ಪುತ್ತೂರು: ಎಪಿಎಂಸಿ ರಸ್ತೆಯ ಬಳಿ ಆಟೋ ರಿಕ್ಷಾ ಸರ್ವಿಸ್ ಶೋರೂಮ್ ಬಳಿ ಹೆಜ್ಜೇನು ದಾಳಿಯಾಗಿ ಹಲವಾರು ಮಂದಿ ಗಾಯಗೊಂಡ ಘಟನೆ ಫೆ.27 ರಂದು ನಡೆದಿದೆ.

ರಿಕ್ಷಾ ಚಾಲಕರೋರ್ವರು ತೀವ್ರ ಗಾಯಗೊಂಡಿದ್ದಾರೆ. ಬಡಕೋಡಿಯ ರಿಕ್ಷಾ ಚಾಲಕ ಪ್ರಕಾಶ್ ಎಂಬವರು ತೀವ್ರ ಗಾಯಗೊಂಡವರು. ಅವರು ರಿಕ್ಷಾ ಸರ್ವಿಸ್ ಗೆ ಬಂದು ತನ್ನ ರಿಕ್ಷಾದಲ್ಲಿ ಮಲಗಿದ್ದರು. ಈ ವೇಳೆ ಹೆಜ್ಜೇನು ದಾಳಿಯಾಗುತ್ತಿದ್ದಂತೆ ಶೋರೂಮ್ ಸುತ್ತ, ಆದರ್ಶ ಆಸ್ಪತ್ರೆ ಮುಂದೆಲ್ಲ ಜನರು ಅಡ್ಡಾದಿಡ್ಡಿ ಓಡ ತೊಡಗಿದರು. ಈ ವೇಳೆ ಆಟೋ ರಿಕ್ಷಾದೊಳಗೆ ಮಲಗಿದ್ದ ಚಾಲಕ ಪ್ರಕಾಶ್ ಅವರ ಮೇಲೆ ದಾಳಿ ನಡೆಸಿದೆ. ತೀವ್ರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಪ್ರಕಾಶ್ ಮೈ ತುಂಬಾ ಹೆಜ್ಜೇನಿನ ಮುಳ್ಳುಗಳು ತುಂಬಿವೆ.