್ಟಿ ನೂಜಿಬೈಲು, ಜತೆಕಾರ್ಯದರ್ಶಿ ವಿಕ್ರಂ ರೈ ಸಾಂತ್ಯ, ಉತ್ಸವ ಸಮಿತಿಯ ಉಪಾಧ್ಯಕ್ಷ ಸುಭಾಶ್ಚಂದ್ರ ರೈ ಮೈರೋಳು, ಕಾರ್ಯದರ್ಶಿ ಪೂರ್ಣಚಂದ್ರ ನೆಲ್ಲಿತ್ತಡ್ಕ, ಸಾಸ್ಕೃತಿಕ ಸಮಿತಿಯ ಅಧ್ಯಕ್ಷ ಆನಂದ ರೈ ಸಾಂತ್ಯ, ಸಂಚಾಲಕ ಕೊರಗಪ್ಪ ಮುಂಡ್ಯ ಉಪಸ್ಥಿತರಿದ್ದರು.
ಶಿಕ್ಷಕ ದೇವಿಪ್ರಕಾಶ್ ಕುತ್ಯಾಳ ಕಾರ್ಯಕ್ರಮ ನಿರೂಪಿಸಿದರು.
