ಪುತ್ತೂರು ಮಹಿಳಾ ಬಂಟರ ವಿಭಾಗದ ಮಾಸಿಕ ಸಭೆ, ಮಹಿಳಾ ದಿನಾಚರಣೆ ಬಗ್ಗೆ ಸಮಾಲೋಚನೆ

0

ಪುತ್ತೂರು: ಬಂಟರ ಸಂಘ ಪುತ್ತೂರು ತಾಲ್ಲೂಕು (ರಿ )ಇದರ ಮಹಿಳಾ ಬಂಟರ ವಿಭಾಗ ಪುತ್ತೂರು ಇವರ ಮಾಸಿಕ ಸಭೆ ಹಾಗೂ ಮಹಿಳಾ ದಿನವನ್ನು ಆಚರಿಸುವ ಬಗ್ಗೆ ಸಮಾಲೋಚನಾ ಸಭೆ ಫೆ.25 ರಂದು‌ ಪುತ್ತೂರು ಬಂಟರ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ ರೈ ವಹಿಸಿದ್ದರು. ಬಂಟರ ಸಂಘದ ನಿರ್ದೇಶಕರು ಹಾಗೂ ಮಹಿಳಾ ವಿಭಾಗದ ಕ್ರೀಡಾ ಸಂಚಾಲಕರು ಆಗಿರುವ ಸ್ವರ್ಣಲತಾ ಜೆ ರೈ, ಉಪಾಧ್ಯಕ್ಷರಾದ ಕೃಷ್ಣವೇಣಿ ಕೆ ರೈ, ಸಾಂಸ್ಕೃತಿಕ ಸಂಚಾಲಕರಾದ ಹರಿಣಾಕ್ಷಿ ಜೆ ರೈ, ಕೋಶಾಧಿಕಾರಿ ಅರುಣಾ ಡಿ ರೈ, ಪುತ್ತೂರು ಮಹಿಳಾ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ರೈ ಉಪಸ್ಥಿತರಿದ್ದರು. ಮಹಿಳಾ ದಿನಾಚರಣೆಯ ಬಗ್ಗೆ ಸಂಘದ ವಿಶೇಷ ಆಹ್ವಾನಿತರಾದ ಅನಿತಾ ಹೇಮನಾಥ ಶೆಟ್ಟಿ ಸೂಕ್ತ ಸಲಹೆ ಸೂಚನೆ ನೀಡಿದರು.

ಮಾರ್ಚ್ 11ರಂದು ಪುತ್ತೂರು ಮಹಿಳಾ ವಿಭಾಗದ ವತಿಯಿಂದ “ಮಹಿಳಾ ದಿನಾಚರಣೆ ” ಪುರ್ವಾಹ್ನ ಗಂಟೆ 10.00 ರಿಂದ ಸಂಜೆ ಗಂಟೆ 4.00 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ. ಭಜನೆ,ಜಾನಪದ ನೃತ್ಯಗಳು, ಸಾಧಕರಿಗೆ ಸನ್ಮಾನ,ಗೌರವರ್ಪಣೆ, ಆಶಯ ಭಾಷಣ, ಭೋಜನ, ಮಹಿಳೆಯರಿಂದ “ಮಹಿಷ ಮರ್ದಿನಿ” ಯಕ್ಷಗಾನ ನಡೆಯಲಿದ್ದು, ಸರ್ವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಸಂಘದ ಅಧ್ಯಕ್ಷೆ ಗೀತಾ ಮೋಹನ ರೈ ಸಭೆಯಲ್ಲಿ ತಿಳಿಸಿದರು.
ಪದಾಧಿಕಾರಿಗಳು, ಗೌರವ ಸಲಹೆಗರಾರು, ನಿರ್ದೇಶಕರು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿರಿದ್ದರು. ಶೀಲಾ ಯಂ ರೈ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ ಶೆಟ್ಟಿ ಸ್ವಾಗತಿಸಿ, ಕೋಶಾಧಿಕಾರಿ ಅರುಣಾ ಡಿ ರೈ ವಂದಿಸಿದರು. ರಾಜೀವಿ ವಿ ರೈ ಸಹಕರಿಸಿದರು.

LEAVE A REPLY

Please enter your comment!
Please enter your name here