ಪುತ್ತೂರು: ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಪುತ್ತೂರು ತಾಲೂಕು ವ್ಯಾಪ್ತಿಯ ಎಸ್ಡಿಪಿಐ ಬೆಂಬಲಿತ ಗ್ರಾಮ ಪಂಚಾಯತ್, ನಗರಸಭೆ ಹಾಗೂ ಪಟ್ಟಣ ಪಂಚಾಯತ್ ಸದಸ್ಯರ ಸಭೆ ಫೆ.27ರಂದು ಪ್ರೆಸ್ಟೇಜ್ ಪೆವಿಲಿಯನ್ ಸಭಾಂಗಣದಲ್ಲಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಶ್ರಫ್ ಬಾವು ಅಧ್ಯಕ್ಷತೆಯಲ್ಲಿ ನಡೆಯಿತು.
ಮುಂಬರುವ ಗ್ರಾ.ಪಂ ಚುನಾವಣೆಯಲ್ಲಿ ನಮ್ಮ ಭಾಗವಹಿಸುವಿಕೆ ಹಾಗೂ ಬೇಕಾದ ರೂಪು ರೇಷೆಗಳು, ಪ್ರತಿನಿಧಿಗಳ ವ್ಯಾಪ್ತಿಯ ಸಮಸ್ಯೆಗಳ ಹಾಗೂ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಹಾಗೂ ಪ್ರತಿನಿಧಿಗಳ ಉಸ್ತುವಾರಿಯೂ ಆಗಿರುವ ಉಸ್ಮಾನ್ ಎ.ಕೆ ಸಮಾರೋಪ ಮಾತುಗಳನ್ನಾಡಿದರು. ಸಭೆಯಲ್ಲಿ ಕಬಕ ಬ್ಲಾಕ್ ಕಾರ್ಯದರ್ಶಿ ಸದ್ದಾಂ ಮುರ, ವಿಟ್ಲ ಬ್ಲಾಕ್ ಅಧ್ಯಕ್ಷ ಕಮರುದ್ದಿನ್ ಪುಣಚ, ನಗರ ಸಮಿತಿಯ ಅಧ್ಯಕ್ಷ ಯಹ್ಯಾ ಕೂರ್ನಡ್ಕ, ಪುತ್ತೂರು ನಗರಸಭಾ ಸದಸ್ಯೆ ಫಾತಿಮತ್ ಝುಹ್ರಾ ಬನ್ನೂರು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಶಾಕಿರಾ ವಿಟ್ಲ ಹಾಗೂ ವಿವಿಧ ಗ್ರಾ.ಪಂನ ಸದಸ್ಯರು ಉಪಸ್ಥಿತರಿದ್ದರು. ಕುಂಬ್ರ ಬ್ಲಾಕ್ ಅಧ್ಯಕ್ಷ ರಿಯಾಝ್ ಬಳಕ್ಕ ಸ್ವಾಗತಿಸಿ ವಂದಿಸಿದರು.