ಪುತ್ತೂರು: ವಿಶ್ವ ಕನ್ನಡ ಸಂಸ್ಥೆ(ರಿ)ಇದರ ವತಿಯಿಂದ ವಿಶ್ವ ಕನ್ನಡ 6ನೇ ರಾಜ್ಯ ಸಮ್ಮೇಳನದಲ್ಲಿ “ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ಹೆಸರು ದಾಖಲಿಸುವ ಸಾವಿರ ಕವಿಗಳ ಸಮ್ಮೇಳನ ಕವಿಗೋಷ್ಠಿ ಫೆಬ್ರವರಿ 23ರಂದು ಬೆಂಗಳೂರಿನ ಹೆಸರಘಟ್ಟ ಮುಖ್ಯರಸ್ತೆ 73ರಲ್ಲಿರುವ ಅಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಸಮ್ಮೇಳನದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ ಮಾಡುವ ಮೂಲಕ ಯುವ ಸಾಹಿತಿ “ಸತೀಶ್ ಬಿಳಿಯೂರು” ಇವರ ಹೆಸರು” ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲಾಯಿತು. ಇವರ ಹೆಸರು “ಕರ್ನಾಟಕ ಕನ್ನಡ ಬುಕ್ ಆಫ್ ರೆಕಾರ್ಡ್ಸ್ “ಮತ್ತು “ವರ್ಲ್ಡ್ ಪ್ರೆಸ್ ಬುಕ್ ಆಫ್ ರೆಕಾರ್ಡ್ಸ್” ನಲ್ಲೂ ದಾಖಲಾಗಿದೆ.

ಸತೀಶ್ ಬಿಳಿಯೂರು ಸಾಹಿತ್ಯ ಕ್ಷೇತ್ರ
ಸತೀಶ್ ಬಿಳಿಯೂರು ಇವರು ವೃತ್ತಿ ಜೊತೆಯಲ್ಲಿ ಸಾಹಿತ್ಯದ ಆಸಕ್ತಿಯಿಂದ ಬರವಣಿಗೆಯಲಿ ಛಾಪು ಮೂಡಿಸುತ್ತಾ ನೂರಾರು ಕವಿತೆ,ಮತ್ತು ಕಥೆ,ಲೇಖನ ಭಕ್ತಿಗೀತೆ ರಚಿಸಿದ್ದಾರೆ. “ನನ್ನೆದೆ ಸಪ್ಪಳ “ಕವನ ಸಂಕಲನ ಕೃತಿ .”ಭಾವದೆಲೆ ಮೇಲೆ ಇಬ್ಬನಿ “ಎರಡನೇ ಕವನ ಸಂಕಲನ ಕೃತಿ ಕಥಾಬಿಂದು ಪ್ರಕಾಶನದ ಮೂಲಕ ಬಿಡುಗಡೆಗೆಯಾಗಿದೆ. 50ಕ್ಕೂ ಹೆಚ್ಚು ತಾಲೂಕು, ಜಿಲ್ಲೆ,ರಾಜ್ಯ , ಅಂತರ್ ರಾಜ್ಯ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುವ ಇವರು “ಸಾಹಿತ್ಯ ರತ್ನ “ಪ್ರಶಸ್ತಿ, ಕರ್ನಾಟಕ ರಾಜ್ಯ ಭಾವೈಕ್ಯತಾ ಪರಿಷತ್ ಮಂಗಳೂರು “ಕಾವ್ಯಸಿರಿ” ಪ್ರಶಸ್ತಿ 2023,ಕುರುನಾಡ ಹಣತೆ ಸಾಹಿತ್ಯ ಬಳಗ ಚಿತ್ರದುರ್ಗ ಕರುನಾಡ ಹಣತೆ “ಸಾಹಿತ್ಯ ಸೇವಾರತ್ನ ” ರಾಜ್ಯಪ್ರಶಸ್ತಿ 2023,ಸುಳ್ಯ ಚಂದನ ಸಾಹಿತ್ಯ ವೇದಿಕೆ ಸುಳ್ಯ “ಚಂದನರತ್ನ” ಪ್ರಶಸ್ತಿ ,ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ರಾಜ್ಯ ಘಟಕ ದಾವಣಗೆರೆ ಇವರಿಂದ “ಸಾಹಿತ್ಯ ಸೌರಭ “ರಾಜ್ಯ ಪ್ರಶಸ್ತಿ, ಸಾಧನಾ ರಾಷ್ಟ್ರೀಯ ಪ್ರತಿಷ್ಠಾನ ಮಂಗಳೂರು ಹಾಸ್ಯ ನಟ ದೊಡ್ಡಣ್ಣ ಇವರ ಕೈಯಿಂದ “ಕವಿ ಕಾವ್ಯ ಸನ್ಮಾನ” “ತುಳುನಾಡ ಮಣ್ಣಸಿರಿ ಪ್ರಶಸ್ತಿ”,ಸಾಮ್ರಾಟ್ ಯುವಕ ಮಂಡಲ (ರಿ)ಬಿಳಿಯೂರು ಈ ಸಂಘಟನೆಯಿಂದ” ಹುಟ್ಟೂರ ಗೌರವ” ಸನ್ಮಾನ ಬಿಳಿಯೂರು ಹಿರಿಯ ಪ್ರಾಥಮಿಕ ಶಾಲೆಯ ಹೆಮ್ಮೆಯ ಹಿರಿಯ ವಿದ್ಯಾರ್ಥಿ ಯುವ ಪ್ರತಿಭೆ ಸನ್ಮಾನ. ಚೇತನಾ ಪೌಂಡೇಶನ್ ಕರ್ನಾಟಕ ,ಬೆಂಗಳೂರು ಇವರಿಂದ “ಕಾವ್ಯ ಚೇತನ “ರಾಜ್ಯ ಪ್ರಶಸ್ತಿ,”ಉದಯೊನ್ಮುಖ ರವಿ, ಮ್ಯಾಕ್ಸ್ ಲೈಪ್ ಇನ್ಸೂರೆನ್ಸ್ ಮತ್ತು ಆ್ಯಸಲ್ ಬ್ಯಾಂಕ್ ಮಂಗಳೂರು ಇವರಿಂದ “ಕಲಾರತ್ನ” ಬಿರುದು2024, ಕರ್ನಾಟಕ ಬುಕ್ಸ್ ಆಪ್ ರೆಕಾರ್ಡ್ 2024 ಹಾಗೂ ವಲ್ಡ್ ಪ್ರೆಸ್ ಬುಕ್ಸ್ ಆಪ್ ರೆಕಾರ್ಡ್ 2024 ಇಂಡಿಯನ್ ಬುಕ್ ಆಫ್ರೆ ಕಾರ್ಡ್2025.ಕಲಾಕುಂಚ ದಾವಣಗೆರೆ ಇವರಿಂದ”ಕರ್ನಾಟಕ ಮುಕುಟಮಣಿ” ರಾಜ್ಯ ಪ್ರಶಸ್ತಿ ಮತ್ತು ಬೆಳಕು ಕವಿ ಬಳಗ ಇವರಿಂದ”ಕವಿರತ್ನ “ರಾಷ್ಟ್ರೀಯ ಪ್ರಶಸ್ತಿ ಬೆಂಗಳೂರು ಕಾವ್ಯಶ್ರೀ ಪೌಂಡೇಶನ್ ಕಾವ್ಯಶ್ರೀ ಸಾಹಿತ್ಯ ರಾಜ್ಯ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಹಾಗೂ ಸನ್ಮಾನವನ್ನು ಪಡೆದುಕೊಂಡಿರುತ್ತಾರೆ.